ಅಂಗಡಿ ತೆರೆಯದಂತೆ ಎಚ್ಚರಿಕೆ


ಚೆನ್ನಮ್ಮನ ಕಿತ್ತೂರು,ಜೂ.೪: ರಾಷ್ಟಿçÃಯ ಹೆದ್ದಾರಿ ನಾಲ್ಕರ ಪಕ್ಕದಲ್ಲಿರುವ ಚೆನ್ನಮ್ಮನ ವರ್ತಳದ ಹಿಂಭಾಗದ ಮುಖ್ಯ ರಸ್ತೆ ಪಕ್ಕದಲ್ಲಿ ಎಂ ಎಸ್ ಅಯ್ ಎಲ್ ಮದ್ಯದ ಅಂಗಡಿ ತೆರೆಯಲು ಸರ್ಕಾರ ಅನುಮತಿ ನೀಡಬಾರದೆಂದು ಸ್ಥಳೀಯರು ಪ್ರತಿಭಟನೆ ನಡೆಸಿದರು.


ಸೋಮವಾರ ಪೇಟೆಯಲ್ಲಿರುವ ಮದ್ಯದ ಅಂಗಡಿಯನ್ನು ಅಲ್ಲಿನ ನಿವಾಸಿಗಳಿಗೆ ತೊಂದರೆಯಾಗುತ್ತಿದೆ ಎಂದು ಹೋರಾಟ ಮಾಡಲಾಗಿತ್ತು. ಆ ಅಂಗಡಿಯನ್ನು ಸ್ಥಳಾಂತರಿಸಿ ಚೆನ್ನಮ್ಮಾಜಿ ಸರ್ಕಲ್ ಹತ್ತಿರ ತೆರೆಯಲು ಜಿಲ್ಲಾಡಳಿತ ಮುಂದಾಗಿದೆ. ಸ್ಥಳೀಯ ನಿವಾಸಿ ಡಾ. ಅನ್ನಪೂರ್ಣ ಅಂಗಡಿ ಮಾತನಾಡಿ ಈ ಬೀದಿಯಲ್ಲಿ ಮಧ್ಯದ ಅಂಗಡಿ ತೆರೆಯುವುದರಿಂದ ಕುಡುಕರ ಕಾಟ ಹೆಚ್ಚಾಗಲಿದ್ದು ಇದರಿಂದ ಇಲ್ಲಿಯ ಹೆಣ್ಣು ಮಕ್ಕಳಿಗೆ, ಶಾಲಾ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ತೀವ್ರ ತೊಂದರೆಯಾಗಲಿದೆ. ಕುಡುಕರು ಜಾಸ್ತಿಯಾಗುವುದರಿಂದ ಸಮಾಜ ಕೆಡುತ್ತದೆ. ಆದ್ದರಿಂದ ಜಿಲ್ಲಾಡಳಿತ ಇಲ್ಲಿ ಅಂಗಡಿಯನ್ನು ತೆರೆಯಬಾರದೆಂದು ಖಡಕ್ಕಾಗಿ ಎಚ್ಚರಿಕೆ ನೀಡಿದರು.


ಈಗಾಗಲೇ ಜಿಲ್ಲಾಧಿಕಾರಿಗಳಿಗೆ. ಅಬಕಾರಿ ಇಲಾಖೆ ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ, ಮಧ್ಯದ ಅಂಗಡಿಯನ್ನು ತೆರೆಯದಂತೆ ಸ್ಥಳೀಯ ನಿವಾಸಿಗಳು ತಕರಾರು ಅರ್ಜಿ ಸಲ್ಲಿಸಿದ್ದಾರೆ. ಒಂದು ವೇಳೆ ಇದೇ ಸ್ಥಳದಲ್ಲಿ ಮಧ್ಯದ ಅಂಗಡಿ ತೆರೆಯಲು ಅನುಮತಿ ನೀಡಿದರೆ ಇಲ್ಲಿನ ನಿವಾಸಿಗಳು ಉಗ್ರ ಹೋರಾಟ ಮಾಡುತ್ತಿವೆಂದು ಹೇಳಿದರು.


ಸಾಹಿತಿ ಹಾಗೂ ಪತ್ರಕರ್ತ ಶೇಖರ್ ಕೋಟಿ ಇಲ್ಲಿ ಅಂಗಡಿ ತೆರೆಯುವುದರಿಂದ ಏನಾಗುತ್ತದೆ ಎಂಬುದನ್ನು ಕುರಿತು ಮಾತನಾಡಿದರು. ಎಲ್ಲಪ್ಪ ವಕುಂದ್, ರಾಜಪ್ಪ ಸಂಗೊಳ್ಳಿ, ಮಂಜುನಾಥ ಸಂಗಣ್ಣವರ್. ಶಾಹಿದ್ ಕುಂದಗೋಳ, ಎಂ ಎಂ ಲಂಗೋಟಿ, ಮಹೇಶ್ ಪೂಜೇರ್, ನಾಗರತ್ನ ನವಲೂರ್, ಕಮಲಾಕ್ಷಿ ಅಂಗಡಿ, ಜಬಿನ ಕುಂದಗೋಳ, ವಿಜಯ ಪಾಟೀಲ್, ಅಶ್ವಿನಿ ಸಂಗನವರ್, ಭಾಗ್ಯಶ್ರೀ ಹೊಳಿ, ಜಗದೀಶ್ ಕಡೋಲಿ, ಸೌಮ್ಯ ಸಂಗಣ್ಣವರ, ರಾಜಪ್ಪ ಎಮ್ಮಿ ಸೇರಿದಂತೆ ಅನೇಕರಿದ್ದರು.