
ಇಂಡಿ: ಮೇ.25:ತಾಲೂಕಿನಲ್ಲಿ ಮಳೆಯು ಚೆನ್ನಾಗಿ ಆಗುತ್ತಿರುವದರಿಂದ ನರೇಗಾ ಯೋಜನೆಯಡಿ ನಿರ್ಮಾಣಗೊಂಡ ಅಮೃತ ಸರೋವರಗಳಲ್ಲಿ ನೀರು ಬಂದಿದೆ ಎಂದು ಇಒ ನಂದೀಪ ರಾಠೋಡ ತಿಳಿಸಿದರು.
ತಾ.ಪಂ ಸಭಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಬಬಲಾದ,ನಿಂಬಾಳ ಕೆಡಿ, ಬಸನಾಳ, ಝಳಕಿ, ಕಪನಿಂಬರಗಿ, ಕೋಳುರಗಿ ಅಮೃತ ಸರೋವರಗಳಿಗೆ ನೀರು ಬಂದಿದೆ.
ಇದು ಗ್ರಾಮಸ್ಥರಿಗೆ ಮತ್ತು ಸುತ್ತ ಮುತ್ತಲಿನ ಪ್ರದೇಶದ ಜನರಿಗೆ ಜನಜಾನುವಾರುಗಳಿಗೆ, ಪ್ರಾಣಿ ಪಕ್ಷಿಗಳಿಗೆ ಅನುಕೂಲವಾಗಲಿದೆ ಎಂದರು.
ರೈತರಿಗೆ ಅಂತರ್ಜಲ ಮಟ್ಟ ಹೆಚ್ಚಾಗಿ ಕೃಷಿಗೆ ಪೂರಕ ವಾಗಿದೆ.ಬೊರ ಮತ್ತು ಭಾವಿಗಳಿಗೆ ನೀರಿನ ಮಟ್ಟ ಹೆಚ್ಚಾಗಿ ಕೃಷಿ ಚಟುವಟಿಕೆಗಳಿಗೆ ಅನುಕೂಲ ವಾಗುತ್ತಿದೆ ಎಂದರು.