
ಆಳಂದ: ಡಿ.6:ಪಟ್ಟಣದ ಜ್ಯೂನಿಯರ್ ಕಾಲೇಜಿನಲ್ಲಿ ಆಯೋಜಿಸಿದ್ದ ಪ್ರತಿಭಾ ಕಾರಂಜಿ-2025 ತಾಲೂಕು ಮಟ್ಟದ ಕಲಾವೋತ್ಸವ ಸ್ಪರ್ಧೆಗಳು ಯಶಸ್ವಿಯಾಗಿ ನಡೆದವು.
ಈ ಸಂದರ್ಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ನೀತಿಮತ್ತು ಯೋಜನಾ ಆಯೋಗದ ಉಪಾಧ್ಯಕ್ಷರಾದ ಶಾಸಕ ಬಿ.ಆರ್. ಪಾಟೀಲ್ ಅವರು, “ಗ್ರಾಮೀಣ ಭಾಗದ ಮಕ್ಕಳಲ್ಲಿ ಅಪಾರ ಪ್ರತಿಭೆ ಇದೆ. ಆದರೆ ಅವಕಾಶಗಳ ಕೊರತೆಯಿದೆ. ರಾಜ್ಯ ಸರ್ಕಾರ ಈಗ ತಾಲೂಕು, ಜಿಲ್ಲೆ, ರಾಜ್ಯ ಮಟ್ಟದವರೆಗೂ ಪ್ರತಿಭಾ ಕಾರಂಜಿ ಆಯೋಜಿಸುತ್ತಿದೆ. ನಮ್ಮ ಆಳಂದ್ ತಾಲೂಕಿನ ಮಕ್ಕಳು ಈ ವೇದಿಕೆಯಲ್ಲಿ ತಮ್ಮ ಕಲೆ, ಕ್ರೀಡೆ, ಸಂಸ್ಕøತಿ ಪ್ರತಿಭೆ ತೋರಿ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಗೆದ್ದು ತಾಲೂಕಿನ ಹೆಸರು ಗಳಿಸಬೇಕು” ಎಂದು ಕರೆ ನೀಡಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿ ವಿ. ರಂಗಸ್ವಾಮಿ ಶೆಟ್ಟಿ ಅವರು, “ಪ್ರತಿಭಾ ಕಾರಂಜಿ ಕೇವಲ ಸ್ಪರ್ಧೆ ಅಲ್ಲ, ಮಕ್ಕಳಲ್ಲಿರುವ ಗುಪ್ತ ಪ್ರತಿಭೆಯನ್ನು ಹೊರತೆಗೆಯುವ ಮಹೋತ್ಸವ. ಅವಕಾಶ ಸಿಕ್ಕರೆ ಆಳಂದ್ ತಾಲೂಕಿನ ಮಕ್ಕಳು ರಾಷ್ಟ್ರ ಮಟ್ಟದಲ್ಲೂ ಪ್ರಶಸ್ತಿ ಗೆಲ್ಲುತ್ತಾರೆ ಎಂಬುದು ನನ್ನ ದೃಢ ನಂಬಿಕೆ. ಎಲ್ಲಾ ಶಿಕ್ಷಕರು, ಪಾಲಕರು ಸೇರಿ ಮಕ್ಕಳನ್ನು ಪೆÇ್ರೀತ್ಸಾಹಿಸಬೇಕು” ಎಂದು ಆಶಯ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಜಿಪಂ ಮಾಜಿ ಸದಸ್ಯ ಸಿದ್ಧರಾಮ ಪ್ಯಾಟಿ, ದೈಹಿಕ ಶಿಕ್ಷಣ ತಾಲೂಕು ಅಧಿಕಾರಿ ಅರವಿಂದ ಬಾಸಗಿ, ಸಮನ್ವಯ ಅಧಿಕಾರಿ ಅಣ್ಣಪ್ಪ ಹಾದಿಮನಿ, ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಖಜೂರ್ಗಿ, ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ಮರಿಯಪ್ಪ ಬಡಿಗೇರ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ನರಸಪ್ಪ ಬಿರಾದಾರ್, ಕಾರ್ಯದರ್ಶಿ ಮನ್ಸೂರ್ ಮುಜಾವರ್, ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಸತೀಶ್ ಷಣ್ಮುಖ, ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದ ಅಧ್ಯಕ್ಷೆ ಶೈಲಜಾ ಪೂಮಾಜಿ, ನೌಕರ-ಪತ್ತಿನ ಸಂಘದ ಅಧ್ಯಕ್ಷ ಚಂದ್ರಶೇಖರ ಪೂಜಾರಿ, ನೋಡಲ್ ಅಧಿಕಾರಿ ಪಂಕಜ ಪಾಟೀಲ್, ಬಿನಾಜಿ ಸೂರ್ಯವಂಶಿ, ಲೋಕಪ್ಪ ಜಾಧವ್, ದಯಾನಂದ ಬಡಿಗೇರ್, ಮಲ್ಲಿನಾಥ ಮುನ್ನಳಿ, ಮಹಾದೇವ ಗುಣಕಿ, ಲಾಲ್‍ಸಾಬ್, ಇμರ್Áದ್ ಬೇಗಂ, ಶ್ರೀಮಂತ ಪಾಟೀಲ್ ಸೇರಿದಂತೆ ತಾಲೂಕಿನ ಎಲ್ಲಾ ಶೈಕ್ಷಣಿಕ ಸಂಘಟನೆಗಳ ಪದಾಧಿಕಾರಿಗಳು, ಮುಖ್ಯೋಪಾಧ್ಯಾಯರು, ಶಿಕ್ಷಕ-ಶಿಕ್ಷಕಿಯರು ಹಾಗೂ ಪ್ರದರ್ಶನ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಇμರ್Áದ್ ಬೇಗಂ ಸ್ವಾಗತಿಸಿದರು, ಶ್ರೀಮಂತ ಪಾಟೀಲ್ ನಿರೂಪಿಸಿದರು. ಚುಕ್ಕಿ ಚುಕ್ಕಿ ನಕ್ಷತ್ರಗಳಂತೆ ತಾಲೂಕಿನ ಹಲವು ಶಾಲೆಗಳಿಂದ ಆಗಮಿಸಿದ ನೂರಾರು ಮಕ್ಕಳು ನೃತ್ಯ, ಸಂಗೀತ, ನಾಟಕ, ಚಿತ್ರಕಲೆ, ಭಾಷಣ, ಕ್ರೀಡೆ ಸೇರಿದಂತೆ ವಿವಿಧ ಸ್ಪರ್ಧೆಗಳಲ್ಲಿ ತಮ್ಮ ಅಪೂರ್ವ ಪ್ರತಿಭೆ ಮೆರೆದರು. ಮಕ್ಕಳ ಉತ್ಸಾಹ, ಶಿಕ್ಷಕರ ಶ್ರಮ, ಪಾಲಕರ ಬೆಂಬಲದಿಂದ ಇಡೀ ಉತ್ಸವ ರಂಗೇರಿತ್ತು. ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗುವ ವಿಜೇತರ ಪಟ್ಟಿ ಪ್ರಕಟವಾಗಲಿದೆ.































