Home ಜಿಲ್ಲೆ ಭೂ ಕಬಳಿಕೆ ಆರೋಪ ೧೫ ಜನರ ಮೇಲೆ ವಾರಂಟ್ ಜಾರಿ

ಭೂ ಕಬಳಿಕೆ ಆರೋಪ ೧೫ ಜನರ ಮೇಲೆ ವಾರಂಟ್ ಜಾರಿ

ಅಥಣಿ : ಫೆ.೨೪:ಪಟ್ಟಣದ ಸರಕಾರಿ ಜಾಗವನ್ನು ಕಬಳಿಕೆ ಮಾಡಿ ವಾಣಿಜ್ಯ ಉದ್ದೇಶದ ಶೆಡ್ಡ ನಿರ್ಮಾಣ ಮಾಡಿದ ಆರೋಪದಡಿ ನ್ಯಾಯಲಾಯದ ಮೆಟ್ಟಿಲೇರಿದ್ದ ಪ್ರಕರಣಕ್ಕೆ ಸಂಬAದಿಸಿದAತೆ ಸಂಬAಧಿಸಿದವರ ವಿರುದ್ದ ರಾಜ್ಯ ಭೂ ಕಬಳಿಕೆ ನ್ಯಾಯಾಲಯ ಸಮನ್ಸ ಜಾರಿ ಮಾಡಿ ಆದೇಶ ಹೊರಡಿಸಿದೆ ಎಂದು ನ್ಯಾಯವಾದಿ ಶಶಿಕಾಂತ ಬಾಡಗಿ ಹೇಳಿದರು.
ಅಥಣಿ ಪಟ್ಟಣದಲ್ಲಿ ಶನಿವಾರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು ಪುರಸಭೆ ವ್ಯಾಪ್ತಿಯಲ್ಲಿ ಬರುವ ಸರ್ವೆ ನಂ ೧೨೩೦ ಸಿ.ಟಿ.ಎಸ್.೪೩೫೭ ರಲ್ಲಿ ೧೩ ಗುಂಟೆ ಜತ್ತ ಜಾಂಬೂಟಿ ರಾಜ್ಯ ಹೆದ್ದಾರಿ ಪಕ್ಕದ ಸರಕಾರಿ ಜಾಗವನ್ನು ಅತಿಕ್ರಮಣ ಮಾಡಿ ವ್ಯಾಣಿಜ್ಯ ಮಳಿಗೆ ನಿರ್ಮಿಸಲಾಗಿದ್ದು ಇದು ಕಾನೂನು ಬಾಹಿರವಾಗಿದೆ, ವಿಷಯಕ್ಕೆ ಸಂಭAದಿಸಿದ ಅದಿಕಾರಿಗಳಿಗೆ ದೂರು ನೀಡಿದಲ್ಲದೆ ನ್ಯಾಯಾಲಯದಲ್ಲಿ ಪ್ರಕರಣ ಹೂಡಲಾಗಿತ್ತು, ಭೂ ಕಬಳಿಕೆ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಲಾಗಿ ಪ್ರತಿವಾದಿಗಳು ಯಾರು ಸಹ ವಿಚಾರಣೆಗೆ ಹಾಜರಾಗದ ಹಿನ್ನಲೆ ೧೫ ಜನರ ವಿರುದ್ಧ ನ್ಯಾಯಾಲಯವು ವಿಚಾರಣೆಗೆ ಹಾಜರಾಗಲು ವಾರೆಂಟ್ ಜಾರಿ ಮಾಡಲಾಗಿದೆ, ನನ್ನ ಕಾನೂನಿನ ಹೋರಾಟಕ್ಕೆ ಮೊದಲ ಜಯ ಸಿಕ್ಕಿದೆ, ಅಥಣಿ ಪಟ್ಟಣದ ಪುರಸಭೆ ವ್ಯಾಪ್ತಿಯಲ್ಲಿ ಅನೇಕ ಸರ್ಕಾರಿ ಜಾಗಗಳು ಅತಿಕ್ರಮಣ ಹೊಂದಿದ್ದು ಇವುಗಳ ಬಗ್ಗೆ ಕಾನೂನು ಹೋರಾಟ ಮಾಡಲು ಸಜ್ಜಾಗಿದ್ದು ಸರಕಾರದ ಯಾವುದೆ ಜಾಗ ಒತ್ತುವರಿ, ಕಬಳಿಕೆ, ಅಕ್ರಮ ಬಳಕೆ ಆಗದಂತೆ ನೋಡಿಕೊಳ್ಳುವದು ನಮ್ಮೆಲ್ಲರ ಹೊಣೆಯಾಗಿದೆ ಎಂದು ಹೇಳಿದರು