ಕ್ರೀಡೆಗಳಲ್ಲಿ ಸೋಲು ಗೆಲುವು ಸಹಜ ;ಮಾಲತಿ

ಕೋಲಾರ,ಅ,೧೧- ಕ್ರೀಡೆಗಳಲ್ಲಿ ಸೋಲು ಗೆಲುವು ಸಹಜವಾದರೂ ಸ್ವರ್ಧೆಗಳಲ್ಲಿ ಭಾಗವಹಿಸುವುದು ಮುಖ್ಯವಾಗಿರುತ್ತದೆ. ಕ್ರೀಡಾಪಟುಗಳು ಶಾಲಾ ಮಟ್ಟದಿಂದ ಹೋಬಳಿ ಮಟ್ಟಕ್ಕೆ ಆಯ್ಕೆಯಾಗಿ ಈಗಾ ತಾಲ್ಲೂಕು ಮಟ್ಟದ ಸ್ವರ್ಧೆಯಲ್ಲಿ ಭಾಗವಹಿಸುತ್ತಿರುವುದರಲ್ಲಿ ಪರಿಶ್ರಮ ಅವಲಂಬಿತವಾಗಿದೆ. ಕ್ರೀಡೆಗಳಿಂದ ದೈಹಿಕವಾಗಿ ಮತ್ತು ಮಾನಸಿಕವಾಗಿ ಸಧೃಡವಾಗಲಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ತಾಲ್ಲೂಕು ಕ್ರೀಡಾ ಸಮಿತಿ ಅಧ್ಯಕ್ಷರಾದ ಮಧು ಮಾಲತಿ ಪಡುವಣೆ ಅಭಿಪ್ರಾಯ ಪಟ್ಟರು.


ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್ ಶಾಲಾ ಶಿಕ್ಷಣ ಇಲಾಖೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ಕಚೇರಿ ಹಾಗೂ ಕರ್ನಾಟಕ ರಾಜ್ಯ ಹಾಗೂ ತಾಲ್ಲೂ ದೈಹಿಕ ಶಿಕ್ಷಕ ಶಿಕ್ಷಕರ ಸಂಘದ ಸಂಯುಕ್ತಾಶ್ರಯದಲ್ಲಿ ೨೦೨೫-೨೬ನೇ ಸಾಲಿನ ತಾಲ್ಲೂಕು ಮಟ್ಟದ ೧೪ ಮತ್ತು ೧೭ನೇ ವಯೋಮಿತಿಯೊಳಗಿನ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಬಾಲಕ/ಬಾಕಿಯರ ಕ್ರೀಡಾ ಕೊಟವನ್ನು ಜ್ಯೋತಿ ಬೆಳಗುವ ಮೂಲಕ ಉದ್ಗಾಟಿಸಿ ಅವರು ಮಾತನಾಡಿದರು.


ಶಿಕ್ಷಣದಷ್ಟೆ ಕ್ರೀಡೆಗಳು ಮುಖ್ಯವಾಗಿದೆ. ಭವಿಷ್ಯದಲ್ಲಿ ಶಿಕ್ಷಣದ ಅಧಾರದ ಮೇರೆಗೆ ಸಿಗಲಿರುವ ಉದ್ಯೋಗಗಳಲ್ಲಿ ಕ್ರೀಡೆಗಳಿಗೂ ಉದ್ಯೋಗದಲ್ಲಿ ಮೀಸಲಾತಿ ಸೌಲಭ್ಯ ಇರುವುದನ್ನು ಪ್ರತಿಭಾವಂತ ಕ್ರೀಡಾಪಟುಗಳು ಸದ್ಬಳಿಸಿ ಕೊಳ್ಳುವಂತಾಗ ಬೇಕು. ಕೇಂದ್ರ ಮತ್ತು ರಾಜ್ಯ ಸರ್ಕಾರದ ಅನೇಕ ಉದ್ಯೋಗಗಳಲ್ಲಿ ಕ್ರೀಡಾ ಮೀಸಲಾತಿ ಸೌಲಭ್ಯಗಳನ್ನು ಪಡೆದು ಬದುಕು ಕಟ್ಟಿ ಕೊಂಡವರಲ್ಲಿ ನಾನು ಸಹ ಓರ್ವಳಾಗಿರುವೆ ಎಂದು ಉದಾಹರಿಸಿದ ಅವರು ಕ್ರೀಡೆಗಳು ಉದ್ಯೋಗದ ಅವಕಾಶಗಳಿಗೆ ಪೂರಕವಾಗಿದೆ ಎಂದು ಪ್ರತಿಪಾದಿಸಿದರು,


ಸರ್ಕಾರಿ ಪ್ರೌಢ ಶಾಲಾ ಸರ್ಕಾರಿ ಶಿಕ್ಷಕರ ಸಂಘದ ಜಿಲ್ಲಾ ಅಧ್ಯಕ್ಷ ಹೆಚ್.ಶಿವಕುಮಾರ್ ಮಾತನಾಡಿ ಕ್ರೀಡೆಗಳಲ್ಲಿ ಸೋಲು ಗೆಲುವು ಒಂದೇ ನಾಣ್ಯದ ಎರಡು ಮುಖಗಳಾಗಿದೆ. ಕ್ರೀಡೆಯಲ್ಲಿ ಸೋತವರು ಹತಾಶರಾಗದೆ ನಿರಂತರ ಪ್ರಯತ್ನ ದಿಂದ ನಿಮ್ಮ ಸಾಧನೆ, ನಿಮ್ಮ ಗುರಿ ತಲುಪಲು ಸಾಧ್ಯ ಇಂದಿನ ಸೋಲು ಮುಂದಿನ ಗೆಲುವಿನ ಮೆಟ್ಟಲು ಅಗಲಿದೆ ಎಂದರು.


ಕೋಲಾರ ತಾಲ್ಲೂಕು ಕ್ರೀಡಾ ಕೊಟದಲ್ಲಿ ಹೋಳೂರು, ಹುತ್ತೂರು, ನರಸಾಪುರ, ಸುಗಟೂರು, ವಕ್ಕಲೇರಿ, ವೇಮಗಲ್ ಕೋಲಾರ ಗ್ರಾಮಾಂತರ ಹಾಗೂ ನಗರ ಸೇರಿದಂತೆ ೮ ಹೋಬಳಿಗಳಾಗಿ ಗುರುತಿಸಿದ್ದು ೮ ತಂಡಗಳು ಕ್ರೀಡಾ ಕೊಟದಲ್ಲಿ ಭಾಗವಹಿಸಿದ್ದರು.


ವೇದಿಕೆಯಲ್ಲಿ ಬಿ.ಆರ್.ಸಿ. ಕೇಂದ್ರದ ಪ್ರಭಾರಿ ಕ್ಷೇತ್ರ ಸಮನ್ವಯಾಧಿಕಾರಿ ರಾಧಮ್ಮ. ಬಿ.ಎಂ. ದೈಹಿಕ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ವಿ. ಮುರಳಿ ಮೋಹನ್. ಮುಖ್ಯೋಪಾದ್ಯಾಯರ ಸಂಘದ ಜಿಲ್ಲಾಧ್ಯಕ್ಷ ಸಿ.ರಮೇಶ್ ಗೌಡ, ಪದಾಧಿಕಾರಿಗಳಾದ ಶ್ರೀನಿವಾಸ್, ಆರ್.ಮಂಜುಳ, ಅಂಜನೇಯ, ಎ.ಸದಾನಂದ, ಎಸ್.ನಾರಾಯಣಸ್ವಾಮಿ, ಎಸ್.ಸತೀಶ್ ಕುಮಾರ್, ಸಂತೋಷ್ ಕುಮಾರ್, ಮುಂತಾದವರು ಉಪಸ್ಥಿತರಿದ್ದರು.