Home ಜಿಲ್ಲೆ ಮಕ್ಕಳಲ್ಲಿ ಸ್ಪರ್ದಾತ್ಮಕ ಮನೋಭಾವನೆ ಬೆಳೆಸಬೇಕಿದೆೆ:ಕೂಚಬಾಳ

ಮಕ್ಕಳಲ್ಲಿ ಸ್ಪರ್ದಾತ್ಮಕ ಮನೋಭಾವನೆ ಬೆಳೆಸಬೇಕಿದೆೆ:ಕೂಚಬಾಳ

ತಾಳಿಕೋಟೆ:ಫೆ೨೩: ಇಂದಿನ ಸ್ಪರ್ದಾತ್ಮಕ ಯುಗದಲ್ಲಿ ಮಕ್ಕಳಲ್ಲಿ ಪರಿಕ್ಷಾ ಸಾಮರ್ಥ್ಯ ಬೆಳೆಸುವ ನಿಟ್ಟಿನಲ್ಲಿ ಕೌಟಿಲ್ಯ ಅಕಾಡೆಮಿ ಸ್ಟೂಡೆಂಟ್ ಅವಾರ್ಡ ಪರಿಕ್ಷೆ ಕೈಕೊಂಡಿರುವದು ಶ್ಲಾಘನೀಯವಾಗಿದೆ ಎಂದು ಬಿಜೆಪಿ ನಿಕಟಪೂರ್ವ ಜಿಲ್ಲಾ ಅಧ್ಯಕ್ಷ ಆರ್.ಎಸ್.ಪಾಟೀಲ ಕೂಚಬಾಳ ಅವರು ಹೇಳಿದರು.
ರವಿವಾರರಂದು ಪಟ್ಟಣದ ಮಿಣಜಗಿ ಕ್ರಾಸ್‌ನಲ್ಲಿರುವ ಕೌಟಿಲ್ಯ ಅಕಾಡೆಮಿ ವತಿಯಿಂದ ೪ನೇ ತರಗತಿ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡ ಜೀನಿಯಸ್ ಸ್ಟೂಡೆಂಟ್ ಅವಾರ್ಡ-೨೦೨೬ರ ಪರಿಕ್ಷಾ ಫಲಿತಾಂಶ ಘೋಷಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡುತ್ತಿದ್ದ ಅವರು ಕೌಟಿಲ್ಯ ಅಕಾಡೆಮಿ ಪ್ರಾರಂಭಗೊAಡು ೨ ವರ್ಷ ದಲ್ಲಿ ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಪರಿಕ್ಷೆಯ ಮೂಲಕ ಅವರ ಸಾಮರ್ಥ್ಯ ಗುರುತಿಸುವಂತಹ ಕೆಲಸ ಮಾಡುತ್ತಿರುವದು ಒಳ್ಳೆಯ ಬೆಳವಣಿಗೆಯಾಗಿದೆ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಲಿಕ್ಕೆ ಬೇರೆ ಬೇರೆ ಜಿಲ್ಲೆಗಳತ್ತ ಮುಖ ಮಾಡುವ ಸಂದರ್ಬದಲ್ಲಿ ಈ ಭಾಗದಲ್ಲಿ ಮಕ್ಕಳಿಗೆ ಅನುಕೂಲ ಕಲ್ಪಿಸಬೇಕೆಂಬ ಉದ್ದೇಶದೊಂದಿಗೆ ರಾಜು ಸಜ್ಜನ ಅವರು ಕೌಟಿಲ್ಯ ಅಕಾಡೆಮಿಯನ್ನು ಸ್ಥಾಪಿಸಿ ಈ ಭಾಗದಲ್ಲಿ ಶೈಕ್ಷಣಿಕ ಕ್ರಾಂತಿ ಮೂಡಿಸಲು ಮುಂದಾಗಿರುವದು ಒಳ್ಳೆಯ ಬೆಳವಣಿಗೆಯಾಗಿದೆ ಪಾಲಕರಾದವರು ಮಕ್ಕಳನ್ನು ಕೇವಲ ಅಂಕಗಳ ಮೆರಲೆ ಅಳೆಯುವದು ಬೇಡಾ ನಮ್ಮ ಮಗುವಿನಲ್ಲಿ ಏನು ಕೊರತೆಇದೆ ಎಂಬುದನ್ನು ಅರೀತುಕೊಳ್ಳಲು ಇಂತಹ ಪರಿಕ್ಷೆಯನ್ನು ಎದುರಿಸುವ ಸಾಮರ್ಥ್ಯ ಮಕ್ಕಳಲ್ಲಿ ಬೆಳೆಸುವಂತಹ ಕಾರ್ಯ ಮಾಡಬೇಕು ಮಕ್ಕಳಿಗೆ ಪಾಲಕರು ಸಂಸ್ಕಾರಯುತ ದಾರಿಯಲ್ಲಿ ಸಾಗುವಂತೆ ನೋಡಿಕೊಳ್ಳಬೇಕು ಕೌಟಿಲ್ಯ ಅಕಾಡೆಮಿ ಸಂಸ್ಥೆ ಕಟ್ಟಿರುವದು ಹಣ ಗಳಿಕೆಗಾಗಿ ಕಟ್ಟಿಲ್ಲಾ ಈ ಭಾಗದಲ್ಲಿಯ ಬಡ ಮತ್ತು ಪ್ರತಿಭಾವಂತ ಮಕ್ಕಳನ್ನು ಗುರುತಿಸಿ ಅವರಿಗೆ ಉಚಿತ ಶಿಕ್ಷಣ ನೀಡಬೇಕೆಂಬ ಸದುದ್ದೇಶ ಹೊಂದಿದ್ದಾಗಿದೆ ಉತ್ತಮ ರಾಷ್ಟç ನಿರ್ಮಾಣಕ್ಕಾಗಿ ಮಕ್ಕಳಲ್ಲಿ ಹೊಸ ಹೊಸ ಚಿಂತನೆಗಳೊAದಿಗೆ ರಾಷ್ಷçನಿರ್ಮಾಣದ ವ್ಯಕ್ತಿಗಳನ್ನು ಕೊಡುವ ಕೆಲಸ ಈ ಕೌಟಿಲ್ಯ ಅಕಾಡೆಮಿ ಸಂಸ್ಥೆಯಿAದಾಗಲಿದೆ ಎಂದರು.
ಇನ್ನೋರ್ವ ಮುಖ್ಯ ಅತಿಥಿಗಳಾಗಿ ಆಗಮಿಸಿದ ಜೆಎಸ್‌ಜಿ ಪೌಂಡೇಶನ್ ಕಾರ್ಯದರ್ಶಿ ಶ್ರೀಕಾಂತ್ ಪತ್ತಾರ ಅವರು ಮಾತನಾಡಿ ಇಂದಿನ ಶಿಕ್ಷಣದ ವ್ಯವಸ್ಥೆಯಲ್ಲಿ ಉತ್ತರದಿಂದ ದಕ್ಷೀಣದ ಕಡೆಗೆ ಮುಖಮಾಡುವ ಕಾಲಘಟ್ಟದಲ್ಲಿ ತಾಳಿಕೋಟೆ ಕೌಟಿಲ್ಯ ಅಕಾಡೆಮಿ ಶಿಕ್ಷಣ ಸಂಸ್ಥೆಯು ದಕ್ಷೀಣದಿಂದ ಉತ್ತರದ ಕಡೆಗೆ ಮುಖ ಮಾಡುವಂತೆ ಮಾಡಿರುವದು ಹೆಮ್ಮೆಯ ಸಂಗತಿಯಾಗಿದೆ ಇಂದು ನಡೆದ ಜೀನಿಯಸ್ ಸ್ಟೂಡಿಯಂಟ್ ಅವಾರ್ಡ ಪರಿಕ್ಷೆಗೆ ಗದಗ, ಧಾರವಾಡ, ರಾಯಚೂರ ನಗರ ಓಳಗೊಂಡು ವಿವಿದ ಜಿಲ್ಲೆ ತಾಲೂಕುಗಳಿಂದ ಅಲ್ಲದೇ ಗ್ರಾಮೀಣ ಭಾಗದಿಂದ ಸಾವಿರಾರು ವಿದ್ಯಾರ್ಥಿಗಳು ಭಾಗವಹಿಸಿರುವದು ಈ ಭಾಗವು ಶೈಕ್ಷಣಿಕ ಕಾಶಿಯಾಗಿ ಹೊರಹೊಮ್ಮುತ್ತಿದೆ ಎಂದರೆ ತಪ್ಪಾಗಲಾರದು ಎಂದರು. ಈ ಕೌಟಿಲ್ಯ ಅಕಾಡೆಮಿ ಪ್ರಾರಂಭಗೊAಡ ಮೊದಲ ವರ್ಷದಲ್ಲಿಯೇ ನವೋದಯ, ಸೈನಿಕ್ ಸ್ಕೂಲ್, ಮುರಾರ್ಜಿ ಒಳಗೊಂಡು ೧೫ ಕ್ಕೂ ಅಧಿಕ ವಿದ್ಯಾರ್ಥಿಗಳು ಆಯ್ಕೆಯಾಗಿ ಕೌಟಿಲ್ಯ ಶಿಕ್ಷಣ ಸಂಸ್ಥೆಯಲ್ಲಿ ಸಿಗುವ ಗುಣಾತ್ಮಕ ಶಿಕ್ಷವನ್ನು ಗುರುತಿಸಿಕೊಟ್ಟಿದೆ ಕೌಟಿಲ್ಯ ಎಂದರೆ ಚಾಣಕ್ಯ ಇತನು ಮೊದಲು ಮೌರ್ಯ ಸಾಮ್ರಾಜ್ಯವನ್ನು ಕಟ್ಟಿದಂತಹ ವ್ಯಕ್ತಿ ಅಂತಹ ದಿಮಂತ ವ್ಯಕ್ತಿಯ ಹೆಸರಿನಲ್ಲಿ ಶಿಕ್ಷಣ ಸಂಸ್ಥೆಯನ್ನು ಪ್ರಾರಂಬಿಸಿ ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ನೀಡಲು ಮುಂದಾಗಿರುವ ಸಂಸ್ಥೆಯ ಅಧ್ಯಕ್ಷ ರಾಜು ಸಜ್ಜನ ಅವರ ಕಾರ್ಯ ಶ್ಲಾಘನೀಯವಾಗಿದೆ ಎಂದರು.
ಇನ್ನೋರ್ವ ಅತಿಥಿ ಶಿಕ್ಷಕ ಪರಶುರಾಮ ಚಲವಾದಿ ಪ್ರಾಸ್ಥಾವಿಕ ಮಾತನಾಡಿ ಮಗುವಿನಿಂದ ಮುಬೈಲ್ ಟಿವಿ ಗಳಿಂದ ದೂರವಿಡುವ ಕಾರ್ಯವಾದಾಗ ಮಗುವಿನ ಭವಿಷ್ಯ ಉಜ್ವಲಗೊಳ್ಳಲಿದೆ ಮಗುವಿಗೆ ಉತ್ತಮ ಶಿಕ್ಷಕೊಡಿಸುವ ಕಾರ್ಯ ಪಾಲಕರು ಮಾಡಬೇಕು ನೀವು ಕೋಟಿ ಆಸ್ತಿ ಸಂಪಾದಿಸಿದರೂ ಅದು ಕ್ಷಣಮಾತ್ರದಲ್ಲಿ ನಶಿಸಿಹೋಗಲಿದೆ ನಿಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿ ಅವರನ್ನೇ ಆಸ್ತಿಯನ್ನಾಗಿ ಮಾಡುವ ಕಾರ್ಯ ಮಾಡಬೇಕು ಇದರಿಂದ ನಿಮ್ಮ ಮಕ್ಕಳ ಭವಿಷ್ಯದ ಜೊತೆಗೆ ದೇಶದ ಭವಿಷ್ಯವೂ ಕೂಡಾ ಉಜ್ವಲಗೊಳ್ಳಲಿದೆ ಎಂದರು.
ಮುಸ್ಲಿಂ ಧಾರ್ಮಿಕ ಮುಖಂಡ ಶ್ರೀ ಸೈಯದ ಶಕೀಲಹ್ಮದ ಖಾಜಿ ಅವರು ಮಾತನಾಡಿದರು.
ಕಾರ್ಯಕ್ರಮವನ್ನು ಪುರಸಭಾ ಮಾಜಿ ಅಧ್ಯಕ್ಷ ಧಶರಥ್‌ಸಿಂಗ್ ಮನಗೂಳಿ ಅವರು ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿದರು. ಶ್ರೀ ಖಾಸ್ಗತೇಶ್ವರ ಮಠದ ಉಸ್ತುವಾರಿ ವೇ.ಮುರುಘೇಶ ವಿರಕ್ತಮಠ ಸಾನಿದ್ಯ ವಹಿಸಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೌಟಿಲ್ಯ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ರಾಜು ಸಜ್ಜನ ಅವರು ವಹಿಸಿದ್ದರು.
ಇದೇ ಸಮಯದಲ್ಲಿ ಜಿನಿಯಸ್ ಸ್ಟೂಡಿಯಂಟ್ ಅವಾರ್ಡ ಪರಿಕ್ಷೆಯಲ್ಲಿ ಶೇ.೬೦ ಕ್ಕಿಂತ ಹೆಚ್ಚು ಅಂಕ ಪಡೆದ ೧೦೦ ವಿದ್ಯಾರ್ಥಿಗಳಿಗೆ ಗೋಲ್ಡ್ ಮೇಡಲ್ ಹಾಗೂ ಟಾಫ್ ೫ ವಿದ್ಯಾರ್ಥಿಗಳಿಗೆ ಗೋಲ್ಡ್ ಮೇಡಲ್ ಜೊತೆಗೆ ೫೦ ಸಾವಿರ ಸ್ಕಾಲರ್ ಶಿಫ್ ಮತ್ತು ೬ರಿಂದ ೧೦ನೇ ರ‍್ಯಾಂಕ್ ಪಡೆದ ವಿದ್ಯಾರ್ಥಿಗಳಿಗೆ ೩೦ ಸಾವಿರ ಸ್ಕಾಲ್‌ಶಿಫ್ ಮತ್ತು ಪ್ರಶಸ್ತಿ ಪತ್ರ ನೀಡಲಾಯಿತು.
ಜಿನಿಯಸ್ ಸ್ಟೂಡಿಯಂಟ್ ಅವಾರ್ಡ ಪರಿಕ್ಷೆಯಲ್ಲಿ ಶೇ.೯೬ ಅಂಕಗಳೊAದಿಗೆ ಪ್ರಥಮಸ್ಥಾನ ಪಡೆದ ಅವಾರ್ಡಗಿಟ್ಟಿಸಿಕೊಂಡ ಕೇಂಭಾವಿ ತಾಲೂಕಿನ ಅಚ್ಚುತ್ತಗೌಡ ತುಂಬಗಿ ಇತನಿಗೆ ಟ್ರೋಪಿ ಜೊತೆ ಸಂಪೂರ್ಣ ಉಚಿತ ಶಿಕ್ಷಣಕ್ಕೆ ಆಯ್ಕೆಯ ಘೋಷಣೆಯ ಜೊತೆಗೆ ಸನ್ಮಾನ ಮಾಡಲಾಯಿತು.
ವೇದಿಕೆಯ ಮೇಲೆ ಪುರಸಭಾ ಮಾಜಿ ಸದಸ್ಯ ಮುತ್ತಪ್ಪಣ್ಣ ಚಮಲಾಪೂರ, ಅರ್ಬನ್ ಬ್ಯಾಂಕ್ ಅಧ್ಯಕ್ಷ ಕೆ.ಸಿ.ಸಜ್ಜನ, ಪುರಸಭಾ ಮಾಜಿ ಸದಸ್ಯ ಅಣ್ಣಾಜಿ ಜಗತಾಪ, ಬಸವೇಶ್ವರ ಬ್ಯಾಂಕ್ ಅಧ್ಯಕ್ಷ ಕಾಶಿನಾಥ ಮುರಾಳ, ಬಾಪೂಜಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಘನಶಾಮ ಚವ್ಹಾಣ, ಪುರಸಭಾ ಮಾಜಿ ಸದಸ್ಯ ಮಾನಸಿಂಗ್ ಕೊಕಟನೂರ, ಪಿಕೆಪಿಎಸ್ ಅಧ್ಯಕ್ಷ ಗುರಸಂಗಪ್ಪ ಕಶೆಟ್ಟಿ, ಅಶೋಕ ಕೆಂಬಾವಿ, ಡಿ.ಕೆ.ಪಾಟೀಲ, ಅಶೋಕ ಬಳಗನಾರ, ಜಗದೀಶ ಬಿಳೇಭಾವಿ, ಅಶೋಕ ಚಿನಗುಡಿ, ನರಸಿಂಗ್ ವಿಜಾಪೂರ, ವಿರೇಶ ಬಾಗೇವಾಡಿ, ಶಿವರಾಜ ಬಿರಾದಾರ, ಎಸ್.ಆಯ್.ಚೌದ್ರಿ, ಹಣಮಂತ್ರಾಯಗೌಡ ಬಾಗೇವಾಡಿ, ಶ್ರದ್ದಾನಂದ ತುಂಬಗಿ, ಕಾಶಿನಾಥ ಹಡಪದ, ಮೊದಲಾದವರ ಉಪಸ್ಥಿತರಿದ್ದರು.
ಪ್ರಾಚಾರ್ಯ ಧರ್ಮಣ್ಣ ಸ್ವಾಗತಿಸಿದರು. ಮಹಾಂತೇಶ ಮುರಾಳ ನಿರೂಪಿಸಿದರು. ನಸೀಮಾ ವಂದಿಸಿದರು.