
ವಾಡಿ: ಜ.3:ಪಟ್ಟಣದ ಡಾ| ಅಂಬೇಡ್ಕರ ವೃತ್ತದಲ್ಲಿ ಅಸ್ಪ್ರಶ್ಯರ ಶೌರ್ಯ ಸಾಹಸ ಹಾಗೂ ಸ್ವಾಭಿಮಾನದ ಪ್ರತಿಕವಾದ ಭೀಮಾ ಕಜರೆಗಾಂವ ವಿಜಯೋತ್ಸವವನ್ನು ಸಂಭ್ರಮ ಸಡಗರ ಆಚರಿಸಲಾಯಿತು.
1818ರ ಜನವರಿ 1ರಂದು ಚಾರಿತ್ರಿಕ ಭೀಮಾನದಿಯ ದಡದ ಕೋರೆಗಾಂವ ರಣಭೂಮಿಯಲ್ಲಿ ಜರುಗಿದ ನಿರ್ಣಾಯಕ ಯುದ್ಧದಲ್ಲಿ ಕೆವಲ ಐದು ನೂರು ಜನ ಮಾಹರ್ ಸೈನಿಕರು ರಣರೋಚಕವಾಗಿ ಹೋರಾಡಿ ಮುವತ್ತು ಸಾವಿರ ಪೇಶ್ವೆಗಳ ಸೈನ್ಯವನ್ನು ಸೋಲಿಸಿದ ಐತಿಹಾಸಿಕ ಘಟನೆಯ ಪ್ರತಿಕವಾಗಿ ಪಟ್ಟಣದ ವಿವಿಧ ಸಂಘಟನೆಗಳು, ಹಾಗೂ ಬೌದ್ಧ ಸಮಾಜದ ಮುಖಂಡರು ಮಧ್ಯ ರಾತ್ರಿ 12 ಗಂಟೆಗೆ ಡಾ. ಬಾಬಾಸಾಹೇಬ ಅಂಬೇಡ್ಕರ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮಾಹರ್ ಸೈನಿಕರಿಗೆ ಗೌರವ ಪ್ರತಿಕವಾಗಿ ಭೀಮ ನಮನ ಸಲ್ಲಿಸಿದರು ನಂತರ ಕೇಕ್ ಕತ್ತರಿಸಿ ಜಯಘೋಷಣೆ ಕೂಗಿ ವಿಜಯೋತ್ಸವ ಆಚರಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಶ್ರಾವಣಕುಮಾರ ಮೋಸಲಗಿ,ಸಂದೀಪ ಕಟ್ಟಿ, ವಿಕ್ರಮ ನಿಂಬರ್ಗಾ, ರವಿ ಕೋಳಕೂರ, ವಿಜಯ ಸಿಂಗೆ, ಕಿಶೋರ ಸಿಂಗೆ, ಶೈಲೇಶ ಹೇರೂರ, ಗೌತಮ ಗಾಯಕವಾಡ, ಕೃಷ್ಣ ಗಾಯಕವಾಡ, ರಘುವೀರ ಪವಾರ,ರೀತೇಶ ಗಾಯಕವಾಡ ಸೇರಿದಂತೆ ನೂರಾರು ಜನರು ಉಪಸ್ಥಿತರಿದ್ದರು.
























