ಪ್ರಕೃತಿಯನ್ನು ಸಂಸ್ಕøತಿಯನ್ನಾಗಿಸಿಕೊಳ್ಳುವವರು ನಾವಾಗಬೇಕು: ಡಾ.ತರನಳ್ಳಿ

ಸೇಡಂ, ಡಿ, 05: ಪ್ರಕೃತಿಯಲ್ಲಿ ಲಭ್ಯವಾಗುವ ಸಂಪನ್ಮೂಲಗಳು ನಾವು ವಿಕೃತಿಗಾಗಿ ಬಳಸದೆ ಸಂಸ್ಕೃತಿಗಾಗಿ ಬಳಸಿಕೊಂಡರೆ, ರಾಷ್ಟ್ರೀಯ ಸೇವಾ ಯೋಜನೆಯ ವಿಶೇಷ ಶಿಬಿರದ ಮೂಲ ಧ್ಯೇಯವಾದ ನಶೆ ಮುಕ್ತ ಭಾರತ ಖಂಡಿತವಾಗಿ ನಿರ್ಮಾಣ ಮಾಡಬಹುದೆಂದು ಹಿರಿಯ ಸಾಹಿತಿ, ಪತ್ರಕರ್ತ ಡಾ ಜಗನಾಥ್ ತರನಳ್ಳಿ ಹೇಳಿದರು. ಶ್ರೀ ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿ ಸಂಚಾಲಿತ ಶ್ರೀಮತಿ ನರ್ಮದಾ ದೇವಿ ಗಿಲಡಾ ಮಹಿಳಾ ಪದವಿ ಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರದ ಉಪನ್ಯಾಸ-1 ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಅತಿಥಿಗಳಾದ ಶ್ರೀ ಶಶಿಕುಮಾರ್ ಬಾಗೋಡಿ ಮಾತನಾಡುತ್ತಾ, ಮಾದಕ ವ್ಯಸನಗಳಿಗೆ ಒಳಗಾದ ದತ್ತು ಗ್ರಾಮದ ನಿವಾಸಿಗಳಿಗೆ ಅವರ ಆರೋಗ್ಯದ ಮೇಲೆ ವ್ಯಸನದಿoದಾಗುವ ದುಷ್ಪರಿಣಾಮಗಳ ಅರಿವು ಮೂಡಿಸುವ ಜವಾಬ್ದಾರಿ ನಮ್ಮದಾಗಬೇಕು ಎಂದರು. ಉಪಸ್ಥಿತ ಭಾಸ್ಕರ್ ಐನಾಪುರ ಸಮಿತಿ ಸದಸ್ಯರು ಮಾತನಾಡಿ, ಬೀದಿ ನಾಟಕ, ಜಾಥಾಗಳ ಮೂಲಕ ಅರಿವು ಮೂಡಿಸುವ ಕಾರ್ಯಕ್ರಮಗಳಿಗೆ ಅಧ್ಯತೆ ನೀಡಬೇಕೆಂದರು.ಅಧ್ಯಕ್ಷತೆವಹಿಸಿದ ಸಮಿತಿ ಸದಸ್ಯರಾದ ಮನೋಹರ ದೊಂತಾ ಮಾತನಾಡಿ ಉಪನ್ಯಾಸದ ವಿಷಯಗಳ ಸಾರ ಆಲಿಸಿ ಮೌಲ್ಯಯುತ ಜೀವನ ಕಟ್ಟಿಕೊಂಡು ಸಮಾಜ ಪರಿವರ್ತನೆ ಮಾಡುವ ಜವಾಬ್ದಾರಿ ಯುವಕರು ಹೊಂದಬೇಕೆಂದರು.
ಶಿಬಿರಾರ್ಥಿನಿ ಕು ಪ್ರೀತಿ ನಿರ್ವಹಿಸಿದರು. ಶಿರಾಧಿಕಾರಿ ಸ್ವಾಗತ, ಪ್ರಾಚಾರ್ಯರು ವಂದಿಸಿದರು.