ಬಸವನ ಬಾಗೇವಾಡಿ:ಅ.14: ಬಸವೇಶ್ವರ ಜಾತ್ರಾ ಮಹೋತ್ಸವ ಮನ ಗೆದ್ದ ಜಗಜಟ್ಟಿಗಳ ಶಕ್ತಿ ಪ್ರದರ್ಶನ ಪಟ್ಟಣದ ಐತಿಹಾಸಿಕ ಬಸವೇಶ್ವರ ಮೂಲ ನಂದೀಶ್ವರ ಜಾತ್ರಾ ಮಹೋತ್ಸವದ ಮೂರನೇ ದಿನವಾದ ಬುಧವಾರ ಪಟ್ಟಣದ ಸಿ ಬಿ ಎಸ್ ಈ ಶಾಲಾ ಆವರಣದಲ್ಲಿ ಜರುಗಿದ ಕಸರತ್ತಿನ ಹಾಗೂ ಭಾರ ಎತ್ತುವ ಸ್ಪರ್ಧೆಗಳಲ್ಲಿ ನಾನಾ ಭಾಗದ ಜಗ ಜಟ್ಟಿಗಳು ಹಳ್ಳಿ ಹೈದರು ಶಕ್ತಿ ಪ್ರದರ್ಶಿಸಿ ಜನಮನ ಸುರೇಗೊಂಡರು ಸಂಗ್ರಾಣಿಕಲ್ಲು ಸಾಗ ಎತ್ತುವ ಸ್ಪರ್ಧೆ ಸಂಗ್ರಾಣಿ ಕಲ್ಲು ಸಾಗು ಎತ್ತುವ ಸ್ಪರ್ಧೆಯಲ್ಲಿ ಜತ್ತ ತಾಲೂಕಿನ ಆಸಂಗಿ ಗ್ರಾಮದ ಅಫ್ಜಲ್ ಮುಜಾವರ್ ಬಸವೇಶ್ವರ ಜಾತ್ರೆ ಭಾರ ಎತ್ತುವ ಸ್ಪರ್ಧೆಯಲ್ಲಿ 11 ವರ್ಷಗಳಿಂದ ಭಾಗವಹಿಸುತ್ತಿದ್ದು ಸತತ 10 ಬಾರಿ ಪ್ರಥಮ ಸ್ಥಾನ ಪಡೆದಿದ್ದಾನೆ ಬಿಳಿಗಿ ತಾಲೂಕಿನ ಬಿಸನಾಳ ಗ್ರಾಮದ ಕಿರಣ್ ಅರಿಕೇರಿ ದ್ವಿತೀಯ ಸ್ಥಾನ ಪಡೆದಿದ್ದಾನೆ ರಿಯಾಜ್ ಜಮಾದಾರ್ ತೃತೀಯ ಸ್ಥಾನ ಪಡೆದ ಸಂಗ್ರಾನಿ ಕಲ್ಲು ಒತ್ತಿ ಎತ್ತುವ ಸ್ಪರ್ಧೆ ಸಂಕ್ರಾಣಿಕಲ್ಲು ಒತ್ತಿ ಎತ್ತುವ ಸ್ಪರ್ಧೆಯಲ್ಲಿ ಗುಳೇದಗುಡ್ಡದ ವಿಠ್ಠಲ್ ಮುತ್ತಪ್ಪ ಮನ್ನಿಕಟ್ಟೆ ಪ್ರಥಮ ಗೋಕಾಕ್ ತಾಲೂಕಿನ ಮಳವಂಕಿ ಗ್ರಾಮದ ಶಿವಾನಂದ್ ಜಾಡರ ದ್ವಿತೀಯ ಸ್ಥಾನ ಬಸವನಬಾಗೇವಾಡಿಯ ನಾಗೂರ್ ಗ್ರಾಮದ ಮುತ್ತಪ್ಪ ಶರಣಪ್ಪ ಕಡ್ಲಿಮಟ್ಟಿ ತೃತೀಯ ಸ್ಥಾನ ಪಡೆದರು ಗುಂಡು ಎತ್ತುವ ಸ್ಪರ್ಧೆ ನಾಗಠಾಣದ ಬೀರಪ್ಪ ಗೋಳಪ್ಪ ಪೂಜಾರಿ ಪ್ರಥಮ ಗುನ್ನಾಪುರದ ಶಿವಲಿಂಗಪ್ಪ ಶಿರೂರು ದ್ವಿತೀಯ ಯಾಳವಾರದ ಮಹಾಲಿಂಗರಾಯ ಕೊಂಡುಗೋಳಿ ಹಾಗೂ ಅಂಬರೀಶ್ ಬೊಮ್ಮನ ಜೋಗಿ ಇಬ್ಬರು ತೃತೀಯ ಸ್ಥಾನ ಪಡೆದರು ಪ್ರದರ್ಶನಗಳು ಹಲ್ಲಿನಿಂದ ಹಾರಿ ಒಗೆಯುವ ಸ್ಪರ್ಧೆಯಲ್ಲಿ ದೇವರಹಿಪ್ಪರಗಿ ತಾಲೂಕಿನ ಮಡ್ಡಿ ಮನೋರ ಸದ್ದಾಮ್ ಹಸನ್ ಸಾಬ್ ಮಾಡ ಬಾಳ ಪ್ರಥಮ ಇಂಗಳಗಿ ಗ್ರಾಮದ ಮಾಳಪ್ಪ ಸೋಮಲಿಂಗ ಪೂಜಾರಿ ದ್ವಿತೀಯ ಸ್ಥಾನ ತೆಲಗಿಯ ಕಾಂತಪ್ಪ ಈರೇಕಾರ ಅವರು ಅಲ್ಲಿನಿಂದ 80 ಕೆಜಿ ಸಂಗ್ರಾಣಿಕಲ್ಲನ್ನು ಮತ್ತು ಮುತ್ತಿಗಿ ಗ್ರಾಮದ ಪರಶುರಾಮ್ ಹೂಗಾರ್ ಸಿದ್ದನಾಥ್ ಗ್ರಾಮದ 80 ವರ್ಷದ ದಿಗಂಬರ್ ಕೊಳಮೇಲಿ ಅವರು 20 ಕೆಜಿ ಕಲ್ಲನ್ನು ತಮ್ಮ ಮೀಸೆಗೆ ಕಟ್ಟಿಕೊಂಡು ಎತ್ತಿದರು. ಗುನ್ನಾಪೂರಿನ ಬೀರಪ್ಪ ಶಿವಪ್ಪ ಲೊಗಾವಿ ಅವರು ಮೆಟನಾಲಿಗೆ ಮೇಲಿಂದ ಅಕ್ಕಿ ಚೀಲವನ್ನು ತಮ್ಮ ಬೆನ್ನ ಮೇಲೆ ಇಟ್ಟುಕೊಂಡು ತಮ್ಮ ಕಸರ ತನ್ನು ಪ್ರದರ್ಶಿಸಿದರು ಒಣಗೂರಿನ ಹನುಮಂತ್ ತಿಪ್ಪಣ್ಣ ವಡ್ಡರ್ ಅವರು ಕೈ ಸಹಾಯವಿಲ್ಲದೆ ಕಾಲಿನಿಂದ ಉಸುಕು ತುಂಬಿದ ಕೊಡ ಎತ್ತಿ ಮೆಚ್ಚುಗೆ ಪಡೆದರು ಹಲವಾರು ಹಳ್ಳಿ ಹೈದರ ಎರಡು ಕ್ವಿಂಟಲ್ ಜೋಳದ ಚೀಲವನ್ನು ತೆಕ್ಕಿ ಬಡೆದು ಎತ್ತಿ ಧರೆ ಉಸುಕಿನ ಚೀಲ ತಮ್ಮ ಬೆನ್ನ ಮೇಲೆ ಇಟ್ಟುಕೊಂಡು ಐದಾರು ಬಾರಿ ಬಸ್ಕಿ ಹೊಡೆದು ನೆರೆದರವನ್ನು ಮಂತ್ರಮುಕ್ತಗೊಳಿಸಿದರು ಗೆದ್ದ ಜಟ್ಟಿಗಳಿಗೆ ಜಾತ್ರಾ ಸಮಿತಿಯ ಬೆಳಿಕಡೆ ಪ್ರಶಸ್ತಿ ಪತ್ರ ನೀಡಿ ಸನ್ಮಾನಿಸಿ ಗೌರವಿಸಲಾಯಿತು ಅಲ್ಲದೆ ವಿವಿಧ ಕಸರತ್ತಿನಲ್ಲಿ ಶಕ್ತಿ ಪ್ರದರ್ಶನ ತೋರಿದ ಎಲ್ಲಾ ಹಳ್ಳಿ ಹೈದರಿಗೆ ಜಾತ್ರಾ ಕಮಿಟಿಯಿಂದ ನಗದು ಬಹುಮಾನ ನೀಡಿ ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಸಿದ್ದಲಿಂಗ ಸ್ವಾಮೀಜಿ ಬಸವೇಶ್ವರ ಸೇವಾ ಸಮಿತಿ ಅಧ್ಯಕ್ಷರಾದ ಈರಣ್ಣ ಪಟ್ಟಣಶೆಟ್ಟಿ ಜಾತ್ರಾ ಉಸ್ತವ ಸಮಿತಿಯ ಅಧ್ಯಕ್ಷ ರವಿ ರಾಠೋಡ್ ಬಸವರಾಜ್ ಹರಿವಾಳ ಬಸವರಾಜ್ ಗೊಳಸಂಗಿ ರವಿ ಪಟ್ಟಣಶೆಟ್ಟಿ ಪುರಸಭೆ ಅಧ್ಯಕ್ಷ ಜಗದೇವಿ ಗುಂಡಳ್ಳಿ ಪುರಸಭೆ ಉಪಾಧ್ಯಕ್ಷ ಅಶೋಕ್ ಹಾರಿವಾಳ ಮುಖಂಡರಾದ ಸಂಗಣ್ಣ ಕಲ್ಲೂರ್ ಎಂಜಿ ಆದಿಗೊಂಡ ಅನಿಲ್ ಅಗರ್ವಾಲ್ ಸಂಗಮೇಶ್ ಓಲೆಕಾರ ಶಂಕರಗೌಡ ಬಿರಾದಾರ ಸುರೇಶ್ ಗೌಡ ಪಾಟೀಲ ಮೀರಾ ಸಾಬ್ ಕೊರಬು ಸಂಗಯ್ಯ ಒಡೆಯರ ಜಟ್ಟಿಂಗರಾಯ ಮಾಲಗಾರ ಮಹಾಂತೇಶ್ ಹಂಜಗಿ ಮುತ್ತು ಗುಂಡಳ್ಳಿ ಮಲ್ಲಿಕಾರ್ಜುನ ಗುಂಡಗಿ ದಯಾನಂದ್ ಜಾಲಗೇರಿ ವಿಶ್ವನಾಥ್ ಹರಿವಾಳ ಶಂಕನಗೌಡ ಪಾಟೀಲ ಸಿದ್ದರಾಮ್ ಪಾತ್ರೋಟಿ ರಮೇಶ್ ಮೆಸಬಿನಾಳ ನಂದೀಶ್ ಪಾಟೀಲ ಮುಂತಾದವರು ಇದ್ದರು

























