
ಚನ್ನಮ್ಮನ ಕಿತ್ತೂರು,ಮೇ21: ದೇಶದ ರಕ್ಷಣೆಗಾಗಿ ನಮ್ಮೇಲ್ಲರ ನಡೆ ಎಂಬ ದೇಹ ವಾಕ್ಯದೊಂದಿಗೆ ಎತ್ತಿನ ಚಕ್ಕಡಿಯಲ್ಲಿ ಭುವನೇಶ್ವರಿ ಭಾವಚಿತ್ರ ಇಟ್ಟುಕೊಂಡು ಹಾಗೂ 35 ಮೀಟರ್ ಧ್ವಜದ ಬೃಹತ್ ತಿರಂಗಾಯಾತ್ರೆ ಅದ್ದೂರಿಯಿಂದ ನಡೆಯಿತು.
ಪಟ್ಟಣದ ಕೋಟೆ ಆವರಣದಲ್ಲಿ ಯಾತ್ರೆಗೆ ಮಾಜಿ ಶಾಸಕ ಮಹಾಂತೇಶ ದೊಡ್ಡಗೌಡರ ಚಾಲನೆ ನೀಡಿದರು. ನಮ್ಮ ಸೈನಿಕರು ಭಯೋತ್ಪಾದಕರ ವಿರುದ್ಧ ನಡೆಸಿದ ಅಪರೇಷನ್ ಸಿಂಧೂರ ಸಮರ ಯಶಸ್ಸು ಕಂಡ ಹಿನ್ನೆಲೆಯಲ್ಲಿ ಬೃಹತ್ ತಿರಂಗಾಯಾತ್ರೆ ಅರಳಿಕಟ್ಟೆ ಮಾರ್ಗದಿಂದ ಪ್ರಾರಂಭವಾದ ರಾಷ್ಟ್ರೀಯ ಹೆದ್ದಾರಿ 4ರ ಪಕ್ಕ ಚನ್ನಮ್ಮನ ವರ್ತುಳದಲ್ಲಿ ಸಮಾವೇಶಗೊಂಡಿತು.
ನಂತರ ನಿಚ್ಚಣಕಿ ಶ್ರೀ ಗುರು ಮಡಿವಾಳೇಶ್ವರ ಮಠದ ಪಂಚಾಕ್ಷರಿ ಸ್ವಾಮಿಜೀ ಸಾನಿಧ್ಯವಹಿಸಿ ಚನ್ನಮ್ಮಾಜಿಗೆ ಮಾಲಾರ್ಪಣೆ ಮಾಡಿ ಮಾತನಾಡಿದರು.
ನಿವೃತ್ತ ಸೈನಿಕ, ಆರ್ಯುವೇದಿಕ ವೈದ್ಯ ಡಾ. ಎಸ್.ಪಿ. ಹಿರೇಮಠ ಪ್ರಾಸ್ತಾವಿಕವಾಗಿ ಮಾತನಾಡಿದರು.
ಆರ್ಶೀವಚನ ನೀಡಿ ಮಾತನಾಡಿದ ರಾಜಗುರು ಸಂಸ್ಥಾನ ಕಲ್ಮಠದ ಶ್ರೀ ಮಡಿವಾಳ ರಾಜಯೋಗ್ರೀಂದ್ರ ಸ್ವಾಮಿಜಿ ನಾವು-ನೀವು ಬದುಕಿದ್ದೇವೆಂದರೆ ಗಡಿಯಲ್ಲಿ ತಮ್ಮ ಜೀವನ ಹಂಗು ತೊರೆದು ನಮ್ಮ ರಕ್ಷಣೆ ಮಾಡುವ ಸೈನಿಕರಿಂದಲೇ. ಅವರಿಲ್ಲದಿದ್ದರೆ ನಾವು-ನೀವು ಇಲ್ಲ. ಹಾಗಾಗಿ ಪ್ರಧಾನಿಯವರ ನಾಯಕತ್ವದಲ್ಲಿ ನೀಡಿರುವ ತಕ್ಕ ಉತ್ತರವನ್ನು ಇಡೀ ವಿಶ್ವವೇ ನೋಡಿದೆ ಎಂದರು.
ಈ ವೇಳೆ ದೇವರಶೀಗಿಹಳ್ಳಿ ವೀರೇಶ್ವರ ಸ್ವಾಮಿಜೀ, ಜಿಲ್ಲಾಧ್ಯಕ್ಷ ಸುಬಾಸ್ ಪಾಟೀಲ, ಮಂಡಳದ್ಯಕ್ಷ ಶ್ರೀಕರ ಕುಲಕರ್ಣಿ, ಬಿಜೆಪಿ ಮುಖಂಡೆ ಲಕ್ಷ್ಮೀ ಇನಾಮದಾರ, ಸಂದೀಪ ದೇಶಪಾಂಡೆ, ಬಸವರಾಜ ಪರವಣ್ಣನವರ, ರಾಜೇಂದ್ರ ಇನಾಮದಾರ, ಜಗದೀಶ ವಸ್ತ್ರದ, ನ್ಯಾಯವಾದಿ ಸಂಘದ ಅಧ್ಯಕ್ಷ ವಿಶ್ವನಾಥ ಬಿಕ್ಕಣ್ಣವರ, ಅರುಣ ಬಿಕ್ಕಣ್ಣನವರ, ಸರಸ್ವತಿ ಹೈಬತ್ತಿ, ಉಮಾದೇವಿ ಬಿಕ್ಕಣ್ಣನವರ, ನಿಜಲಿಂಗಯ್ಯಾ ಹಿರೇಮಠ, ಯಲ್ಲಪ್ಪ ವಕ್ಕುಂದ, ಲಕ್ಷ್ಮಣ ಸಂಶಿ, ಬಸನಗೌಡ ಕೊಳದೂರ, ಬಸನಗೌಡ ಸಿದ್ರಾಮಣಿ, ಮಾಜಿ ಜಿಪಂ ಸದಸ್ಯೆ ರಾಧಾ ಕಾದ್ರೋಳ್ಳಿ, ಉಳವಪ್ಪ ಉಳ್ಳಾಗಡ್ಡಿ, ಶಿವು ಹನಮಸಾಗರ, ಬಸು ಮಾತನವರ, ಶಿವಾನಂದ ಬೋಗೂರ, ಪಾಪು ನರಗುಂದ, ದಿನೇಶ ಒಳಸಂಗ, ಅಪ್ಪೇಶ ದಳವಾಯಿ, ವಿಜಯಕುಮಾರ ಶಿಂದೆ, ಮಡಿವಾಳಪ್ಪ ವರಗನ್ನವರ, ರಮೇಶ ಉಗರಖೋಡ, ವೈದ್ಯರ, ನ್ಯಾಯವಾದಿಗಳ ಹಾಗೂ ಮಾಜಿ ಸೈನಿಕರ ಸಂಘಟನೆ, ಮಹಿಳಾ ಸಂಗಟನೆಗಳು ಸೇರಿದಂತೆ ವಿವಿಧ ಸಂಘಟಣೆಗಳು, ಮಹಿಳೆಯರು, ಮಕ್ಕಳು, ರೈತರು, ಸಾರ್ವಜನಿಕರಿದ್ದರು.