
ಹೊಸಕೋಟೆ,ಮಾ.೧೮- ಮಾನ್ಯ ಮುಖ್ಯ ಮಂತ್ರಿಗಳಾದ ಸಿದ್ದರಾಮಯ್ಯನವರು ಡಾಕ್ಟರ್ ಬಿ ಆರ್ ಅಂಬೇಡ್ಕರ್ ಅವರ ಬೃಹದಾಕಾರದ ಕಂಚಿನ ಪುತ್ತಳಿ ಅನಾವರಣ ಮಾಡುತ್ತೇವೆ ಎಂದು ಈಗಾಗಲೇ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದರು, ಆದರೆ ಒಂದು ವಷವೇ ಕಳೆದರೂ ಈವರೆಗೂ ಅಂಬೇಡ್ಕರ್ ಅವರ ಪುತ್ಥಳಿ ಅನಾವರಣಗೊಂಡಿಲ್ಲ ಆದ್ದರಿಂದ ಮಾರ್ಚ್ ೨೩ ರಂದು ಹೊಸಕೋಟೆ ತಾಲ್ಲೂಕು ಕಚೇರಿಯಿಂದ ಪ್ರೀಡಂ ಪಾರ್ಕ್ ವರೆಗೆ ಕಾಲ್ನಡಿಗೆ ಜಾಥಾ ಹಮ್ಮಿಕೊಂಡಿದ್ದೇವೆ ಎಂದು ಭೀಮ್ ಪ್ರಜಾ ಸಂಘದ ರಾಜ್ಯಾಧ್ಯಕ್ಷರಾದ ವೈಟ್ಫೀಲ್ಡ್ ಮುರುಗೇಶ್ ತಿಳಿಸಿದ್ದಾರೆ,
ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು. ನಮ್ಮ ದೇಶದ ಹೊರ ರಾಜ್ಯಗಳಲ್ಲಿ ಡಾ. ಬಿಆರ್ ಅಂಬೇಡ್ಕರ್ ಅವರ ಪುತ್ತಳಿ ಅನಾವರಣಗೊಂಡಿದೆ ಆದರೆ ನಮ್ಮ ರಾಜ್ಯದಲ್ಲಿ ಈವರೆಗೂ ಅಂಬೇಡ್ಕರ್ ಅವರ ಬೃಹತ್ ಪುತ್ತಳಿ ಅನಾವರಣಗೊಂಡಿಲ್ಲ ಈ ನಿಟ್ಟಿನಲ್ಲಿ ನಮ್ಮ ಭೀಮ ಪ್ರಜಾ ಸಂಘ ಕಳೆದ ವರ್ಷ ಬೀದರ್ ಧಾರವಾಡದಿಂದ ಬೆಂಗಳೂರು ಅರಮನೆ ಮೈದಾನದವರೆಗೆ ಕಾಲ್ನಾಡಿಗೆ ಜಾತ ಮಾಡಿ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದೆವು ಆದರೆ ಸರ್ಕಾರ ಅನುಮತಿ ನೀಡಿಲ್ಲ. ಕಳೆದ ಒಂದು ವರ್ಷದ ಹಿಂದೆ ಅಂಬೇಡ್ಕರ್ ಪುತ್ತಳಿ ಅನಾವರಣಕ್ಕೆ ಕ್ರಮ ಕೈಗೊಳ್ಳುವುದಾಗಿ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಿಳಿಸಿದರು. ಆದರೆ ಒಂದು ವರ್ಷ ಕಳೆದರೂ ಅಂಬೇಡ್ಕರ್ ಅವರ ಪುತ್ತಳಿ ಅನಾವರಣಗೊಂಡಿಲ್ಲ ಆದ್ದರಿಂದ ೨೩ ಮಾರ್ಚ್ ೨೦೨೬ ಬೆಳಿಗ್ಗೆ ೯ ಗಂಟೆಗೆ ಹೊಸಕೋಟೆ ತಾಲೂಕು ಕಚೇರಿ ಆವರಣದಿಂದ ಬೆಂಗಳೂರಿನ ಫ್ರೀಡಂ ಪಾರ್ಕ್ ವರೆಗೆ ಸ್ವಾಭಿಮಾನ ಕನ್ನಡಿಗ ಜಾತವನ್ನ ಹಮ್ಮಿಕೊಂಡು ಬೃಹತ್ ಪ್ರತಿಭಟನೆ ಮೂಲಕ ಜಾತ ಹಮ್ಮಿಕೊಂಡಿದ್ದೇವೆ ಎಂದರು,
ನಮ್ಮ ಹಕ್ಕುಗಳಾದ ದೇಶದಲ್ಲಿ ಅತಿ ಎತ್ತರದ ಪುತ್ಥಳಿ ೨೦೦ ಮೀಟರ್ ಅಂದರೆ ೬೫೬ ಅಡಿಗಳ ಎತ್ತರ ಪುತ್ಥಳಿ ನಿರ್ಮಿಸಬೇಕು. ಬಗರ್ ಹುಕುಂ ಶಾಹಿ ಸಾಗುವಳಿಯಲ್ಲಿ ಎಸ್ಸಿ ವಿಶ್ವ ಜನಾಂಗದ ಜಮೀನನ್ನು ಅರಣ್ಯ ಇಲಾಖೆಯನ್ನು ಹಿಂಪಡೆಯುತ್ತಿರುವುದನ್ನು ನಿಲ್ಲಿಸಿ ಅನ್ಯಾಯಕ್ಕೆ ಒಳಗಾಗಿರತಕ್ಕಂತ ಜನರಿಗೆ ಆ ಜಮೀನನ್ನು ಬಿಟ್ಟುಕೊಡಬೇಕು ಮತ್ತು ಮಂಜೂರು ಮಾಡಿ ಫಾರಂ ನಂಬರ್ ೧೦ ಮಾಡಿಕೊಡಬೇಕು. ಕರ್ನಾಟಕ ಸರ್ಕಾರದ ಎಸ್.ಸಿ.ಎಸ್.ಪಿ/ಟಿ.ಎಸ್.ಪಿ ಯೋಜನೆಯ ಹಣವನ್ನು ೪೪ ಸಾವಿರ ಕೋಟಿ ರೂಪಾಯಿಗಳು ಕಾಂಗ್ರೆಸ್ ಸರ್ಕಾರ ತನ್ನ ಪ್ರಣಾಳಿಕೆಯ ಗ್ಯಾರಂಟಿ ಯೋಜನೆಗಳಿಗೆ ಬಳಸಿಕೊಂಡಿರು ವುದನ್ನು ಹಿಂಪಡೆದು ಪರಿಶಿಷ ಜಾತಿ ಪರಿಶಿಷ್ಟ ಪಂಗಡದವರ ಸರ್ವತೋಮುಕ ಅಭಿವೃದ್ಧಿಗಾಗಿ ಬಳಸಬೇಕು. ಪ್ರತಿಯೊಂದು ಜಿಲ್ಲೆಯಲ್ಲಿ ಪರಿಶಿಷರಿಗೆ ಸರ್ಕಾರದ ವತಿಯಿಂದ ಐ.ಎ.ಎಸ್, ಕೆ.ಎ.ಎಸ್. ಕೋಚಿಂಗ್ ಸೆಂಟರ್ ನಡೆಸಬೇಕು ಎಂಬ ಹಕ್ಕೊತ್ತಾಯಗಳ ಮನವಿಯನ್ನು ಸಲ್ಲಿಸುತ್ತೇವೆ ಎಂದರು.
























