Home ಜಿಲ್ಲೆ ಕಲಬುರಗಿ ಕಲ್ಯಾಣ ಮಂಟಪ: 2 ಕೋಟಿ ಅನುದಾನ: ಡಾ.ಅಜಯಸಿಂಗ್

ಕಲ್ಯಾಣ ಮಂಟಪ: 2 ಕೋಟಿ ಅನುದಾನ: ಡಾ.ಅಜಯಸಿಂಗ್

ಜೇವರ್ಗಿ: ‘ಜೇವರ್ಗಿ ಕಲ್ಯಾಣದ ಹೆಬ್ಬಾಗಿಲು, ಸಗರನಾಡಿನ ಶಕ್ತಿ ಕೇಂದ್ರ. ಷಣ್ಮುಖ ಶಿವಯೋಗಿಗಳು 750ಕ್ಕೂ ಅಧಿಕ ವಚನಗಳನ್ನು ರಚಿಸುವ ಮೂಲಕ ವಚನ ಸಾಹಿತ್ಯಕ್ಕೆ ಅದ್ವಿತೀಯ ಕೊಡುಗೆ ನೀಡಿದ್ದಾರೆ’ ಎಂದು ಕೆಕೆಆರ್‍ಡಿಬಿ ಅಧ್ಯಕ್ಷ ಡಾ.ಅಜಯಸಿಂಗ್ ಹೇಳಿದರು.

ಪಟ್ಟಣದ ಚರ ಚಕ್ರವರ್ತಿ ಷಣ್ಮುಖ ವಿರಕ್ತಮಠದ ಹಮ್ಮಿಕೊಂಡಿರುವ ಶಿವಯೋಗಿಗಳ ಆವರಣದಲ್ಲಿ ಜಾತ್ರಾ ಮಹೋತ್ಸವ ನಿಮಿತ್ಯ ಶಿವಯೋಗಿಗಳ ಜೀವನ ದರ್ಶನ ಪ್ರವಚನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದದರು.

ಷಣ್ಮುಖ ಶಿವಯೋಗಿಗಳ ಮಠದ ಜೀರ್ಣೋದ್ಧಾರದ ಕೆಲಸ ಭರದಿಂದ ಸಾಗಿದೆ. ಕಲ್ಯಾಣ ಮಂಟಪ ನಿರ್ಮಾಣಕ್ಕೆ ಈಗಾಗಲೇ ?1 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ. ಹೆಚ್ಚುವರಿಯಾಗಿ ಇನ್ನೂ ?1 ಕೋಟಿ ಅನುದಾನಕ್ಕೆ ಸಂಬಂಧಿಸಿದ ಸಚಿವರ ಜತೆ ಚರ್ಚಿಸಿ ಬಿಡುಗಡೆ ಮಾಡಲಾಗುವುದು’ ಎಂದರು.

ಜೇವರ್ಗಿ ಪಟ್ಟಣದ ಷಣ್ಮುಖ ಶಿವಯೋಗಿಗಳ ಮಠದಲ್ಲಿ ಆಯೋಜಿಸಲಾಗಿದ್ದ ಶಿವಯೋಗಿಗಳ ಜೀವನ ದರ್ಶನ ಪ್ರವಚನ ಕಾರ್ಯಕ್ರಮದಲ್ಲಿ ಕೆಕೆಆರ್‍ಡಿಬಿ ಅಧ್ಯಕ್ಷ ಡಾ.ಅಜಯಸಿಂಗ್ ಮಾತನಾಡಿದರು.

ಟ್ರಸ್ಟ್ ಕಮಿಟಿ ಅಧ್ಯಕ್ಷ ರಾಜಶೇಖರ ಸೀರಿ ಮಾತನಾಡಿ, ‘ದೇಶ ಸಂಚಾರ ಮಾಡಿ ನಶಿಸಿ ಹೋಗುತ್ತಿದ್ದ ವಚನ ಸಾಹಿತ್ಯವನ್ನು ಉಳಿಸಿ ಬೆಳೆಸುವ ಮೂಲಕ 17ನೇ ಶತಮಾನದಲ್ಲಿ ಷಣ್ಮುಖ ಶಿವಯೋಗಿಗಳು ವಚನ ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ’ ಎಂದರು. ಬೆಳಗಾವಿ ಜಿಲ್ಲೆಯ ಬಸವಬೆಳವಿಯ ಶರಣಬಸವ ಸ್ವಾಮೀಜಿ ಪ್ರವಚನ ನೀಡಿದರು.

ಸಮಿತಿ ಉಪಾಧ್ಯಕ್ಷ ಸೋಮಣ್ಣ ಕಲ್ಲ, ಕಾರ್ಯದರ್ಶಿ ಸಂಗಣ್ಣಗೌಡ ಗುಳ್ಳಾಳ, ಷಣ್ಮುಖಪ್ಪ ಹಿರೇಗೌಡ,
ಷಣ್ಮುಖಪ್ಪ ಗೌಡಮಾಲಿ ಪಾಟೀಲ್ಶಿವಣಗೌಡ ಪಾಟೀಲ ಹಂಗರಗಿ, ಶರಣಬಸವ ಕಲ್ಲಾ, ಸಿದ್ದುಸಾಹುಅರಳಿ, ಬಸವರಾಜ ಮದರಿ, ಸಿದ್ದಣಗೌಡ ಹಳಿಮನಿ, ಪ್ರೇಮಾನಂದ ಶೆಟಗಾರ, ಗುರುಲಿಂಗಯ್ಯಸ್ವಾಮಿ ಯನಗುಂಟಿ, ಬಸವರಾಜ ಶಿವಣಿ, ತಿಪ್ಪಣ್ಣ ಭೂತಪೂರ, ಮಲ್ಕಣಗೌಡ ಹೆಗ್ಗಿನಾಳ, ರವಿ ಕೋಳಕೂರ, ನಾಗರಾಜ ಬುಟ್ನಾಳ, ಬಸವರಾಜ ಕಲ್ಲಾ, ಚಂದ್ರು ಸೀರಿ, ನಿಂಗಣ್ಣ ಹಳಿಮನಿ, ಅಮರ ಹಳ್ಳಿ, ಶಾಂತಪ್ಪ ಬಿರಾದಾರ, ವಿಜಯಕುಮಾರ ಬಡಿಗೇರ, ಪ್ರಕಾಶ ನಾಸಿ ಸೇರಿದಂತೆ ಅನೇಕರಿದ್ದರು.