ಬೀದರ್. ಸೆ. 11:ಜಾನಪದ ಸಂಸ್ಕೃತಿ ಎಂಬುದು ನಮ್ಮ ಹಿರಿಯರು ನೀಡಿದ್ದು, ಅದನ್ನು ಆಚರಣೆ ಹಾಗೂ ವಿಚಾರಣೆಯಲ್ಲಿ ತರುವ ಮೂಲಕ ಉಳಿಸಿ ಬೆಳೆಸಬೇಕಾಗಿದೆ ಎಂದು ಜಿಲ್ಲಾ ಪಂಚಾಯತ ಮುಖ್ಯ ಲೆಕ್ಕಾಧಿಕಾರಿ ಶ್ರೀಕಾಂತ ವೈರಾಗೆ ನುಡಿದರು.
ಕರ್ನಾಟಕ ಜಾನಪದ ಪರಿಷತ್ತು ತಾಲೂಕು ಹಾಗೂ ಜಿಲ್ಲಾ ಘಟಕ ಮತ್ತು ಓಂ ಸಿದ್ದಿವಿನಾಯಕ ಪದವಿ ಮಹವಿದ್ಯಾಲಯದ ಸಹಕಾರದೊಂದಿಗೆ ನಗರದ ಕರ್ನಾಟಕ ಸಾಹಿತ್ಯ ಸಂಘದಲ್ಲಿ ಬುಧವಾರ ಆಯೋಜಿಸಲಾಗಿದ್ದ ವಿಶ್ವ ಜಾನಪದ ದಿನಾಚರಣೆ ಉದ್ಘಾಟಿಸಿ ಮಾತನಾಡಿ, ಜಿಲ್ಲೆಯಲ್ಲಿ ಮುಂದಿನ ದಿನಗಳಲ್ಲಿ ನಡೆಯಲಿರುವ ರಾಷ್ಟ್ರ ಮಟ್ಟದ ಜಾನಪದ ಸಾಂಸ್ಕೃತಿಕ ಕಾರ್ಯಕ್ರಮಕ್ಕಾಗಿ ಜಿಲ್ಲಾ ಪಂಚಾಯತ ವತಿಯಿಂದ 50 ಲಕ್ಷ ಅನುದಾನಕ್ಕೆ ಮನವಿಸಿದ್ದಾರೆ. ಕಡಿಮೆ ಎಂದರು 25 ಲಕ್ಷದ ವರೆಗೆ ಅನುದಾನ ಕಲ್ಪಿಸುವ ವ್ಯವಸ್ಥೆ ಮಾಡಲಾಗುವುದು ಎಂದು ವೈರಾಗೆ ಭರವಸೆ ನೀಡಿದ ಅವರು ಇಂತಹ ಜನಪದ ಸಂಸ್ಕೃತಿ ಉಳಿಸಲು ನಾವು ಕೂಡ ನಿಮ್ಮೊಂದಿಗೆ ಕೈಜೋಡಿಸುತ್ತೇವೆ ಎಂದರು.
ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷ ಪೆÇ್ರ. ಶಂಭುಲಿಂಗ ಕಾಮಣ್ಣ ಜನಪದ ಸಂಸ್ಕೃತಿ ಕುರಿತು ಉಪನ್ಯಾಸ ನೀಡಿ, ನೀತಿ, ಸಂದೇಶ ಹಾಗೂ ಮಾನವೀಯ ಮೌಲ್ಯಗಳು ಜನಪದ ಸಾಹಿತ್ಯದಲ್ಲಿ ಅಡಗಿವೆ ಎಂದರು.
ಜನಪದ ಸಂಸ್ಕೃತಿ ಪರಿಶುದ್ದವಾಗಿದೆ. ಇಲ್ಲಿ ತೊರಿಕೆ ಇಲ್ಲ. ನುಡಿದಂತೆ ನಡೆಯುವ ಜನಪದ ಸಂಸ್ಕೃತಿಯಾಗಿದೆ. ಜನಪದರು ತಾಯಿಗೆ ದೇವರು ಎಂದವರು. ಅಕ್ಷರ ಕಲಿತವ ಭ್ರಷ್ಟರಾಗಬಹುದು ಆದರೆ ಸಂಸ್ಕೃತಿ ಕಲಿತವ ಎಂದು ಭ್ರಷ್ಟರಾಗಲ್ಲ.
ಇಂದಿನ ಯಾಂತ್ರಿಕ ಯುಗದಲ್ಲಿ ಯುವ ಪೀಳಿಗೆಯಲ್ಲಿ ಸಂಸ್ಕೃತಿ ಇಲ್ಲದ ಕಾರಣ ಬೆಂಗಳೂರನಂತಹ ನಗರದಲ್ಲಿ ಪ್ರತಿ ದಿನ ಸಾವಿರಾರು ಸಂಖ್ಯೆಯಲ್ಲಿ ವಿಚ್ಛೇದನ ಪ್ರಕರಣಗಳು ನಡೆಯುತ್ತಿವೆ. ಗಂಡ-ಹೆಂಡತಿ ಎಂಬುದು ಆಟಿಕೆ ವಸ್ತುವಾಗಿದೆ ಎಂದು ಕಾಮಣ್ಣ ಕಳವಳ ವ್ಯಕ್ತಪಡಿಸಿದರು.
ಒಂದು ವೇಳೆ ಸೆಟಲೈಟ್ ಸಮಸ್ಯೆಯಿಂದ ಮೊಬೈಲ್ ಬಂದ ಆದರೆ ಶೇ. 70 ರಷ್ಟು ಜನ ಹುಚ್ಚಾಗುತ್ತಾರೆ. ಉಳಿದ ಶೇ.30ರಷ್ಟಿರುವ ಜನರಿಗೆ ಕಲ್ಲಿನಿಂದ ಹೊಡೆಯುತ್ತಾರೆ. ಯಾವ ವಸ್ತುಗಳು ಮಾನವನಿಗೆ ಪೂರಕವಾಗಬೇಕಾಗಿದ್ದವು ಅವುಗಳು ಮಾರಕವಾಗಿ ಪರಿಣಮಿಸಿವೆ ಎಂದರು.
ರಾಷ್ಟ್ರೀಯ ಜನಪದ ಬುಡಕಟ್ಟು ಕಲಾ ಪರಿಷತ್ತು ನ್ಯೂ ದೆಹಲಿಯ ಪ್ರಧಾನ ಕಾರ್ಯದರ್ಶಿ ಡಾ. ರಾಜಕುಮಾರ ಹೆಬ್ಬಾಳೆ ಮಾತನಾಡಿ. ಪ್ರತಿ ವರ್ಷ ಆಗಸ್ಟ 22 ರಂದು ವಿಶ್ವ ಜಾನಪದ ದಿನಾಚರಣೆ ಆಚರಿಸಲಾಗುತ್ತಿದೆ. ಭವ್ಯ ಭಾರತದ ಸಂಸ್ಕೃತಿ ಉಳಿಸಿ ಯುವ ಪೀಳಿಗೆಗೆ ಪರಿಚಯ ಮಾಡುವ ಉದ್ದೇಶದಿಂದ ನಾವು ಕೂಡ ಕಾಲೇಜು ವಿದ್ಯಾರ್ಥಿಗಳಿಗಾಗಿ ಇಂತಹ ಕಾರ್ಯಕ್ರಮ ಆಯೇಜಿಸಿದ್ದೇವೆ ಎಂದರು.
ಕರ್ನಾಟಕ ಜಾನಪದ ಪರಿಷತ್ ಜಿಲ್ಲಾಧ್ಯಕ್ಷ ಪೆÇ್ರ. ಜಗನ್ನಾಥ ಹೆಬ್ಬಾಳೆ ಅಧ್ಯಕ್ಷತೆ ವಹಿಸಿ ಬೀದರನಲ್ಲಿ ಮೂರು ದಿನಗಳ ವರೆಗೆ ದೇಶದ ಪ್ರತಿ ರಾಜ್ಯದಿಂದ ವಿವಿಧ ಕಲಾ ತಂಡಗಳನ್ನು ಕರೆತರುವ ಮೂಲಕ ಜನಪದ ಸಂಸ್ಕೃತಿ ಕಾರ್ಯಕ್ರಮ ಆಯೋಜಿಸುವುದಲ್ಲದೇ ಕಾರ್ಯಕ್ರಮದ ಸ್ಮರಣ ಸಂಚಿಕೆ ಕೂಡ ಹೊರತರಲಾಗುವುದು ಇದಕ್ಕೆ ಎಲ್ಲರ ಸಹಕಾರ ಅಗತ್ಯ ಎಂದು ನುಡಿದರು.
ಓಂ ಸಿದ್ದಿ ವಿನಾಯಕ ಕಾಲೇಜಿನ ಪ್ರಾಚಾರ್ಯರಾದ ಪೆÇ್ರ. ಸಿದ್ರಾಮ ಬಿಚಕುಂದೆ ಭಾಗವಹಿಸಿ ಮಾತನಾಡಿದರು. ಜಾನಪದ ಪರಿಷತ್ತಿನ ಕಾರ್ಯದರ್ಶಿ ಡಾ. ಸುನೀತಾ ಕೂಡ್ಲಿಕರ್ ಪ್ರಾಸ್ತಾವಿಕ ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ನಿಜಲಿಂಗಪ್ಪ ತಗಾರೆ ಸ್ವಾಗತಿಸಿದರು. ಪೆÇ್ರ. ಸಂಜುಕುಮಾರ ತಾಂದಳೆ ನಿರೂಪಿಸಿದರು. ಎಸ್ ಬಿ ಕುಚಬಾಳ, ಮಲ್ಲಮ್ಮ ಸಂತಾಜಿ ಇದ್ದರು























