
ಚನ್ನಮ್ಮನ ಕಿತ್ತೂರು,ಜೂ.೯: ಪ್ರತಿಯೊಬ್ಬರೂ ತಮ್ಮ ಮನೆಯ ಆವರಣ ಅಥವಾ ಹೊಲಗಳಲ್ಲಿ ಸಸಿ ನೆಟ್ಟು ಬೆಳೆಸಿ ಪೋಷಿಸಬೇಕು. ಮುಂದಿನ ಪಿಳಿಗೆಗೆ ಪ್ರಕೃತಿಯನ್ನು ಉತ್ತಮ ರೀತಿಯಲ್ಲಿ ಉಳಿಸುವ ಜವಾಬ್ದಾರಿ ನಮ್ಮೆಲ್ಲರದ್ದಾಗಿದೆ ಎಂದು ತಾಲೂಕಿನ ಕತ್ರಿದಡ್ಡಿ ಸರಕಾರಿ ಪ್ರೌಢಶಾಲೆಯ ಇಕೋ ಕ್ಲಬ್ ನೂಡಲ್ ಅಧಿಕಾರಿ ಶಿಕ್ಷಕ ಮಲ್ಲಿಕಾರ್ಜುನ ಕದಂ ಮಾತನಾಡಿದರು.
ಶಾಲಾ ಆವರಣದಲ್ಲಿ ಕ್ಲಬ್ ಆಶ್ರಯದಲ್ಲಿ ವಿಶ್ವ ಪರಿಸರ ದಿನಾಚರಣೆ ಆಚರಿಸಲಾಯಿತು. ಕಾರ್ಯಕ್ರಮದ ಮುಖ್ಯ ಅಥಿತಿಗಳಾಗಿ ಮಾತನಾಡಿ ನಾವೆಲ್ಲರೂ ಪರಿಸರ ರಕ್ಷಣೆಗೆ ಮುಂದಾಗಬೇಕಾಗಿದೆ. ಪರಿಸರವಿದ್ದರೆ ನಾವು-ನೀವೆಲ್ಲರೂ ಬದುಕಲು ಸಾಧ್ಯವೆಂದು ತಿಳಿಹೇಳಿದರು.
ಸಹಶಿಕ್ಷಕ ಜೆ.ಸಿ.ಇತಾಪೆ ಮಾತನಾಡಿ ಅಭಿವೃದ್ಧಿ ಹೆಸರಿನಲ್ಲಿ ಕಾಡನ್ನು ಕಡಿದುಹಾಕುತ್ತಿದ್ದೇವೆ. ಮುಂದಿನ ಪಿಳಿಗೆಗೆ ಉತ್ತಮ ಪರಿಸರ ಇಲ್ಲದಂತಾಗುತ್ತದೆ ಅದಕ್ಕಾಗಿ ಸಸಿ ನೆಟ್ಟು ಪರಿಸರ ಉಳಿಸಲು ಎಲ್ಲರೂ ಕೈಜೋಡಿಸಬೇಕೆಂದರು.
ಸಹಶಿಕ್ಷಕಿ ಜ್ಯೋತಿ ಘಟಕಂಬಳೆ ಪರಿಸರ ದಿನಾಚಣೆ ಕುರಿತು ಮಕ್ಕಳಿಗೆ ತಿಳಿಹೇಳಿದರು. ವಿದ್ಯಾರ್ಥಿಗಳು ಪರಿಸರ ಮಾಲಿನ್ಯ ಪ್ಲಾಸ್ಟಿಕ ಮುಕ್ತ ಕುರಿತು ಮಾತನಾಡಿದರು. ಔಷಧಿ ಗಿಡ ಸೇರಿದಂತೆ ವಿವಿಧ ಗಿಡಗಳನ್ನು ಶಾಲಾ ಆವರಣದಲ್ಲಿ ನೆಡಲಾಯಿತು. ಶಿಕ್ಷಕ ಮಹೇಶ ಹೊಂಗಲ, ಸುಮನ್ ಭಟ್, ಉಜ್ವಲ್ ಪಾಟೀಲ, ಶಾರದಾ ನಾಯಕ, ಮಹೇಶ ನಂದಿಹಳ್ಳಿ, ಬಿಹಾರ್ ಚಲವಾದಿ, ಮಹೇಶ ದೊಡಮನಿ, ಎಂ.ಆರ್. ಕೋಡೋಳ್ಳಿ, ಗ್ರಾಪಂ ಸರ್ವಸದಸ್ಯರು, ಅಧ್ಯಕ್ಷ-ಉಪಾಧ್ಯಕ್ಷ, ಪಿಡಿಓ, ಶಾಲಾ ವಿದ್ಯಾರ್ಥಿಗಳು ಶಿಕ್ಷಕರು ಸಿಬ್ಬಂದಿ, ಸಾರ್ವಜನಿಕರಿದ್ದರು.