ಯಾದಗಿರಿ,ಅ.೨೮: ಶಾಲಾ ಪ್ರಾರಂಭವಾಗಿ(ಪ್ರಥಮ ಸೆಮೀಷ್ಟರಿ) ಅಂದರೆ ಮೊದಲನೆಯ ಸಂಕಲನಾತ್ಮಕ ಪರಿಕ್ಷೆಗಳು ಮುಗಿದರೂ ಕೂಡ ಇನ್ನೂ ಶಾಲಾ ಮಕ್ಕಳಿಗೆ ಸಮರ್ಪಕವಾಗಿ ಶೂ, ಸಾಕ್ಸ್ ಬಂದಿಲ್ಲ.
ಸರಕಾರವು ಶಾಲಾ ಮಕ್ಕಳಿಗೆ ಉಚಿತವಾಗಿ ಕೊಡುವ ಶೂ, ಸಾಕ್ಸ್ ಇನ್ನೂ ಅವರಿಗೆ ತಲುಪಿಲ್ಲ. ರೈತರ ಮಕ್ಕಳಾಗಲಿ ಹಾಗೂ ಬೇರೆ ಬೇರೆ ಇಲಾಖೆಗಳಲ್ಲಿ ಕೆಲಸಮಾಡುತ್ತಿರುವ ಪಾಲಕ ಪೋಷಕರ ಮಕ್ಕಳಾಗಲಿ ಮತ್ತು ಕೂಲಿ ನಾಲಿ ಮಾಡುತ್ತಿರುವ ಬಡ ಕುಟುಂಬದವರ ಮಕ್ಕಳು ಸರಕಾರಿ ಶಾಲೆಗೆ ಓದಲು ಬರುತ್ತಿದ್ದಾರೆ. ಆದರೆ ಈವರ್ಷ ಶಾಲೆ ಪ್ರಾರಂಭವಾಗಿ ತಿಂಗಳುಗಳು ಗತಿಸಿದರೂ ಸರಕಾರವು ಇನ್ನೂ ಮಕ್ಕಳಿಗೆ ಶೂ, ಸಾಕ್ಸ್ ಮಕ್ಕಳಿಗೆ ಕೊಟ್ಟಿಲ್ಲವೆಂದು ಪಾಲಕ ಪೋಷಕರು ತಮ್ಮ ಅನಿಸಿಕೆಗಳನ್ನು ಸರಕಾರಕ್ಕೆ ಮುಟ್ಟಲಿ ಅನ್ನುವಂತೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.


























