
ಸಂಜೆ ವಾಣಿ ವಾರ್ತೆ
ಜಮಖಂಡಿ :ನ.೧೮:ಕುಡಚಿ ಬಾಗಲಕೋಟೆ ರೈಲು ಮಾರ್ಗಕ್ಕೆ ಯಾಕಿಷ್ಟು ವಿಳಂಬ ದಶಕಗಳಿಮಂಲೂ ನಡೆಯತ್ತ ಬಂದಿರುವ ಈ ಯೋಜನೆಯು ಇನ್ನೂ ಮುಗಿಯುವ ಹಂತಕ್ಕೆ ಬಾರದಿರುವದೇ ವಿಪರ್ಯಾಸವಾಗಿದೆ ದಿನಗಳೆದಂತೆ ಯೋಜನೆಯ ವೆಚ್ಚವೂ ಸಹ ಬಳೆಯುತ್ತಲೇ ಹೋಗುತ್ತದೆ.
ಸ್ವಾತಂತ್ರ‍್ಯ ಪೂರ್ವದಲ್ಲಿ ೧೯೧೧ ರಲ್ಲಿ ಮುಧೋಳ ಮತ್ತು ಜಮಖಂಡಿ ಸಂಸ್ಥಾನಿಕರು ಬ್ರಿಟೀಷರಿಗೆ ಒತ್ತಾಯಿಸಿ ಕುಡಚಿ ಬಾಗಲಕೋಟ ರಾಯಚೂರ ಮಾರ್ಗದ ಸಮೀಕ್ಷೆಯನ್ನು ಮಾಡಿಸಿದ್ದರು ಅದು ಲಾಬದಯಕವಲ್ಲವೆಂದು ಕೈಬಿಟ್ಟಿದ್ದರು. ಮತ್ತೆ ೧೯೧೩ ರಲ್ಲಿ ಸ್ವತಃ ಬ್ರಿಟೀಷರೇ ಮತ್ತೇ ಸಮೀಕ್ಷೆಮಾಡಿ ಅದೂ ಕೂಡಾ ಲಾಭದಾಯಕವಲ್ಲವೆಂದು ಕೈಬಿಟ್ಟಿದ್ದರು.
೧೯೪೭ ರಲ್ಲಿ ಸ್ವಾತಂತ್ರ‍್ಯ ಬಂದಾಗ ದೇಶದ ಎಲ್ಲ ಸಂಸ್ಥಾನಿಕರ ವಿಲೀನದಲ್ಲಿ ಮುಧೋಳ ಮತ್ತು ಜಮಖಂಡಿ ಸಂಸ್ದಥಾನಿಕರು ಮತ್ತೇ ಈ ರೈಲು ಮಾರ್ಗಕ್ಕೆ ಬೇಡಿಕೆಯಿಟ್ಟು ತಮ್ಮ ಸಂಸ್ಥಾನವನ್ನು ವಿಲೀನ ಮಾಡಿದರು.ಆದರೆ ಅದೂ ಕೂಡಾ ನೆರವೇರಲಿಲ್ಲ.
೧೯೪೭ ರಿಂದ ೧೯೮೬ -೮೭ ರಲ್ಲಿ ಅಂದಿನ ಸಂಸದ ದಿ ಎಸ್. ಟಿ.ಪಾಟೀಲ ಸಂಸದ ಭವನದಲ್ಲಿ ಧ್ವನಿ ಮಾತ್ರ ಎತ್ತಿದ್ದರು. ಮುಂದೆ ದಿ ಸಿದ್ದು ನ್ಯಾಮಗೌಡರು ೧೯೯೩ ರಲ್ಲಿ ಸಂಸದರಾಗಿ ಕೇಂದ್ರ ರಾಜ್ಯ ಸಚಿವರಾದಾಗ ಈ ಮಾರ್ಗಕ್ಕೆ ಮರುಹುಟ್ಟು ಬಂತು ಅಂದಿನ ರೇಲ್ವೆ ಸಚಿವರ ಸಿ.ಕೆ ಜಾಫರ ಶರೀಫರು ೧೯೯೩ ರಲ್ಲಿ ಸಮೀಕ್ಷೆ ಮಾಡಿದ ವರದಿ ೧೯೯೪ ರಲ್ಲಿ ಮತ್ತೇ ಲಾಭದಾಯಕವಲ್ಲದ ಮಾರ್ಗವೆಂದು ಉಲ್ಲೇಖಿಸಿದ್ದರು. ನಂತರ ಈ ಮಾರ್ಗಕ್ಕೆ ಹೋರಾಟದ ಹಾದಿಯು ಪ್ರಾರಂಭವಾಯಿತು.
೨೦೦೭ ರಲ್ಲಿ ಕುಡಚಿ ಬಾಗಲಕೋಟೆ ರೇಲ್ವೇ ಅನುಷ್ಠಾನ ಸಮೀತಿ ಪ್ರಾಂಭವಾಗಿ ೨೦೦೮ ರಲ್ಲಿ ಹೋರಾಟಕ್ಕೆ ಮುನ್ನುಡಿಯಿಟ್ಟ ಪರಿಣಾಮವಾಗಿ ೨೦೧೦ ಯುಪಿಎ ಸರಕಾರದಲ್ಲಿ ಈ ಯೋಜನೆಯ ಪರವಾಗಿ ಸಮೀಕ್ಷೆಯನ್ನು ಮಾಡಿಸಲಾಯಿತು ಅದೇ ೨೦೧೦ ರ ರೇಲ್ವೆ ಮುಂಗಡ ಪತ್ರದಲ್ಲಿ ಈ ಮಾರ್ಗಕ್ಕೆ ೮೧೬ ಕೋಟಿ ರೂಗಳ ಅನುದಾನವನ್ನೂ ಸಹ ನೀಡುವದರ ಜೊತೆಗೆ ೨೦೧೭ ರಲ್ಲಿ ಕಾಮಗಾರಿಯು ಪೂರ್ಣಗೊಳ್ಳಬೇಕೆನ್ನುವ ಒಪ್ಪಂದವೂ ಸಹ ಮಾಡಿದ್ದರು ಎನ್ನಲಾಗಿದೆ. ಆದರೂ ಸಹ ಆ ಏಳು ವರ್ಷದಲ್ಲಿ ಈ ಕಾಮಗಾರಿಯು ಒಂದು ಇಂಚೂ ಸಹ ಮುಗಿಯಲ್ಲಿಲ್ಲ.
ರೇಲ್ವೆ ಅನುಷ್ಠಾನ ಸಮೀತಿ ಅಧ್ಯಕ್ಷ ಕುತುಬುದ್ದೀನ ಕಾಜಿಯವರ ಹೋರಾಟ ತೀಕ್ಷಣವಾದಾಗ ಆಗೊಂದಿಷ್ಟು ಈಗೊಂದಿಷ್ಟು ಅನುದಾನವನ್ನು ನೀಡುತ್ತ ಬಂದಿದ್ದು ಪ್ರಸ್ತುತ ಇವರ ಹೋರಾಟದ ಫಲವಾಗಿ ಈ ಮಾರ್ಗವು ಬಾಲಕೋಟೆಯಿಂದ ಲೋಕಾಪೂರವರೆಗೆ ಮಾತ್ರ ಬಂದು ನಿಂತಿದೆ. ಅಂದು ಕೇವಲ ೮೧೬ ಕೋಟಿ ರೂಗಳ ಅಂದಾಜು ವೆಚ್ಚದ ಈ ಕಾಮಗಾರಿಯು ಇಮದು ೫ ಸಾವಿರ ಕೋಟಿ ರೂಗಳಿಗೆ ಬಂದು ನಿಂತಿದೆ.
ಈ ಮಾಗರ್ಹಕ್ಕೆ ಒಟ್ಟು ೩೨೦೦ ಎಕರೆ ಜಮೀನು ಕೂಡಾ ಸ್ವಾಧಿನ ಪಡಿಸಿಕೊಂಡಿದ್ದಾರೆ ಅದರಲ್ಲಿ ೭೦ ಎಕರೆ ಮಾತ್ರ ಉಳಿದಿದ್ದು ಆದರೂ ಕೂಡಾ ಸ್ವಾಧಿನ ಪ್ರಕ್ರೀಯೆ ನಡೆದಿದೆ ಒಟ್ಟಾರೆಯಾಗಿ ಭೂಸ್ವಾಧಿನಕ್ಕೆ ಯಾವುದೆ ತೊಂದರೆಯಗಿಲ್ಲ ಆದರೆ ಕಾಮಗಾರಿಯು ಮಾತ್ರ ನಡೆಯುತ್ತಿಲ್ಲ.
ಈ ಮಾರ್ಗಕ್ಕೆ ಅಂದು ೪ ಕೋಟಿ ಇದ್ದ ವೆಚ್ಚ ಇಂದು ೩೦ ಕೋಟಿ ರೂಗೆ ಬಂದು ನಿಂತಿದೆ. ೧ ಕಿಮೀ ಮಾರ್ಗಮಾಡಲು ಸುಮಾರು ೧೦ಮಿ ಎಕರೆ ಜಮೀನು ಬೇಕು ಅದರಂತೆ ೧೪೨ ಕಿಮಿಗೆ ೧೪೨೦ ಎಕರೆ ಕೇಲಕವ ರೈಲು ಕಂಬಿಗಾಗಿ ಉಳಿದಂತೆ ನಿಲ್ದಾಣಕ್ಕೆ ೩೦ ಎಕರೆ ಜಮೀನು ಬೇಕು ಎಲ್ಲಿಯಾದರೂ ಲೆವಲ ಕ್ರಾಸಿಂಗ ಮಾಡಲು ಸುಮಾರು ೬೦ ಎಕರೆ ಜಮೀನು ಬೇಕಾಗುತ್ತಾರೆ ಒಟ್ಟಾರೆಯಾಗಿ ಈ ಮಾರ್ಗದ ಭೂಸ್ವಾಧೀನವು ಮುಗಿದು ಹೋಗಿದೆ ಆದರೆ ಕಾಮಗಾರಿಯು ಮತ್ರ ಬಾಕಿಯಿದೆ.
ಪ್ರಸ್ತುತ ಲೋಕಾಪೂರದಿಂದ ಜಮಖಂಡಿಯವರೆಗೆ ಮಾರ್ಗದ ಕಾಮಗಾರಿಯು ಕುಂಟುತ್ತಸಾಗಿದೆ ತೀವೃಗತಿಯಲ್ಲಿ ಮಾಡಿದರೆ ೨೦೧೬ ರಲ್ಲಿ ಮುಗಿಯಬಹುದು.
ಕುತುಬುದ್ದೀನ ಖಾಜಿ ರೇಲ್ವೇ ಹೋರಾಟ ಸಮೀತಿ ರಜ್ಯಾಧ್ಯಕ್ಷ ಕಳೆದ ೨೦೦೭ ರಿಮದ ಹೋರಾಟ ಮಾಡುತ್ತಿದ್ದೇವೆ ಅದರ ಫಲವಾಗಿ ಈಗಿಷ್ಟು ಕಾಮಗಾರಿಯು ಆಗಿದೆ. ಆದರೆ ವೇಗದ ಕೆಲಸವು ಆಗುತ್ತಿಲ್ಲ ಸರಕಾರದ ಕರಾರು ಪ್ರಕಾರ ೨೦೨೬ ರಲ್ಲಿ ಈ ಕಾಮಗಾರಿಯನ್ನು ಮುಗಿಸುತ್ತೇವೆಂದು ಹೇಳಿದ್ದಾರೆ ಆದರೆ ಈ ಕೆಲಸದ ನೀಧಾನಗತಿಯನ್ನು ನೋಡಿದರೆ ಇನ್ನೂ ವಿಳಂಬವಗುತ್ತಲೇ ಹೋಗುತ್ತದೆ. ಪೂರ್ಣಗೊಂಡ ಮಾರ್ಗದಲ್ಲಿ ಕೇವಲ ಪ್ಯಾಸೆಂಜರ ರೇಲ್ವೆಯನ್ನಾದರೂ ಪ್ರಾಂಬಿಸಬೇಕು ಇಲ್ಲದಿದ್ದರೆ ನೂರಾರು ಕೋಟಿ ವೆಚ್ಚ ಮಾಡಿದ ನಿಲ್ದಾಣಗಳು ಹಾಳಾಗುವದರ ಜೊತೆಗೆ ಅನೈತಿಕ ತಾಣಗಳಾಗುತ್ತಿವೆ ಈಗಲಾದರೂ ಕೇಂದ್ರ ಸರಕಾರವು ಎಚ್ಚೆತ್ತು ಈ ಮಾರ್ಗದತಗಮನ ಹರಿಸಬೇಕು ಇಲ್ಲದಿದ್ದರೆ ಮತ್ತೇ ಹೋರಾಟದ ಹದಿ ನಮ್ಮದಾಗುತ್ತದೆ ಎಂದು ಹೇಳಿದರು.























