ಮಹನೀಯರ ಮಾರ್ಗದರ್ಶನ ಒಂದಿದ್ದರೇ ಜಗತ್ತನ್ನೇ ಗೆಲ್ಲಬಹುದು : ಹಮೀದ ಮುಶ್ರೀಫ್

ಸಂಜೆವಾಣಿ ವಾರ್ತೆ,
ವಿಜಯಪುರ,ಅ.೬:ರಾಷ್ಟçಪಿತ ಮಹಾತ್ಮಾ ಗಾಂಧೀಜಿಯವರು ಶಾಂತತೆಯನ್ನು ಅಳವಡಿಸಿಕೊಂಡು ಜಗತ್ತಿಗೆ ಮಾದರಿಯಾಗಿದ್ದಾರೆ ಎಂದು ಕಾಂಗ್ರೇಸ್ ಮುಖಂಡ ಹಮೀದ ಮುಶ್ರೀಫ್À ಹೇಳಿದರು.
ನಗರದ ಚಾಂದನಿ ಮಂಗಲ ಕಾರ್ಯಾಲಯ ಸುವಿಧಾ ಸಾಮಾಜಿಕ ಸಂಸ್ಥೆವತಿಯಿAದ ರಾಷ್ಟçಪಿತ ಮಹಾತ್ಮಾ ಗಾಂಧೀಜಿ ಹಾಗೂ ಲಾಲಬಹಾದ್ಧೂರ ಶಾಸ್ತಿçà ಅವರ ಜನ್ಮ ದಿನಾಚರಣೆ ಪ್ರಯುಕ್ತ ವಿಶ್ವಶಾಂತಿಗಾಗಿ ಕವಿಗೋಷ್ಠಿ (ಮುಶಾಯಿರಾ) ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಿದ್ದರು.
ನಾವು ಯಾವುದೇ ಸಂದರ್ಭದಲ್ಲಿ ಒತ್ತಡಕ್ಕೆ ಮಣಿಯದೇ ಬರುವ ಸಮಸ್ಯೆಯನ್ನು ಶಾಂತಿಯುತವಾಗಿ ಎದರುಸಿದರೆ ಮುಂಬರುವ ಸಮಸ್ಯೆಗೆ ವಿರಾಮ ಹೇಳಬಹುದು. ಇಂದಿನ ಯುವಕರು ಇದನ್ನು ಮನಗಂಡು ಮಹನೀಯರ ಮಾರ್ಗದರ್ಶನ ಒಂದಿದ್ದರೇ ಜಗತ್ತನ್ನೇ ಗೆಲ್ಲಬಹುದು ಎಂಬುವುದು ಅರಿಯಬೇಕು ಎಂದರು.
ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷ ಫಯಾಜ್ ಕಲಾದಗಿ ಮಾತನಾಡಿ, ಇಂದಿನ ಯುವ ಪೀಳಿಗೆಗೆ ದೇಶಕ್ಕಾಗಿ ತ್ಯಾಗ, ಬಲಿದಾನ ಮಾಡಿದ ದಾರ್ಶನಿಕರ ಜೀವನವನ್ನು ನಾವೆಲ್ಲರೂ ಸ್ಮರಿಸಬೇಕು. ದೇಶದ ಅಭಿವೃದ್ಧಿಗಾಗಿ ಯುವಕರ ಪಾತ್ರ ಬಹಳ ಮುಖ್ಯವಾಗಿದೆ. ಯಾವುದೇ ದುಶ್ಚಟಕ್ಕೆ ಬಲಿಯಾಗದೇ ಸಮಾಜಕ್ಕೆ ನಾವೆಲ್ಲರೂ ಸಂದೇಶ ಸಾರವಂತಹ ಕೆಲಸ ಮಾಡಬೇಕಾಗಿದೆ. ಈ ಹಿನ್ನೆಲೆ ನಮ್ಮ ರಾಷ್ಟಿçÃಯ ನಾಯಕರಾದ ಮಹಾತ್ಮಾ ಗಾಂಧೀಜಿ, ಶಾಸ್ತಿçÃಯವರ ಕೊಡುಗೆ ಅನನ್ಯವಾಗಿದೆ ಎಂದರು.
ಈ ಸಂದರ್ಭದಲ್ಲಿ ಕರವೇ ಮುಖಂಡÀ ಎಂ.ಸಿ. ಮುಲ್ಲಾ ಮಾತನಾಡಿದರು.
ವೇದಿಕೆಯ ಮೇಲೆ ಎಸ್.ಎಮ್. ಪಾಟೀಲ (ಗಣಿಯಾರ), ಆಝಾದ ಪಟೇಲ, ಸಜ್ಜಾದೇಪೀರ ಮುಶ್ರೀಫ್, ಶಂಕರಗೌಡ ಹಿರೇಗೌಡರ, ಜಮೀರ ಬಾಂಗಿ, ಮೋಮಿನ ಕಲಾದಗಿ, ಇದ್ರೂಸ್ ಬಕ್ಷಿ, ಎಸ್.ಎ. ಜಮಾದಾರ, ಶಬ್ಬೀರ ಢಾಲಾಯತ, ಇಲಿಯಾಸ್ ಸಿದ್ಧಿಕಿ, ಮಹಾದೇವ ರಾವಜಿ, ಜಮೀರ ಗೋಲೆವಾಲೆ, ಹಮೀದ ಅಥಣಿ ಮುಂತಾದವರು ವೇದಿಕೆಯ ಮೇಲೆ ಉಪಸ್ಥಿತರಿದ್ದರು.
ಕಲಬುರಗಿ, ಶಿವಮೊಗ್ಗಾ, ಬೀದರ, ಸೊಲ್ಲಾಪೂರ ಕವಿಗಳು ಕವನ ವಾಚಿಸಿದರು.
ಕಾರ್ಯಕ್ರಮದಲ್ಲಿ ಎಚ್.ಎಸ್. ಕಬಾಡೆ, ಮಹ್ಮದ್‌ನಸ್ಸೀಂ ರೋಜಿನದಾರ, ಮಹ್ಮದಸಾದೀಕ ಜಾನ್ವೇಕರ, ಅಕ್ತರಹುಸೇನ ಮುತವಲ್ಲಿ, ದಾದಾಪೀರ ಮುಜಾವರ, ಸಂತೋಷ ಮುಧೋಳ, ಫಿದಾ ಕಲಾದಗಿ, ಅಕ್ರಂ ಮಾಶ್ಯಾಳಕರ, ಅನ್ವರ ಜಮಾದಾರ, ದಸ್ತಗೀರ ಸಾಲೋಟಗಿ, ದಸ್ತಗೀರ ಶಾನವಾಲೆ, ಅಬೂಬಕರ್ ಅಂಬರಖಾನೆ, ಅಬ್ದುಲನಬಿ ಜಮಾದಾರ, ಲತೀಫ್ ಕಲಾದಗಿ, ಎಸ್.ಕೆ. ಇನಾಮದಾರ, ಪರವೇಜ ಕಲಾದಗಿ, ಆಝಮ್ ಶೇಖ ಮುಂತಾದವರು ಇದ್ದರು.ಸಾಯೆಫ್ ಅವಟಿ ನಿರೂಪಿಸಿದರು. ಮುಜಿಮಿಲ್ ಮುಲ್ಲಾ ವಂದಿಸಿದರು.