ಇಂಡಿ:ಅ.12: ಬೆಳಂಬೆಳಿಗ್ಗೆ ಪಟ್ಟಣದ ಸರಕಾರಿ ಕಚೇರಿಗಳಿಗೆ ಧಿಡೀರನೆ ಲೋಕಾಯುಕ್ತ ಅಧಿಕಾರಿಗಳು ಧಾಳಿ ನಡೆಸಿದರು.
ಕಾರ್ಯಾಲಯಗಳು ಪ್ರಾರಂಭವಾಗುತ್ತಿದಂತೆ ಏಕಾಎಕೀ ಧಿಡೀರನೆ ಕರ್ನಾಟಕ ರಾಜ್ಯ ಲೋಕಾಯುಕ್ತ ನ್ಯಾಯ ಮೋರ್ತಿ ಶಿವರಾಜ ಪಾಟೀಲ ಹಾಗೂ ತಂಡ ಪುರಸಭೆ ಕಡತಗಳು ವೀಕ್ಷಣೆ ಮಾಡಿದ ಅವರ ತಂಡ ಮಿನಿ ವಿಧಾನಸೌಧಾದಲ್ಲಿರುವ ವಿವಿಧ ಕಚೇರಿಗಳಿಗೆ ಭೇಟಿ ನೀಡಿ ಕಡತಗಳನ್ನು ಪರಿಶೀಲಿಸಿ ಕೆಲ ಕಡತಗಳ ವಿಳಂಭಕ್ಕೆ ಕಾರಣಗಳೇನು ಎಂದು ಲೋಕಾಯುಕ್ತರಾದ
ಶಿವರಾಜ ಪಾಟೀಲ ಹಾಗೂ ಅವರ ತಂಡ ತಹಶೀಲ್ದಾರ ಕಾರ್ಯಾಲಯದ ಅಧಿಕಾರಿಗಳಿಗೆ ಪ್ರಶ್ನಿಸಿದರು. ನಂತರ ಸಬ್ ರಜೀಸ್ಟಾರ್‍ಕಚೇರಿ ಮೇಲೆ ಧಾಳಿ ಮಾಡಿದ ಅಧಿಕಾರಿಗಳು ಅಲ್ಲಿನ ಕಡತಗಳನ್ನು ಪರಿಶೀಲನೆ ಮಾಡಿ ನೊಂದಣಾಧಿಕಾರಿಗಳಿಗೆ ತರಾಟೆಗೆ ತಗೆದುಕೊಂಡರು. ಆಹಾರ ಮತ್ತು ನಾಗರೀಕ ಇಲಾಖೆಗೆ ಭೆಟಿ ನೀಡಿದರು ಇದಾದ ನಂತರ ಪುರಸಭೆ ಕಾರ್ಯಾಲಯಕ್ಕೆ ಭೇಟಿ ನೀಡಿದಾಗ ಸಾರ್ವಜನಿಕರು ಪುರಸಭೆ ನಡೆ ಕಾರ್ಯವೈಖರಿ ಸರಿಯಾಗಿಲ್ಲ, ಸಾರ್ವಜನಿಕರು ಯಾವುದೇ ಕೆಲಸ ಕಾರ್ಯಗಳಿಗೆ ಬಂದರೆ ಅಲೇದಾಡಿ ಸುಸ್ತಾಗುತ್ತದೆ ಎಂದು ದೂರಿದಾಗ ಲೋಕಾಯುಕ್ತ ಅಧಿಕಾರಿ ಶಿವರಾಜ ಪಾಟೀಲ ಗರಂ ಆಗಿ ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿ ಸಾರ್ವಜನಿಕರ ತೊಂದರೆ ಸಹಿಸುವುದಿಲ್ಲ ಎಂದರು.
ಕರ್ನಾಟಕ ರಾಜ್ಯ ಲೋಕಾಯುಕ್ತ ನ್ಯಾಯ ಮೋರ್ತಿ ಶಿವರಾಜ ಪಾಟೀಲ,ಅರುಣ ಪಾಟೀಲ, ಆನಂದ ಪಡಶೆಟ್ಟಿ, ಶರಣಬಸು, ರವಿ.ಪರುಷೋತಮ, ಶಿವರಾಜಸ್ವಾಮಿ ಸೇರಿದಂತೆ ಅನೇಕರಿದ್ದರು.
























