Home ಜಿಲ್ಲೆ ಕಲಬುರಗಿ ನಾಟಕ ನೋಡುವುದರಿಂದ ಮನುಷ್ಯರು ಯೋಚಿಸುವ ಲಹರಿ ಬದಲಾಗುತ್ತದೆ: ಅರುಂಧತಿ ನಾಗ್

ನಾಟಕ ನೋಡುವುದರಿಂದ ಮನುಷ್ಯರು ಯೋಚಿಸುವ ಲಹರಿ ಬದಲಾಗುತ್ತದೆ: ಅರುಂಧತಿ ನಾಗ್

ಕಲಬುರಗಿ, ಫೆ 21: ರಂಗಭೂಮಿಯ ಚಟುವಟಿಕೆಗಳು ಕೇವಲ ಮುಖ್ಯ ನಗರಗಳಿಗೆ ಸೀಮಿತವಾಗಿರುವ ಪ್ರಸ್ತುತ ಸಂದರ್ಭದಲ್ಲಿ ಜಿಲ್ಲಾಡಳಿತದವತಿಂದ ಕಲಬುರಗಿ ರಾಷ್ಟ್ರೀಯ ನಾಟಕೋತ್ಸವನ್ನು ಹಮ್ಮಿಕೊಳ್ಳುತ್ತಿರುವುದು ಹಾಗೂ ಅದರೊಂದಿಗೆ ನಮ್ಮ ರಂಗಶಂಕರ ಕೆಲಸ ಮಾಡುತ್ತಿರುವುದು ಸಂತಸದ ವಿಷಯ ಎಂದು ಹಿರಿಯ ರಂಗಕರ್ಮಿ ಅರುಂಧತಿ ನಾಗ್ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ಕಲಬುರಗಿ ಜಿಲ್ಲಾಡಳಿತ, ಕಲಬುರಗಿ ನೆಕ್ಸ್ಟ್ ಫೌಂಡೇಷನ್ ಮತ್ತು ರಂಗಶಂಕರ ಸಹಯೋಗದಲ್ಲಿ ಫೆಬ್ರವರಿ 21 ರಿಂದ 28 ರ ವರೆಗೆ ಹಮ್ಮಿಕೊಳ್ಳಲಾಗಿರುವ ಕಲಬುರಗಿ ನಾಟಕೋತ್ಸವ-26 ರ ಪೂರ್ವ ತಯಾರಿ ಕುರಿತು ಹಮ್ಮಿಕೊಳ್ಳಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ರಂಗಭೂಮಿ ಬದುಕಿನ ಪ್ರತಿರೂಪ, ನಾಟಕ ನೋಡುವುದರಿಂದ ಮನುಷ್ಯರ ಯೋಚಿಸುವ ಲಹರಿ ಬದಲಾಗುತ್ತದೆ ಎಂದು ಹೇಳಿದರು.
ರಂಗಶಂಕರಕ್ಕೀಗ 21 ವರ್ಷ, ಹವ್ಯಾಸಿ ಕರ್ಮಿಯಾಗಿ ನಂಗೆ 50 ವರ್ಷ ಪೂರೈಸುತ್ತಿರುವ ಈ ಸಮಯದಲ್ಲಿ, ರಂಗಶಂಕರ ಸಹಯೋಗದಲ್ಲಿ ಇಂತಹ ನಾಟಕೋತ್ಸವ ಹಮ್ಮಿಕೊಳ್ಳುತ್ತಿರುವುದು ನನಗೆ ವೈಯುಕ್ತಿಕವಾಗಿ ಇದೊಂದು ಕೊಡುಗೆಯಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಇದೇ ಮೊದಲ ಬಾರಿ ನಾನು ಕಲಬುರಗಿಗೆ ಬಂದಿರುವುದು. ಬೆಂಗಳೂರಿನಲ್ಲಿರುವ ಅತ್ಯುತ್ತಮ ಕಲಾತಂಡಗಳು ಇಲ್ಲಿ ಪ್ರದರ್ಶನ ನೀಡಲಿವೆ. ಇದರ ಜೊತೆಯಲ್ಲಿ ಹಿಂದಿ ನಾಟಕಗಳು ಸಹ ಇದ್ದು ರಾಷ್ಟ್ರೀಯ ಮಟ್ಟದಲ್ಲಿ ಇಲ್ಲಿನ ಜನರಿಗೆ ರಂಗಭೂಮಿ ಅನುಭವ ನೀಡುವ ಉದ್ದೇಶ ನಮ್ಮದು.
ರಂಗಭೂಮಿಗೆ ನಾನು ಕಾಲಿಟ್ಟಾಗ ಕೇವಲ 16 ವರ್ಷ, ಶಂಕರ್ ನಾಗ್ ಅವರಿಗೆ 18 ವರ್ಷ. ಮುಂಬೈನಲ್ಲಿ ಮೊದಲ ಬಾರಿಗೆ ವಿದ್ಯಾರ್ಥಿಗಳಾಗಿ ನೋಡಿದ ನಾಟಕಗಳು ನಮ್ಮನ್ನು ರಂಗಭೂಮಿಗೆ ಸೆಳೆತಂದವು, ನಾನು ತರಬೇತಿ ಪಡೆದ ನಟಿಯಲ್ಲ ಬಟ್ ಹವ್ಯಾಸಿ ರಂಗಭೂಮಿಯಲ್ಲಿ ಬೆಳೆದವರು. ನಾಟಕ ನೋಡುವುದರಿಂದ ಮನುಷ್ಯರ ಯೋಚಿಸುವ ಲಹರಿ ಬದಲಾಗುತ್ತದೆ. ಮೋಬೈಲ್, ಟಿವಿ, ಸಿನಿಮಾ ಬಿಟ್ಟು ನಾಟಕಗಳನ್ನು ನೋಡಿ ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದರು.
ಪ್ರಸ್ತುತ ಸಂದರ್ಭದಲ್ಲಿ ನಾಟಕೋತ್ಸವ ಹಮ್ಮಿಕೊಳ್ಳುವ ಯೋಚನೆ ಮಾಡಿದ ಕಲಬುರಗಿ ಜಿಲ್ಲಾಡಳಿತದ ಬಗ್ಗೆ ಅಪಾರ ಗೌರವ ಇದೆ. ಸಾಮಾನ್ಯವಾಗಿ ಸರ್ಕಾರಿ ವ್ಯವಸ್ಥೆಯಲ್ಲಿ ಈ ತರಹದ ಯೋಚನೆ ಬರುವುದಿಲ್ಲ. ಆದರೆ, ಕಲಬುರಗಿ ಜಿಲ್ಲಾಡಳಿತ ಈ ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ವಿಭಿನ್ನವಾಗಿದೆ ಎಂದು ಹೇಳಿದರು.
ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ಮಾತನಾಡಿ, ಕಲಬುರಗಿಯ ಸರ್ವತೋಮುಖ ಅಭಿವೃದ್ಧಿಗಾಗಿ ವಿಭಿನ್ನ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದ್ದು, ಸಾಂಸ್ಕøತಿಕ ವಲಯದಲ್ಲಿ ಕಲಬುರಗಿ ಜನರನ್ನು ಪೆÇ್ರೀತ್ಸಾಹಿಸುವ ಉದ್ದೇಶದಿಂದ ಈ ನಾಟಕೋತ್ಸವವನ್ನು ಹಮ್ಮಿಕೊಳ್ಳಲಾಗಿದ್ದು, ಮುಂದೆ ಚಲನಚಿತ್ರೋತ್ಸವ ಹಾಗೂ ಸಾಹಿತ್ಯೋತ್ಸವಗಳನ್ನು ಹಮ್ಮಿಕೊಳ್ಳಲು ಯೋಜಿಸಲಾಗಿದೆ ಎಂದರು.
ಜಿಲ್ಲಾಡಳಿತದವತಿಯಿಂದ ಮೊದಲ ಬಾರಿಗೆ ಹಮ್ಮಿಕೊಳ್ಳಲಾಗಿರುವ ಈ ನಾಟಕೋತ್ಸವ ಪ್ರಚಾರಕ್ಕಾಗಿ ವಿಶೇಷ ರ್ಯಾಲಿ ಮತ್ತು ಜಾಥಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಪ್ರತಿದಿನ ಸಂಜೆ 7 ಗಂಟೆಗೆ ಎಸ್ ಎಮ್ ಪಂಡಿತ್ ರಂಗಮಂದಿರದಲ್ಲಿ ನಾಟಕ ಪ್ರದರ್ಶನ ಆರಂಭಗೊಳ್ಳುವ ಮುನ್ನಾ ಬೀದಿನಾಟಕ, ಜಾನಪದ ಹಾಡುಗಳು ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಡಾ. ಎಸ್.ಎಂ. ಪಂಡಿತ್ ರಂಗಮಂದಿರದಲ್ಲಿ ನಡೆಯುವ ನಾಟಕಗಳಿಗೆ 8 ವರ್ಷದ ಒಳಗಿನ ಮಕ್ಕಳಿಗೆ ಅವಕಾಶವಿಲ್ಲ. ಒಬ್ಬರಿಗೆ ಒಂದು ನಾಟಕಕ್ಕೆ ನೂರು ರೂಪಾಯಿ ಟಿಕೇಟ್ ನಿಗಧಿಪಡಿಸಲಾಗಿದ್ದು, ಟಿಎಟ್ ಆನ್ ಲೈನ್ ನಲ್ಲಿ ಸಹ ಖರೀದಿಸಬಹುದಾಗಿದೆ ಹಾಗೂ ಸ್ಥಳದಲ್ಲಿ ಸಹ ಅವಕಾಶ ಕಲ್ಪಿಸಲಾಗಿದೆ. ಮಕ್ಕಳಿಗಾಗಿ ಕಲಬುರಗಿ ರಂಗಾಯಣದಲ್ಲಿ ಬೆಳಿಗ್ಗೆ 11 ಗಂಟೆಗೆ ವಿಶೇಷ ನಾಟಕಗಳನ್ನು ಹಮ್ಮಿಕೊಳ್ಳಲಾಗಿದೆ. ಜಿಲ್ಲಾ ಕನ್ನಡ ಸಾಹಿತ್ಯ ಭವನದಲ್ಲಿ ರಂಗಭೂಮಿಗೆ ಸಂಬಂಧಿಸಿದಂತೆ ಸಂವಾದಗಳನ್ನು ಪ್ರತಿದಿನ ಬೆಳಿಗ್ಗೆ 11 ಕ್ಕೆ ಆರಂಭವಾಗಲಿವೆ.

ಕಲಬುರಗಿಯ ಜನರು ಹೆಚ್ಚಿನ ಸಂಖ್ಯೆಯಲ್ಲಿ ಈ ನಾಟಕೋತ್ಸವದಲ್ಲಿ ಭಾಗವಹಿಸುವ ಮೂಲಕ ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.
ರಂಗಶಂಕರದ ಹಿರಿಯ ಸದಸ್ಯ ಹಾಗೂ ರಂಗಕರ್ಮಿ ಸುರೇಂದ್ರನಾಥ ಅವರು ಮಾತನಾಡಿ ಕಲಬುರಗಿ ನಾಟಕೋತ್ಸವಕ್ಕೆ ನಮ್ಮ ರಾಜ್ಯದ ಹಾಗೂ ಇತರೆ ಭಾμÉಗಳ ಅತ್ಯುತ್ತಮ ನಾಟಕಗಳನ್ನು ಆಯ್ಕೆ ಮಾಡಲಾಗಿದೆ. ಈ ಮಣ್ಣಿಗೆ ಹತ್ತಿರವಿರುವ ಕಥಾ-ವಸ್ತು ಹೊಂದಿರುವ ನಾಟಕಗಳನ್ನು ಕರೆಸಲಾಗುತ್ತಿದೆ ಎಂದರು.
ಕಲಬುರಗಿಯಲ್ಲಿ ರಂಗಶಂಕರ ಸಂಸ್ಥೆಯೊಂದಿಗೆ ಒಡಂಬಡಿಕೆ ಮಾಡಿಕೊಂಡು ಮುಂದಿನ 5 ವರ್ಷಗಳ ಕಾಲ ನಾಟಕೋತ್ಸವವನ್ನು ಹಮ್ಮಿಕೊಳ್ಳಲು ಯೋಜನೆ ರೂಪಿಸಲಾಗಿದ್ದು, ಈ ಯೋಜನೆಯ ಯಶಸ್ಸಿಗೆ ಶ್ರಮಿಸುವ ಮೂಲಕ ಕಲಬುರಗಿ ಜನರಿಗೆ ನಾಡಿನ ಅತ್ಯುತ್ತಮ ನಾಟಕಗಳನ್ನು ತೋರಿಸುವ ಮೂಲಕ ಇಲ್ಲಿನ ಜನರ ಅಭಿರುಚಿಯನ್ನು ಹೆಚ್ಚಿಸಲಾಗುವುದು ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ, ಸಹಾಯಕ ಆಯುಕ್ತರಾದ ಸಾಹಿತ್ಯ, ಕಲಬುರಗಿ ರಂಗಾಯಣದ ನಿರ್ದೇಶಕಿ ಸುಜಾತ ಜಂಗಮಶೆಟ್ಟಿ ಅವರು ಉಪಸ್ಥಿತರಿದ್ದರು.