ಹುಳಿಯಾರು, ಆ. ೨೧- ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಹುಳಿಯಾರಿನ ವಿಜಯನಗರ ಕಾರ್ಯಕ್ಷೇತ್ರದ ವಿಜ್ಞೇಶ್ವರ ಜ್ಞಾನವಿಕಾಸ ಕೇಂದ್ರದಲ್ಲಿ ಆರೋಗ್ಯ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು.
ಧರ್ಮಸ್ಥಳ ಸಂಸ್ಥೆಯ ಯೋಜನಾಧಿಕಾರಿಗಳಾದ ರಾಮಚಂದ್ರ ಡಿ. ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಆರೋಗ್ಯ ಸಮಸ್ಯೆಯಿಂದ ಆಕಾಲಿಕ ಮರಣಗಳು ಸಂಭವಿಸುತ್ತಿದ್ದು ಅದಕ್ಕೆ ಮೂಲ ಕಾರಣ ನಮ್ಮ ದೈನಂದಿನ ಆಹಾರ ಪದ್ಧತಿ ಮತ್ತು ಅಧಿಕ ಒತ್ತಡ, ಆರೋಗ್ಯದ ಬಗ್ಗೆಗಿನ ಅಸಡ್ಡೆ. ಹಾಗಾಗಿ ಕಾಯಿಲೆ ಬಂದಾಗ ಆಸ್ಪತ್ರೆಗೆ ಓಡುವುದಕ್ಕೆ ಬದಲು ಆರೋಗ್ಯದ ಬಗ್ಗೆ ನಾವು ಹೆಚ್ಚು ಜಾಗೃಕತರಾಗಬೇಕು ಎಂದು ತಿಳಿಸಿದರು.
ಒಕ್ಕೂಟದ ಅಧ್ಯಕ್ಷರಾದ ಕಿರಣ್ ಕುಮಾರ್ ಮಾತನಾಡಿ ಡಾ.ಡಿ. ವೀರೇಂದ್ರ ಹೆಗ್ಗಡೆಯವರು ರಾಜ್ಯದ ಗ್ರಾಮಾಭಿವೃದ್ಧಿಗೆ ಹಲವು ಕೊಡುಗೆಗಳನ್ನು ನೀಡಿದ್ದಾರೆ. ಪೂಜ್ಯರ ಬಗ್ಗೆ ಹಾಗೂ ಯೋಜನೆ ಕಾರ್ಯಕ್ರಮಗಳ ಬಗ್ಗೆ ಯಾರೋ ತಿಳಿಗೇಡಿಗಳು ಆಡುವ ಮಾತುಗಳಿಗೆ ಕಿವಿಗೋಡದೆ ಮೊದಲಿನಂತೆ ಅಭಿಮಾನ ಇರಲಿ ಎಂದರಲ್ಲದೆ ಸರ್ಕಾರ ಮಾಡಲು ಸಾಧ್ಯವಿಲ್ಲದ ಕಾರ್ಯಗಳನ್ನು ಪೂಜ್ಯರು ಮಾಡುತ್ತಿದ್ದಾರೆ. ಮತ್ತಷ್ಟು ಕಾರ್ಯಕ್ರಗಳನ್ನು ಮಾಡಲು ಪ್ರೋತ್ಸಾಹ ನೀಡಬೇಕು ಎಂದರು.
ಡಾ.ಲಾವಣ್ಯ ಮಾತನಾಡಿ, ಹೃದಯಘಾತಕ್ಕೆ ಕಾರಣ ರಕ್ತದ ಒತ್ತಡದ ಬಗ್ಗೆ ಮಾಹಿತಿ ನೀಡಿದರು ಈ ಕಾರ್ಯಕ್ರಮದಲ್ಲಿ ಬಿಪಿ, ಶುಗರ್, ರಕ್ತ ಪರೀಕ್ಷೆ ಹಾಗೂ ೨೦ ಸದಸ್ಯರು ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಿದರು.
ಈ ಸಂದರ್ಭದಲ್ಲಿ ಒಕ್ಕೂಟದ ಉಪಾಧ್ಯಕ್ಷರು ಸುವರ್ಣಮ್ಮ, ಕೇಂದ್ರದ ಅಧ್ಯಕ್ಷರು ಸುಶೀಲಮ್ಮ, ಜ್ಞಾನವಿಕಾಸ ಸಮನ್ವಯ ಅಧಿಕಾರಿ ಸುನಿತಾ, ಸೇವಾ ಪ್ರತಿನಿಧಿಗಳಾದ ವಿಜಯಮ್ಮ ಗಂಗಮ್ಮ ಮಹಾಲಕ್ಷ್ಮಿ ಮತ್ತಿತರರು ಪಾಲ್ಗೊಂಡಿದ್ದರು.


























