ಸ್ವಾತಂತ್ರ‍್ಯ ಪೂರ್ವದಲ್ಲಿ ನಮ್ಮನ್ನು ಆಳಿದ ದೇಶವನ್ನು ನಾವು ಆಳಿ ಬಂದಿದ್ದೇವೆ : ಟಿ ಟಿ ಹಗೇದಾಳ

ಕೊಲ್ಹಾರ:ಅ.೧೬: ಸ್ವಾತಂತ್ರ‍್ಯ ಪೂರ್ವದಲ್ಲಿ ನಮ್ಮನ್ನು ಆಳಿದ ಬ್ರಿಟಿಷರ (ಬ್ರಿಟನ್ ) ದೇಶವನ್ನು ನಾವು ಇಂದು ಆಳಿ ಬಂದಿದ್ದೇವೆ. ಹೀಗಾಗಿ ಇಂದು ನಮ್ಮ ದೇಶದ ತಾಕತ್ತು ಎಂತದ್ದು ಎಂದು ಇಡೀ ಜಗತ್ತಿಗೆ ತೋರಿಸಿದ್ದೇವೆ ಎಂದು ಶ್ರೀ ಸಂಗಮೇಶ್ವರ ವಿದ್ಯಾವರ್ಧಕ ಸಂಘದ ನಿರ್ದೇಶಕರಾದ ಟಿ ಟಿ ಹಗೇದಾಳ ಹೇಳಿದರು.
ಪಟ್ಟಣದ ಶ್ರೀ ಸಂಗಮೇಶ್ವರ ವಿದ್ಯಾವರ್ಧಕ ಸಂಘದಲ್ಲಿ ಶುಕ್ರವಾರ ವಿವಿಧ ಶಾಲಾ ಕಾಲೇಜುಗಳ ಸಹಯೋಗದಲ್ಲಿ ಹಮ್ಮಿಕೊಂಡ ೭೯ ನೇ ಸ್ವಾತಂತ್ರ‍್ಯ ದಿನಾಚರಣೆಯ ಕಾರ್ಯಕ್ರಮದಲ್ಲಿ ಅತಿಥಿ ಸ್ಥಾನ ವಹಿಸಿ ಧ್ವಜ ಸಂದೇಶ ನೀಡುತ್ತಾ ಮಾತನಾಡಿದ ಅವರು.ಸ್ವಾತಂತ್ರ‍್ಯ ಪೂರ್ವದಲ್ಲಿ ಭಾರತ ದೇಶವನ್ನು ೫೦೦ ಸಂಸ್ಥಾನಗಳು ಆಳಿದವು. ಏಕೆಂದರೆ ಇಲ್ಲಿ ಅನೇಕ ಆಚರಣೆಗಳು,ಭಾಷೆಗಳು, ಧರ್ಮ, ಜಾತಿಗಳಿದ್ದವು ಹೀಗಾಗಿ ಬ್ರಿಟಿಷ್ ರಿಗೆ ಬಹಳ ಅನಕೂಲವಾಗಿತ್ತು. ಕಾರಣ ಅವರು ನಮ್ಮನ್ನು ಆಳಿ ಇಲ್ಲಿರುವ ಸಂಪತ್ತನ್ನು ಲೂಟಿ ಮಾಡಿಕೊಂಡು ಹೋದರು ಎಂದರು.
ಸ್ವಾತAತ್ರ‍್ಯ ನಂತರ ಭಾರತ ದೇಶ ೭೮ವರ್ಷಗಳಲ್ಲಿ ಎಲ್ಲ ಕ್ಷೇತ್ರಗಳಲ್ಲಿ ಬಲಿಷ್ಠವಾಗಿ ಬೆಳೆದು ನಿಂತಿದೆ. ೨೧ನೇ ಶತಮಾನದಲ್ಲಿ ಬ್ರಿಟನ್ ದೇಶವನ್ನು ನಾವು ಆಳಿ ಬಂದಿದ್ದೇವೆ. ಹೀಗಾಗಿ ಇವತ್ತಿನ ವಿದ್ಯಾರ್ಥಿಗಳು ಮುಂದಿನ ದಿನಗಳಲ್ಲಿ ಈ ದೇಶದ ಪ್ರಧಾನ ನರೇಂದ್ರ ಮೋದಿಯವರಂತೆ ಕುಟುಂಬ ಹಾಗೂ ದೇಶ ರಕ್ಷಣೆಗೆ ಪ್ರಾಮಾಣಿಕವಾಗಿ ದುಡಿಯಬೇಕು ಎಂದು ಕರೆ ನೀಡಿದರು.
ಬ್ರಿಟಿಷರು ಸ್ವಾತಂತ್ರ‍್ಯ ಕೊಡುವ ವೇಳೆ ತಮ್ಮ ಪಾಲಿಸಿಯನ್ನು ಬಳಿಸಿ ಭಾರತವನ್ನು ವಿಭಜನೆ ಮಾಡಿದರು ಅವರ ಜೊತೆ ನಮ್ಮವರು ಕೂಡಾ ಇದ್ದರು. ಅದೇ ಬ್ರಿಟಿಷ್ ಪಾಲಿಸಿ ಇಂದು ಕೂಡಾ ನಮ್ಮ ನಾಯಕರಲ್ಲಿ ಬಳುವಳಿಯಾಗಿ ಬಂದಿದೆ ಅದು ದುರಂತ ಅದನ್ನು ನಾವು ಎದುರಿಸಬೇಕಾಗಿದೆ ಹೀಗಾಗಿ ದೇಶ ನಮಗೆ ಏನು ಕೊಟ್ಟಿದೆ ಅನ್ನುವುದಕ್ಕಿಂತ ನಾವೇನು ಕೊಟ್ಟಿದ್ದೇವೆ ಎನ್ನುವುದು ಬಹಳ ಮುಖ್ಯವಾಗಿದೆ ಎಂದರು.
ಭಾರತ ಸದೃಢವಾಗಿರಬೇಕಾದರೆ ಭಾರತೀಯ ಕುಟುಂಬಗಳು ಸದೃಢವಾಗಿರಬೇಕು. ಅವುಗಳನ್ನು ಸದೃಢವಾಗಿಡಲು ತಂಬಾಕು ಮುಕ್ತ, ಮದ್ಯಪಾನ ರಹಿತ, ಸ್ವಚ್ಛ ಹಾಗೂ ಸುಂದರವಾದ ಪ್ರಕೃತಿ ಯನ್ನು ಪ್ರೀತಿಸುವ ಕುಟುಂಬಗಳನ್ನು ನಾವೆಲ್ಲಾ ನಿರ್ಮಿಸಬೇಕು ಎಂದು ಸಲಹೆ ನೀಡುತ್ತಾ ಸದೃಢ ಭಾರತಕ್ಕೆ ನಾವೆಲ್ಲಾ ಅನಿಗೋಳ್ಳೋಣ ಎಂದು ಕರೆ ನೀಡಿದರು.
ಈ ವೇಳೆ ಶ್ರೀ ಸಂಗಮೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಬಿ ಯು ಗಿಡ್ಡಪ್ಪಗೋಳ ದ್ವಜಾರೋಹಣ ನೆರವೇರಿಸಿದರು. ದೈಹಿಕ ಶಿಕ್ಷಣ ಉಪನ್ಯಾಸಕ ರಮೇಶ ತೋಟದ ದ್ವಜಾರೋಹಣಕ್ಕೆ ಸ್ವಾಗತ ಕೋರಿದರು. ನಂತರ ಶ್ರೀ ಸಂಗಮೇಶ್ವರ ವಿದ್ಯಾಸಂಸ್ಥೆಯ ಶಾಲಾ ಕಾಲೇಜಿನ ವಿದ್ಯಾರ್ಥಿಗಳಿಂದ ಆಕರ್ಷಕ ಪಥ ಸಂಚಲನ ಜರುಗಿತು. ಪಥ ಸಂಚಲನ ಕಾರ್ಯಕ್ರಮವನ್ನು ದೈಹಿಕ ಶಿಕ್ಷಕ ಮಲ್ಲಿಕಾರ್ಜುನ ಕುಬಕಡ್ಡಿ ನಡೆಸಿಕೊಟ್ಟರು.
ಈ ವೇಳೆ ಸಮಾರಂಭದಲ್ಲಿ ಅತಿಥಿಗಳಾಗಿ ಸಂಸ್ಥೆಯ ಕಾರ್ಯದರ್ಶಿಗಳಾದ ಎಸ್ ಬಿ ಪತಂಗಿ, ನಿರ್ದೇಶಕರಾದ ಎನ್ ಕೆ ಮೇಲಗಿರಿ, ಎಸ್ ಸಿ ಕುಂಬಾರ, ಸಿ ಎಸ್ ಗಿಡ್ಡಪ್ಪಗೋಳ, ಟಿ ಟಿ ಹಗೇದಾಳ, ಎಸ್ ಸಿ ಶೀಲವಂತ, ಪ್ರಚಾರ್ಯರಾದ ಎಸ್ ಜಿ ಜಮಖಂಡಿ, ಡಾ ಎ ಡಿ ಚವ್ಹಾಣ, ಮುಖ್ಯ ಶಿಕ್ಷಕರಾದ ಆರ್ ಕೆ ಉಮರಾಣಿ, ವಾಯ್ ಜಿ ಶಿರೋಳ, ವ್ಹಿ ಜಿ ಕುಲಕರ್ಣಿ ಉಪಸ್ಥಿತರಿದ್ದರು.
ಪ್ರಾಚಾರ್ಯ ಡಾ ಎ ಡಿ ಚವ್ಹಾಣ ಸ್ವಾಗತಿಸಿದರು.ಉಪನ್ಯಾಸಕ ಎಸ್ ಎಸ್ ಗಾಣಿಗೇರ ನಿರೂಪಿಸಿದರು. ಮುಖ್ಯ ಶಿಕ್ಷಕ ವೈ ಜಿ ಶಿರೋಳ ವಂದಿಸಿದರು.