Home ಜಿಲ್ಲೆ ಕ್ಷೇತ್ರದ ಜನರ ಋಣ ನಾವು ಎಂದಿಗೂ ಮರೆಯಲು ಸಾಧ್ಯವಿಲ್ಲ: ಚಿದಾನಂದ ಸವದಿ

ಕ್ಷೇತ್ರದ ಜನರ ಋಣ ನಾವು ಎಂದಿಗೂ ಮರೆಯಲು ಸಾಧ್ಯವಿಲ್ಲ: ಚಿದಾನಂದ ಸವದಿ

ಅಥಣಿ :ಫೆ.17: ತಾಲೂಕಿನ ಜನತೆ ಒಬ್ಬ ರೈತನ ಮಗನನ್ನು ನಾಲ್ಕು ಬಾರಿ ಶಾಸಕನ್ನಾಗಿ ಮಾಡಿ, ಉಪ ಮುಖ್ಯಮಂತ್ರಿ ಸ್ಥಾನದವರೆಗೆ ಬೆಳೆಸಿದ್ದೀರಿ. ನಿಮ್ಮ ಈ ಋಣವನ್ನು ನಾವು ಎಂದಿಗೂ ಮರೆಯಲು ಸಾಧ್ಯವಿಲ್ಲ. ಅಭಿವೃದ್ಧಿ ಕೆಲಸಗಳ ಮೂಲಕ ಆ ಋಣವನ್ನು ತೀರಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ ಎಂದು ಯುವ ನಾಯಕ ಚಿದಾನಂದ ಸವದಿ ಹೇಳಿದರು.
ಅವರು ಸೋಮವಾರ ಇಲ್ಲಿನ ಸಾರ್ವಜನಿಕ ಆಸ್ಪತ್ರೆಯ ಸಭಾಂಗಣದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಅಂದತ್ವ ನಿಯಂತ್ರಣ ವಿಭಾಗ, ತಾಲೂಕ ಆರೋಗ್ಯ ಇಲಾಖೆ. ಲಕ್ಷ್ಮಣ ಸವದಿ ಫೌಂಡೇಶನ್ ಹಾಗೂ ಟೆಕೆ ಅಯ್ ಕ್ಲಿನಿಕ್ , ಸಾಂಗಲಿ ಇವರ ಆಶ್ರಯದಲ್ಲಿ ಶಾಸಕ ಲಕ್ಷ್ಮಣ ಸವದಿ ಅವರ 66ನೇ ಹುಟ್ಟುಹಬ್ಬದ ನಿಮಿತ್ಯ ಹಮ್ಮಿಕೊಳ್ಳಲಾಗಿದ್ದ ಉಚಿತ ಕಣ್ಣಿನ ತಪಾಸಣಾ ಶಿಬಿರವನ್ನು ಸಸಿಗೆ ನೀರೆರೆಯುವ ಮೂಲಕ ಉದ್ಘಾಟಿಸಿ ಮಾತನಾಡಿದರು. ನಮ್ಮ ದೇಹದ ಸೂಕ್ಷ್ಮ ಅಂಗವಾಗಿರುವ ಕಣ್ಣಿನ ಆರೋಗ್ಯ ಕಾಪಾಡಲು ಮತ್ತು ದೃಷ್ಟಿ ಸಮಸ್ಯೆ ಆರಂಭಿಕ ಹಂತದಲ್ಲಿ ಪತ್ತೆ ಹಚ್ಚಿ, ಅಮೂಲ್ಯವಾದ ಕಣ್ಣುಗಳ ರಕ್ಷಣೆ ಬಗ್ಗೆಯೂ ಸದಾ ಎಚ್ಚರ ವಹಿಸಬೇಕು. ಕಣ್ಣಿನ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ತೋರಿದ್ದೆ ಆದಲ್ಲಿ ಬದುಕೆಲ್ಲಾ ಅಂಧಾಕಾರದಲ್ಲಿ ಕಳೆಯುವ ಅಪಾಯವಿದ್ದು, ಈ ಬಗ್ಗೆ ನಾವೆಲ್ಲರೂ ಜಾಗೃತಿ ವಹಿಸಬೇಕು ಎಂದರು.
ಅಥಣಿ ಸಾರ್ವಜನಿಕ ಆಸ್ಪತ್ರೆಯು ರಾಜ್ಯದ ಅತ್ಯುತ್ತಮ 10 ಆಸ್ಪತ್ರೆಗಳಲ್ಲಿ ಒಂದಾಗಿರುವುದು ನಮ್ಮೆಲ್ಲರಿಗೆ ಹೆಮ್ಮೆ. ಇಲ್ಲಿ ಶಾಸಕರ ಪ್ರಯತ್ನದಿಂದ ಜನರಿಗೆ ಉತ್ತಮ ಆರೋಗ್ಯ ಸೇವೆಗಳನ್ನು ಇಲ್ಲಿನ ತಜ್ಞ ವೈದ್ಯರು ಮತ್ತು ಸಿಬ್ಬಂದಿ ಒದಗಿಸುತ್ತಿದ್ದಾರೆ. ಇದರ ಜೊತೆಗೆ ನನ್ನ ಹಾಗೂ ನಮ್ಮ ತಂದೆಯವರ ಹುಟ್ಟು ಹಬ್ಬದ ನಿಮಿತ್ಯ ಟೆಕೆ ನೇತ್ರ ಚಿಕಿತ್ಸಾ ಆಸ್ಪತ್ರೆಯ ಸಹಕಾರದಿಂದ ಅನೇಕ ಉಚಿತ ಶಿಬಿರಗಳನ್ನು ನಡೆಸುವ ಮೂಲಕ ಸಾವಿರಾರು ಜನರ ಅಂದತ್ವ ಸಮಸ್ಯೆಯನ್ನ ನಿವಾರಿಸಲಾಗಿದ್ದು, ಈ ಸಾಮಾಜಿಕ ಸೇವೆ ನಮಗೆ ಬಹಳಷ್ಟು ಖುಷಿ ತಂದಿದೆ. ಇಂತಹ ಆರೋಗ್ಯ ಸೇವೆಗಳಿಗೆ ಸವದಿ ಪರಿವಾರದಿಂದ ಯಾವತ್ತೂ ಸಹಕಾರ ಇರುತ್ತದೆ ಎಂದು ಹೇಳಿದರು.

ಪ್ರಾಸ್ತಾವಿಕವಾಗಿ ತಾಲೂಕಾ ವೈದ್ಯಾಧಿಕಾರಿ ಡಾ.ಬಸಗೌಡ ಕಾಗೆ ಮಾತನಾಡಿ ಅಥಣಿ ಮತ ಕ್ಷೇತ್ರದ ಶಾಸಕರಾಗಿರುವ ಲಕ್ಷ್ಮಣ ಸವದಿ ಅವರು ತಾಲೂಕಿನ ಬಡ ಜನತೆಗೆ ಉಚಿತ ಹಾಗೂ ಉತ್ತಮ ಆರೋಗ್ಯ ಸೇವೆಗಳು ದೊರಕಬೇಕು ಎಂಬ ಉದ್ದೇಶದಿಂದ ಅನೇಕ ಸೌಲಭ್ಯಗಳನ್ನ ಒದಗಿಸಿದ್ದಾರೆ. ಸು. 27 ಕೋಟಿ ರೂಪಾಯಿ ವೆಚ್ಚದಲ್ಲಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ನಿರ್ಮಾಣ ಕಾರ್ಯ ಪ್ರಗತಿ ಹಂತದಲ್ಲಿದ್ದು, ಇದರಿಂದ ತಾಲೂಕಿನ ಜನತೆಗೆ ಬಹಳಷ್ಟು ಅನುಕೂಲವಾಗಲಿದೆ. ಆಸ್ಪತ್ರೆಗೆ ಬರುವ ರೋಗಿಗಳಿಗೆ ಅನುಕೂಲವಾಗಲು ನೆರಳಿಗಾಗಿ ಶಾಸಕರ ನಿಧಿಯಿಂದ 10 ಲಕ್ಷ ರೂ. ವೆಚ್ಚದಲ್ಲಿ ಸುಸಜ್ಜಿತ ಶೆಡ್ ನಿರ್ಮಿಸಲಾಗುತ್ತಿದೆ, ಎಂದ ಅವರು ಶಾಸಕರ ಹುಟ್ಟು ಹಬ್ಬದ ನಿಮಿತ್ಯ ಅನೇಕ ವರ್ಷಗಳಿಂದ ನೇತ್ರ ಚಿಕಿತ್ಸಾ ಶಿಬಿರಗಳನ್ನು ಹಮ್ಮಿಕೊಳ್ಳಲಾಗುತ್ತಿದ್ದು, ಇದರಿಂದ ಸಾವಿರಾರು ಜನರಿಗೆ ಶಸ್ತ್ರಚಿಕಿತ್ಸೆ ಮೂಲಕ ಅಂದತ್ವ ನಿವಾರಣೆ ಮಾಡಲಾಗಿದೆ. ಶಾಸಕರ ಈ ಜನಪರ ಕಾಳಜಿಯನ್ನು ಪ್ರಶಂಶಿಸಿದ ಅವರು ಅವರ ಅನುಪಸ್ಥಿತಿಯಲ್ಲಿ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು ಕೋರಿದರು.

ನಂತರ 300ಕ್ಕೂ ಅಧಿಕ ಅಂಧತ್ವ ಸಮಸ್ಯೆ ಇರುವ ಜನರಿಗೆ ಚಿಕಿತ್ಸೆ ನೀಡಲಾಯಿತು. 250 ಜನರಿಗೆ ಮೋತಿಬಿಂದು ಶಸ್ತ್ರಚಿಕಿತ್ಸೆಗಾಗಿ ಸಾಂಗಲಿ ಆಸ್ಪತ್ರೆಗೆ ಕಳುಹಿಸಲಾಯಿತು.
ಶಿಬಿರಾರ್ಥಿಗಳಿಗೆ ಊಟದ ವ್ಯವಸ್ಥೆ ಮಾಡಿದ್ದ ಶಾಸಕ ಲಕ್ಷ್ಮಣ ಸವದಿ ಅವರ ಅಪ್ಪಟ ಅಭಿಮಾನಿ ಮಲ್ಲು ಕುಳ್ಳೋಳಿ ಹಾಗೂ ಮಿಲಿಂದ ಸಲಗರ ಅವರನ್ನು ಲಕ್ಷ್ಮಣ ಸವದಿ ಫೌಂಡೇಶನ್ ವತಿಯಿಂದ ಸತ್ಕರಿಸಿ ಗೌರವಿಸಲಾಯಿತು

ಈ ಸಂದರ್ಭದಲ್ಲಿ ಯುವ ಮುಖಂಡ ಬೀರಪ್ಪ ಯಕ್ಕಂಚಿ, ಟೆಕೆ ನೇತ್ರ ಚಿಕಿತ್ಸಾಲಯದ ಡಾ. ಆಕಾಶ ಎಂ. ಹಾಗೂ ಅಥಣಿ ಸಾರ್ವಜನಿಕ ಆಸ್ಪತ್ರೆಯ ನೇತ್ರ ತಜ್ಞ ಡಾ. ರಮೇಶ ಹುಲಕುಂದ, ಡಾ. ಎಸ್ ಬಿ ಕಲಮಡಿ. ಸಮಾಜ ಸೇವಕ ಮಲ್ಲು ಕುಲ್ಲೋಳ್ಳಿ, ಮಿಲಿಂದ್ ಸಲಗರ, ಮಹಾಂತೇಶ್ ಠಕ್ಕಣ್ಣವರ, ಪ್ರಕಾಶ್ ನರಟ್ಟಿ, ರಮೇಶ್ ಸಜ್ಜನ, ನವೀನ್ ಕತ್ರಾಳ. ಮಂಜು ನೂಲಿ. ಮಹಾಂತೇಶ ಬಾಡಗಿ. ಸುರೇಶ ವಾಲಿಕರ. ಮುತ್ತು ಮೋಕಾಶಿ, ಮಹಾಂತೇಶ ಕಾಂಬಳೆ, ಅಲ್ತಾಫ್ ಗಡ್ಡೇಕರ, ಶಂಭು ತೇರದಾರ, ಸೇರಿದಂತೆ ಹಲವರು ಉಪಸ್ಥಿತರಿದ್ದರು.