ವಾಲ್ ಸ್ಟ್ರೀಟ್ ಷೇರು ಮಾರುಕಟ್ಟೆ ಕುಸಿತ

ಸಿಡ್ನಿ,ಜೂ.೨೩- ಇರಾನ್ ತನ್ನ ಅಣುಬಾಂಬ್ ಘಟಕದ ಮೇಲಿನ ಅಮೆರಿಕದ ದಾಳಿಗೆ ಪ್ರತೀಕಾರ ತೀರಿಸಿಕೊಳ್ಳಲು ಇರಾನ್ ಮುಂದಾಗಿರುವ ನಡುವೆ ವಾಲ್ ಸ್ಟ್ರೀಟ್ ನಲ್ಲಿ ಷೇರು ಮಾರುಕಟ್ಟೆ ಗಣನೀಯವಾಗಿ ಕುಸಿತ ಕಂಡಿದೆ.


ಷೇರು ಮಾರುಕಟ್ಟೆಯಲ್ಲಿ ಬೆಲೆ ಕುಸಿತದಿಂದ ತೈಲ ಬೆಲೆಗಳು ಐದು ತಿಂಗಳ ನಂತರ ಗರಿಷ್ಠ ಮಟ್ಟಕ್ಕೆ ಏರಿಕೆಯಾಗಿದ್ದು ಇದರ ಪರಿಣಾಮವಾಗಿ ಜಾಗತಿಕ ಚಟುವಟಿಕೆ ಮತ್ತು ಹಣದುಬ್ಬರಕ್ಕೆ ಅಪಾಯದ ಮುನ್ಸೂಚನೆ ನೀಡಿದೆ.


ಇರಾನ್ ತನ್ನ ಪರಮಾಣು ಮಹತ್ವಾಕಾಂಕ್ಷೆಗಳನ್ನು ಮೊಟಕುಗೊಳಿಸುವುದರಿಂದ ಹಿಂದೆ ಸರಿಯಬಹುದು ಅಥವಾ ಆಡಳಿತದಲ್ಲಿ ಬದಲಾವಣೆ ಆಗಬಹುದು ಎಂದು ಹೇಳಲಾಗಿದ್ದು ತೈಲ ಬೆಲೆಗಳು ಶೇಕಡಾ ೭೬ ರಷ್ಟು ಏರಿಕೆಯಾಗಿದ್ದು ಇದರ ಪರಿಣಾಮ ಜನರು ಪರಿಣಾಮ ಬೀರುವಂತಾಗಿದೆ.


ಇದರ ಜೊತೆಗೆ ಹರ್ಮುಜ್ ಜಲಸಂಧಿಯ ಮೂಲಕ ಪ್ರವೇಶ ನಿಷೇಧಿಸಲು ಮುಂದಾಗಿದ್ದು ಕಿರಿದಾದ ಸ್ಥಳದಲ್ಲಿ ಕೇವಲ ೩೩ ಕಿಮೀ ಅಗಲವಿದೆ. ವಿಶ್ವದ ದೈನಂದಿನ ತೈಲ ಬಳಕೆಯ ಸುಮಾರು ೨೦ ಪ್ರತಿಶತವನ್ನು ಹೊಂದಿದೆ.ಈ ಮಾರ್ಗದ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆ ಇದೆ.


ಮಧ್ಯಪ್ರಾಚ್ಯದಿಂದ ತೈಲದ ಹರಿವನ್ನು ಅಡ್ಡಿಪಡಿಸುವ ಮೂಲಕ ಇರಾನ್ ಪ್ರತೀಕಾರ ತೀರಿಸಿಕೊಳ್ಳುವ ಅಪಾಯ ಗಮನಾರ್ಹವಾಗಿ ಹೆಚ್ಚಾಗಿದೆ” ಎಂದು ವಿಶ್ಲೇಷಕರು ಆತಂಕ ವ್ಯಕ್ತಪಡಿಸಿದ್ದಾರೆ.
ತೆಲೆ ಬೆಲೆ ಏರಿಕೆಯಾಗಿ ಪ್ರತಿ ಬ್ಯಾರೆಲ್‌ಗೆ ೭೮.೪೬ ಡಾಲರ್‌ಗಳಿಗೆ ತಲುಪಿದ್ದರೆ, ಅಮೇರಿಕಾ ಕಚ್ಚಾ ತೈಲ ಶೇಕಡಾ ೨ ರಷ್ಟು ಏರಿಕೆಯಾಗಿ ೭೫.೩೦ ಡಾಲರ್‌ಗಳಿಗೆ ತಲುಪಿದೆ. ಸರಕು ಮಾರುಕಟ್ಟೆಗಳಲ್ಲಿ, ಚಿನ್ನ ಶೇಕಡಾ ೦.೨ ರಷ್ಟು ಏರಿಕೆಯಾಗಿ ಔನ್ಸ್‌ಗೆ ೩,೩೭೫ ಡಾಲರ್‌ಗೆ ತಲುಪಿದೆ.


ಎಸ್ ಅಂಡ್ ಪಿ ೫೦೦ ಫ್ಯೂಚರ್‌ಗಳು ಶೇಕಡಾ ೦.೩ ರಷ್ಟು ಮತ್ತು ನಾಸ್ಡಾಕ್ ಫ್ಯೂಚರ್‌ಗಳು ಶೇಕಡಾ ೦.೫ ರಷ್ಟು ಕುಸಿದಿವೆ, ಎರಡೂ ಶೇಕಡಾ ೧ ರಷ್ಟು ನಷ್ಟ ಅನುಭವಿಸಿವೆ.


ನಿಕ್ಕಿ ಫ್ಯೂಚರ್‌ಗಳು ೩೮,೩೮೦ ಕ್ಕೆ ಇಳಿಕೆಯಾಗಿದೆ, ನಗದು ಸೂಚ್ಯಂಕದ ಆರಂಭಿಕ ಕುಸಿತ ಕಂಡಿದೆ.ಜಪಾನಿನ ಯೆನ್ ವಿರುದ್ಧ ಡಾಲರ್ ಮೌಲ್ಯ ಶೇ.೦.೨ ರಷ್ಟು ಏರಿಕೆಯಾಗಿ ಯೆನ್ ೧೪೬.೩೬ ಕ್ಕೆ ತಲುಪಿದ್ದರೆ, ಯೂರೋ ಶೇ.೦.೩ ರಷ್ಟು ಕುಸಿದು ೧.೧೪೮೫ ಡಾಲರ್‌ಗಳಿಗೆ ತಲುಪಿದೆ. ಡಾಲರ್ ಸೂಚ್ಯಂಕ ಶೇ.೦.೨೫ ರಷ್ಟು ಸ್ಥಿರವಾಗಿ ೯೯.೦೦೮ ಕ್ಕೆ ತಲುಪಿದೆ.