
ಬೀದರ್: ಜೂ.2:ಶಾಲಾ ಆರಂಭೋತ್ಸವ ದಿನವಾದ ಸೋಮವಾರ ಇಲ್ಲಿಯ ಅರುಣೋದಯ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳನ್ನು ಹೂ ಮಳೆ ಸುರಿಸಿ ಸ್ವಾಗತಿಸಿ ಬರಮಾಡಿಕೊಳ್ಳಲಾಯಿತು.
ವಿದ್ಯಾರ್ಥಿಗಳು ಶಾಲೆಯ ಪ್ರವೇಶ ದ್ವಾರಕ್ಕೆ ಬರುತ್ತಲೇ ಗಣ್ಯರು, ಶಿಕ್ಷಕರು ಹಾಗೂ ಸಿಬ್ಬಂದಿ ವಿದ್ಯಾರ್ಥಿಗಳ ಮೇಲೆ ಪುಷ್ಪ ವೃಷ್ಟಿ ಮಾಡಿದರು. ಶಿಕ್ಷಕಿಯರು ಆರತಿ ಬೆಳಗಿದರು.
ಸಾಮೂಹಿಕ ಸರಸ್ವತಿ ಮಂತ್ರ ಪಠಣದ ನಂತರ ವಿದ್ಯಾರ್ಥಿಗಳಿಗೆ ಸಿಹಿ ವಿತರಿಸಲಾಯಿತು.
ಶಾಲೆಯ ಮುಖ್ಯದ್ವಾರಕ್ಕೆ ತಳಿರು ತೋರಣಗಳಿಂದ ಅಲಂಕರಿಸಲಾಗಿತ್ತು. ಬಲೂನ್‍ಗಳನ್ನು ಕಟ್ಟಲಾಗಿತ್ತು. ಸರಸ್ವತಿ ದೇವಿಯ ಪಾತ್ರ ಧರಿಸಿದ್ದ ವಾರಿಧಿ ಮಂಗಳೂರೆ, ಗಣಪತಿ ವೇಷ ಧರಿಸಿದ್ದ ಪ್ರಜ್ವಲ್ ವೀರಶೆಟ್ಟಿ ಗಮನ ಸೆಳೆದರು.
ಸಾಹಿತಿ ಭಾರತಿ ವಸ್ತ್ರದ್ ಅವರು ಸರಸ್ವತಿ ದೇವಿಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಶಾಲಾ ಆರಂಭೋತ್ಸವಕ್ಕೆ ಚಾಲನೆ ನೀಡಿದರು.
ಶಾಲೆಯ ಆಡಳಿತಾಧಿಕಾರಿ ಸಂತೋಷಕುಮಾರ ಮಂಗಳೂರೆ, ಶಿಕ್ಷಕರಾದ ಅಲ್ಕಾವತಿ, ನೀಲಮ್ಮ, ಪೂಜಾ, ಜ್ಯೋತಿ, ಮಾರುತೆಪ್ಪ, ಸುಮೀತ್, ಪ್ರಶಾಂತ, ಗಣಪತಿ, ರೇಣುಕಾ, ಸುನೀತಾ, ಸುಜಾತಾ, ಸುಗಂಧಾ, ಅಶ್ವಿನಿ, ಸವಿತಾ, ಪೂನಂ, ಶೈಲಜಾ ಇದ್ದರು.

























