ವಾಡಿ: ಮಳೆಯಿಂದ ಮನೆಗೋಡೆ ಕುಸಿತ

ವಾಡಿ,ಜೂ.13-ಪಟ್ಟಣದಲ್ಲಿ ಸತತವಾಗಿ ಮೂರು ದಿನಗಳಿಂದ ಜಟಿಜಿಟಿಯಾಗಿ ಸುರಿತ್ತಿರುವ ಮಳೆಯಿಂದ ಪುರಸಭೆ ಹತ್ತಿರದ ನಿವಾಸಿ ಅಬ್ದುಲ್ ರಶೀದ್ ಅವರಿಗೆ ಸೇರಿದ ಮನೆ ಬಿದ್ದಿದೆ.
ಗುರುವಾರ ಸಾಯಂಕಾಲ ಸುರಿದ ಗುಡುಗು ಸಹಿತ ಮಳೆಯಿಂದ ಜನ ಜೀವನ ಅಸ್ತವ್ಯಸ್ತವಾಯಿತು. ಗುರುವಾರ ಸಂತೆ ಇದ್ದುದ್ದರಿಂದ ಬೇರೆ ಗ್ರಾಮಗಳಿಂದ ತರಕಾರಿ, ದಿನಸಿ ಮಾರಾಟಕ್ಕೆ ಆಗಮಿಸಿದ ವ್ಯಾಪಾರಸ್ಥರು, ರೈತರು ಸಂಕಷ್ಟ ಎದುರಿಸುವಂತಾಯಿತು. ಮಳೆಯಿಂದಾಗಿ ತರಕಾರಿ ನೆನೆದು ವ್ಯಾಪಾರಕ್ಕೆ ದೊಡ್ಡ ಹೊಡೆತ ಬಿತ್ತು. ಬಿಡದೇ ಸುರಿದ ಮಳೆಯಿಂದಾಗಿ ವ್ಯಾಪಾರ ವಹಿವಾಟು ಸರಿಯಾಗಿ ಆಗದೇ ಇರುವುದರಿಂದ ವ್ಯಾಪಾರಸ್ಥರು ಮತ್ತು ತರಕಾರಿ ಮಳೆ ನೀರಲ್ಲಿ ನೆಂದು ಹಾಳಾದುದ್ದರಿಂದ ತರಕಾರಿ ವ್ಯಾಪಾರಿಗಳು ನೊಂದುಕೊಳ್ಳುವಂತಾಯಿತು.