Home ಜಿಲ್ಲೆ ಕೆಪಿ ವಿದ್ಯಾ ಸಂಸ್ಥೆಯಲ್ಲಿ ವಿದ್ಯಾರ್ಥಿಗಳಿಗೆ ಆತ್ಮೀಯ ಸ್ವಾಗತ

ಕೆಪಿ ವಿದ್ಯಾ ಸಂಸ್ಥೆಯಲ್ಲಿ ವಿದ್ಯಾರ್ಥಿಗಳಿಗೆ ಆತ್ಮೀಯ ಸ್ವಾಗತ

ಬೀದರ:ಜೂ.೪: ಕೆಪಿ ವಿದ್ಯಾ ಸಂಸ್ಥೆಯ ಅಡಿಯಲ್ಲಿ ನಡೆಯುತ್ತಿರುವ ಕನ್ಯಕಾ ಪರಮೇಶ್ವರಿ ಪ್ರಾಥಮಿಕ ಪ್ರೌಢ ಹಾಗೂ ಆಂಗ್ಲ ಮಾಧ್ಯಮ ೨೦೨೬-೨೭ನೇ ಸಾಲಿನ ಶಾಲಾ ಪ್ರಾರಂಭೋತ್ಸವದ ಮೊದಲ ದಿನವಾದ ಇಂದು ಸಂಸ್ಥೆಯ ಅಧ್ಯಕ್ಷರಾದ ಬಾಬು ವಾಲಿ ಮಕ್ಕಳಿಗೆ ಹೂ ಚೆಲ್ಲುವ ಮೂಲಕ ಆತ್ಮೀಯವಾಗಿ ಬರಮಾಡಿಕೊಂಡರು.
ಈ ಸಂಧರ್ಭದಲ್ಲಿ ಶಾಲಾ ವಿದ್ಯಾರ್ಥಿಗಳು ಓಣಿಯ ಸುತ್ತ ಪರೇಡ್ ನಡೆಸಿ ಮಕ್ಕಳು ಶಾಲೆಗೆ ಹೋಗುವಂತೆ ವಿಶೇಷ ಸಂದೇಶ ಸಾರಿದರು.
೨೦೨೬-೨೭ನೇ ಶೈಕ್ಷಣಿಕ ವರ್ಷದ ಮೊದಲನೇ ದಿನದಿಂದ ಹಿಡಿದು ಒಂದೂ ದಿನವೂ ತಪ್ಪದೇ ಶಾಲೆಗೆ ಶೃದ್ಧೆ ಭಕ್ತಿಯಿಂದ ಹಾಜರಾಗಿ ಆಟ ಪಾಠ ಸೇರಿದಂತೆ ಎಲ್ಲಾ ವಿಷಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಉತ್ತಮ ಫಲಿತಾಂಶ ತೆಗೆದು ಶಾಲೆಗೆ ಶಿಕ್ಷಕರಿಗೆ ಪೋಷಕರಿಗೆ ಉತ್ತಮ ಹೆಸರು ತರಬೇಕು ಎಂದು ಸಂಸ್ಥೆಯ ಅಧ್ಯಕ್ಷರಾದ ಬಾಬು ವಾಲಿ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಸಲಹೆ ನೀಡಿದರು.
ಈ ಶುಭ ಸಂಧರ್ಭದAದು ಪ್ರಾಥಮಿಕ ಹಾಗೂ ಪ್ರೌಢ ಶಾಲೆಯ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ ವಿತರಿಸಲಾಯಿತು.
ಈ ಸಂಧರ್ಭದಲ್ಲಿ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯರಾದ ಮಲ್ಲಪ್ಪ ಬೊತಗಿ, ಮುಖ್ಯಗುರುಗಳಾದ ವಿಜಯಕುಮಾರ ಪಾಟೀಲ ಯರನಳ್ಳಿ, ಸೇರಿದಂತೆ ಶಿಕ್ಷಕ ವೃಂದದವರು, ಪೋಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.