ಮಹಿಳೆ ಹತ್ಯೆ; ಪತ್ತೆಹಚ್ಚಿದ ಪೊಲೀಸರು

ಕೋಲಾರ,ಅ,೧೩- ಕಳೆದ ನಾಲ್ಕು ದಿನಗಳ ಹಿಂದೆ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ ಬೆಂಗಳೂರು ಮಾರ್ಗದಲ್ಲಿನ ಚೆಲುವನ ಹಳ್ಳಿಯಲ್ಲಿ ನಡೆದಿದ್ದ ಮಹಿಳೆಯ ಹತ್ಯೆಯನ್ನು ಪತ್ತೆಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.


ತಾಲ್ಲೂಕಿನ ನರಸಾಪುರ ಸಮೀಪದ ಬೆಳ್ಳೂರಿನ ಮಹಿಳೆ ಮಾಲಾ (೪೦) ಎಂಬುವರ ಶವ ಬುಧವಾರ ಚುಂಚನದೇನಹಳ್ಳಿ ಗೇಟ್ ಬಳಿ ರಸ್ತೆ ಬದಿಯಲ್ಲಿ ರಕ್ತದ ಮಡುವಿನಲ್ಲಿ ಪತ್ತೆಯಾಗಿತ್ತು. ಶವದ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಲಾಗಿತ್ತು ಈ ಪ್ರಕರಣವನ್ನು ಗ್ರಾಮಾಂತರ ಪೊಲೀಸರು ದಾಖಲಿಸಿ ಕೊಂಡು ಪತ್ತೆ ಕಾರ್ಯಚರಣೆಯಲ್ಲಿ ತೊಡಗಿದಾಗ ಮೃತ ಮಾಲಳ ಜೂತೆ ಮಾಲೂರಿನ ಕೆ.ಎಸ್.ಆರ್.ಟಿ.ಸಿ. ಡಿಪೋ ಮ್ಯಾಕನಿಕ್ ಈರಪ್ಪ ಎಂಬಾತದ ಮೇಲೆ ಸಂಶಯ ಉಂಟಾಗಿತ್ತು.


ಪೊಲೀಸರು ಈರಪ್ಪನನ್ನು ವಿಚಾರಣೆಗೆ ಒಳ ಪಡೆಸಿದಾಗ ಮಾಲಾಳನ್ನು ತಾನೇ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಮಾಲಾಗೆ ಮದುವೆಯಾಗಿ ಇಬ್ಬರು ಮಕ್ಕಳಿದ್ದು ಕೆಲ ವರ್ಷಗಳಿಂದ ತನ್ನ ಗಂಡನಿಂದ ದೂರವಾಗಿದ್ದಳು. ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಾ ಜೀವನ ಸಾಗಿಸುತ್ತಿದ್ದಳು. ಈಕೆಯ ದೂರದ ಸಂಬಂಧಿ ಈರಪ್ಪ ಎಂಬುವುದು ತಿಳಿದು ಬಂದಿದೆ.


ಕಳೆದ ಜನವರಿ ಮಾಹೆಯಲ್ಲಿ ಈರಪ್ಪನ ಮೊಮ್ಮಗನ ನಾಮಕರಣದಲ್ಲಿ ಮಾಲಾಳ ಪರಿಚಯವಾಗಿತ್ತು. ನಂತರದಲ್ಲಿ ಇಬ್ಬರ ನಡುವೆ ಪರಿಚಯವು ಸಲುಗೆಗೆ ತಿರುಗಿತ್ತು. ಮಾಲಾಳ ಬಳಿ ಇರುವ ಚಿನ್ನದ ಅಭರಣಗಳ ಮೇಲೆ ಈರಪ್ಪನ ಕಣ್ಣು ಬಿದಿತ್ತು, ತಾನು ಮಾಡಿರುವ ಸಾಲಗಳನ್ನು ತೀರಿಸಲು ಮಾಲಾಳ ಬಳಿ ಇರುವ ಚಿನ್ನಾಭರಣಗಳಿಂದ ಸಾಧ್ಯವೆಂದು ತಿಳಿದು ಅಕೆಯನ್ನು ಕೆಲಸಕ್ಕೆ ರಜೆ ಹಾಕು ಬಾಯಿಕೊಂಡ ಗಂಗಮ್ಮ ದೇವಾಸ್ಥಾನಕ್ಕೆ ಹೋಗಿ ಬರೋಣಾ ಬರುವಾಗ ನಿನ್ನಲ್ಲಿರುವ ಅಭರಣಗಳನ್ನು ಹಾಕಿ ಕೊಂಡು ಬಾ ಚೆನ್ನಾಗಿ ಕಾಣಿಸುತ್ತೀಯ ಎಂದು ಅಕೆಯನ್ನು ಹೊಗಳಿ ಅಟ್ಟಾಕ್ಕೆರಿಸಿದ್ದನು.


ಬುಧವಾರ ದೇವಸ್ಥಾನಕ್ಕೆ ಹೋಗಲು ಬೆಳಗ್ಗೆ ೬ ಗಂಟೆಗೆಲ್ಲಾ ಮನೆಯಿಂದ ಹೊರಟಿದ್ದಳು. ಅಕೆಯನ್ನು ಚುಂಚದೇನಹಳ್ಳಿ ರಸ್ತೆ ಬದಿಯ ನಿರ್ಜನ ಪ್ರದೇಶದಲ್ಲಿ ಕರೆದು ಕೊಂಡು ಹೋದ ಈರಪ್ಪ ಮೊದಲೇ ಸಿದ್ದ ಪಡೆಸಿ ಕೊಂಡು ಬಂದಿದ್ದ ಸುತ್ತಿಗೆಯಿಂದ ಅಕೆಯ ತಲೆ ಮೇಲೆ ಹೊಡೆದು ಕೆಳಗೆ ಬಿದ್ದ ನಂತರ ಅಕೆಯ ಮೇಲೆ ರಸ್ತೆಯಲ್ಲಿ ಬಿದ್ದಿದ್ದ ಕಲ್ಲನ್ನು ತಲೆ ಮೇಲೆ ಎತ್ತಿ ಹಾಕಿ ಕೊಲೆ ಮಾಡಿ ಅಕೆ ಧರಿಸಿದ್ದ ಚಿನ್ನದ ಅಭರಣಗಳನ್ನು ಕಸಿದು ಕೊಂಡು ಪರಾರಿಯಾಗಿದ್ದನು ಎಂಬುವುದು ತನಿಖೆಯಿಂದ ತಿಳಿದು ಬಂದಿದೆ.


ಸಾಲಗಾರರ ಕಾಟದ ಒತ್ತಡವನ್ನು ತಪ್ಪಿಸಿ ಕೊಳ್ಳಲು ಈ ಕೃತ್ಯ ಮಾಡುವುದು ತನಗೆ ಅನಿವಾರ್ಯವಾಗಿತ್ತು ಬೇರೆ ಮಾರ್ಗವೇ ಇರಲಿಲ್ಲ ಎಂದು ಈರಪ್ಪ ತಾನು ಮಾಡಿರುವ ಕೊಲೆಯ ಬಗ್ಗೆ ಪೊಲೀಸರಿಗೆ ಸಂಕ್ಷಿಪ್ತವಾಗಿ ವಿವರಿಸಿದ್ದಾನೆ. ಪೊಲೀಸರು ಈರಪ್ಪನ ವಿರುದ್ದ ಪ್ರಕರಣ ದಾಖಲಿಸಿ ನ್ಯಾಯಾಲಯದ ಮುಂದೆ ಹಾಜರುಪಡೆಸಿದಾಗ ನ್ಯಾಯಾಲಯವು ನ್ಯಾಯಾಂಗ ಬಂಧನಕ್ಕೆ ಆದೇಶಿಸಿದೆ.