
ಚಿತ್ತಾಪುರ:ಜೂ.20: ಪಟ್ಟಣದ ಕೆಲವು ಯುವಕರು ಹುರುಪಿನಲ್ಲಿ ಬೈಕ್‍ಗಳ ಸೈಲೆನ್ಸ್‍ರ್‍ಗಳನ್ನು ಮಾರ್ಪಾಟು ಮಾಡಿ ಕರ್ಕಶ ಶಬ್ದದೊಂದಿಗೆ ಶರವೇಗದಲ್ಲಿ ಚಾಲನೆ ಮಾಡುತ್ತಿರುವುದು ಸಾರ್ವಜನಿಕರಿಗೆ ಕಿರಿಕಿರಿ ಎನಿಸಿದೆ.
ಟ್ರಾಫಿಕ್ ನಿಯಮಗಳ ಪ್ರಕಾರ ಹೀಗೆ ಕರ್ಕಶ ಶಬ್ದ ಹೊರಡಿಸುವುದು ನಿಷಿದ್ದ. ಕರ್ಕಶ ಶಬ್ದ ಹೊರಡಿಸುವ ಬೈಕ್ ಅಥವಾ ವಾಹನಗಳಿಗೆ ದಂಡ ವಿಧಿಸಲು ಕಾನೂನಿನಲ್ಲಿ ಅವಕಾಶವಿದೆ. ನಿಗದಿತ ಡೆಸಿಬಲ್ ಗಿಂತ ಹೆಚ್ಚಿನ ಶಬ್ದ ಹೊರಸೂಸುವ ವಾಹನಗಳ ಮಾಲೀಕರ ವಿರದ್ಧ ಪೆÇಲೀಸ್ ಇಲಾಖೆ ಹಾಗೂ ಆರ್‍ಟಿಒ ಇಲಾಖೆ ಪ್ರಕರಣಗಳನ್ನು ದಾಖಲಿಸಬಹುದು. ದಂಡ ಹಾಕಲು ಕೂಡ ಅವಕಾಶವಿರುವ ಜೊತೆಗೆ ವಾಹನಗಳನ್ನು ವಶಪಡಿಸಿಕೊಳ್ಳಬಹುದು ಅಥವಾ ವಾಹನ ಮಾಲೀಕರ ನೋಂದಣಿಯನ್ನೇ ತಾತ್ಕಾಲಿಕವಾಗಿ ರದ್ದುಪಡಿಸಬಹುದಾಗಿದೆ.
ಬುಲೇಟ್, ಎನ್ ಫೀಲ್ಡ್ ಹಾಗೂ ಇತರ ಹೆಚ್ಚು ಸಿಸಿ ಬೈಕ್‍ಗಳು ಇಂತಿಷ್ಟೇ ಶಬ್ದವನ್ನು ಹೊರಸೂಸಬೇಕು ಎಂದು ನಿಯಮಾವಳಿಗಳಲ್ಲಿ ತಿಳಿಸಲಾಗಿದೆ. ಬೈಕ್ ಶಬ್ದದ ಪ್ರಮಾಣ ಕಂಡು ಹಿಡಿಯಲು ಸಂಬಂಧಪಟ್ಟ ಇಲಾಖೆಗಳ ಬಳಿ ಡೆಸಿಬಲ್ ಮೀಟರ್‍ಗಳಿವೆ. ಆದರೆ
ಈ ಇಲಾಖೆಗಳು ಶಬ್ದ ಮಾಲಿನ್ಯ ಉಂಟು ಮಾಡುವ ಬೈಕ್‍ಗಳನ್ನು ವಶಪಡಿಸಿಕೊಂಡು ಕ್ರಮ ಬರುಗಿಸದೇ ಇರುವುದು ಅತ್ಯಂತ ವಿರಳ.
ಕ್ರೇಜ್‍ನಲ್ಲಿ ಬೈಕ್ ಖರೀದಿಸುವ ಯುವಕರು, ನಂತರ ತಮ್ಮದೇ ಸ್ಟೈಲ್‍ನಲ್ಲಿ ಬೈಕ್ ಅನ್ನು ಮಾರ್ಪಾಟು ಮಾಡಿಕೊಳ್ಳುತ್ತಿದ್ದಾರೆ. ಪಟ್ಟಣದಲ್ಲಿ ವೀಲಿಂಗ್ ಮಾಡುವವರು, ಬೈಕ್‍ನ ಸೈಲೇನ್ಸ್‍ರ್ ಹಾರ್ನ್ ಮಾರ್ಪಾಟು ಮಾಡಿಕೊಳ್ಳುತ್ತಿದ್ದಾರೆ. ಬಹುತೇಕ ಕಿಡಿಗೇಡಿ ಯುವಕರೇ ಇಂತಹ ಬೈಕ್‍ಗಳನ್ನು ಹೊಂದಲು ಇಷ್ಟ ಪಡುತ್ತಾರೆ ಎಂಬ ದೂರುಗಳಿವೆ.
ಹೆಚ್ಚು ಸಿಸಿ ಬೈಕ್‍ಗಳ ಖರೀದಿದಾರರು ಸೈಲೇನ್ಸ್‍ರ್ ಬದಲಿಸುವ ಹವ್ಯಾಸಕ್ಕೆ ಬಿದ್ದಿದ್ದು, ಕರ್ಕಶ ಶಬ್ದ ಹೊರಡಿಸುತ್ತ ಓಡಾಡುತ್ತಿದ್ದಾರೆ.
ಸೈಲೆನ್ಸ್‍ರ್ ಬದಲಿಸುವ ಹೆಚ್ಚು ಸಿಸಿ ಬೈಕ್‍ಗಳು ದಾರಿಹೋಕರ ಬಳಿ ಹಾದು ಹೋದರೆ ಸಾಕು ಒಮ್ಮೆಲೆ ಎದೆ ಜೋರಾಗಿ ಬಡಿದುಕೊಳ್ಳುತ್ತದೆ. ಆದರೆ ಕಿಡಿಗೇಡಿ ಯುವಕರು ವಿಕೃತ ಸಂತೋಷ ಹೊಂದುತ್ತಿರುವುದಕ್ಕೆ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ವಾರಕ್ಕೊಮ್ಮೆ ನಡೆಯುವ ಬುಧವಾರದ ಸಂತೆಯ ದಿನ ಸುತ್ತ ಮುತ್ತಲಿನ ಹಳ್ಳಿಯ ಜನರು ಹಾಗೂ ಪಟ್ಟಣದ ಬನರು ತರಕಾರಿ ಸೇರಿದಂತೆ ಇನ್ನಿತರ ವಸ್ತುಗಳನ್ನು ಖರೀದಿ ಮಾಡಲು ಮಾರ್ಕೆಟ್‍ಗೆ ಬರುತ್ತಾರೆ. ಅದರಲ್ಲಿ ಯುವಕ, ಯುವತಿಯರು, ಮಹಿಳೆಯರು, ವಯಸ್ಸಾದವರು ಇರುತ್ತಾರೆ. ಆವಾಗಲೇ ಎಲ್ಲಿಂದ ಬರುತ್ತಾರೆ ಗೊತ್ತಿಲ್ಲ ಯುವತಿಯರ ಸಮೀಪ ಬಂದು ಬ್ರುಮ್ ಬ್ರುಮ್ ಮಾಡುತ್ತಿರುವುದರಿಂದ ಅನೇಕ ಯುವತಿಯರು ಭಯಪಟ್ಟು ರಸ್ತೆ ಮೇಲೆಯೇ ಬಿದ್ದ ಉದಾಹರಣೆಗಳು ಸಾಕಷ್ಟಿವೆ. ಇನ್ನೂ ಕೆಲ ಕಿಡಿಗೇಡಿಗಳು ಶಾಲೆ ಹಾಗೂ ಕಾಲೇಜುಗಳು ಬಿಡುವ ಹೊತ್ತಿನಲ್ಲಿ ವಿದ್ಯಾರ್ಥಿನಿಯರೇ ಬರುವುದನ್ನು ಕಾಯುತ್ತಾ ಕುಳಿತಿರುತ್ತಾರೆ. ಅವರು ಕಾಲೇಜಿನಿಂದ ಸ್ವಲ್ಪವೇ ದೂರದಲ್ಲಿ ಸಾಗಿದರೇ ಸಾಕು ಬೈಕ್‍ನ ಸೈಲೇನ್ಸ್‍ರ್ ಶಬ್ದ ಮಾಡುತ್ತಾ ನಾಲ್ಕೈದು ಸುತ್ತು ಹಾಕಿ ತಮ್ಮ ವಿಕೃತ ಸಂತೋಷ ಪಡುವುದು ಸಾಮಾನ್ಯವಾಗಿದೆ.
ಪೆÇಲೀಸರು ಕೇವಲ ಹೆಲ್ಮೇಟ್, ಡಿಎಲ್, ವಿಮೆ, ಪಾಕಿರ್ಂಗ್‍ಗೆ ಸಂಬಂಧಿಸಿದಂತೆ ಸಾರ್ವಜನಿಕರಿಗೆ ದಂಡ ವಿಧಿಸಲಾಗುತ್ತಿದೆ. ಆದರೆ
ಶಬ್ಧ ಮಾಲಿನ್ಯಕ್ಕೆ ಕಾರಣವಾಗುವ ವಾಹನಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವುದು ಯಾವಾಗ..? ಎಂಬುವುದೇ ಪಟ್ಟಣದ ನಿವಾಸಿಗಳ ಪ್ರಶ್ನೆಯಾಗಿದೆ.































