
ಜೇವರ್ಗಿ:ಜ.೨೭: ‘ಮತದಾನವು ಪ್ರಜಾಪ್ರಭು ತ್ವದ ಪ್ರಮುಖ ಅಸ್ತ್ರ, ಪ್ರತಿಯೊಬ್ಬ ನಾಗರಿಕ ಮತದಾನದ ಹಕ್ಕು ಹೊಂದಿದ್ದಾನೆ. ಜಾಗೃತ ಮತದಾರರೇ ಬಲಿಷ್ಠ ರಾಷ್ಟ್ರದ ಅಧಾರವಾಗಿದ್ದಾರೆ’ ಎಂದು ತಹಶೀಲ್ದಾರ್ ಮಲ್ಲಣ್ಣಯಲಗೋಡ ಹೇಳಿದರು.
ಪಟ್ಟಣದ ತಹಶೀಲ್ದಾರ್ ಕಚೇರಿಯ ಸಭಾಂಗಣದಲ್ಲಿ ಭಾನುವಾರ ತಾಲ್ಲೂಕಾಡಳಿತ, ಶಿಕ್ಷಣ ಇಲಾಖೆ, ತಾಲ್ಲೂಕು ಕಾನೂನು ಸೇವೆಗಳ ಸಮಿತಿ ಹಾಗೂ ವಕೀಲರ ಸಂಘದ ಸಹಯೋಗದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಮತದಾರರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.’ಜಾತಿ, ಹಣ, ಧರ್ಮ, ಯಾವುದೇ ಆಮಿಷಕ್ಕೆ ಒಳಗಾಗದೆ ಯುವಕರು ನೈತಿಕವಾಗಿ ಮತದಾನ ಮಾಡಬೇಕು. ರಾಷ್ಟ್ರೀಯ ಮತದಾನದ ದಿನವನ್ನು ಪ್ರತಿ ವರ್ಷ ಒಂದೊAದು ಧೈಯವಾಕ್ಯದೊ೦ದಿಗೆ ದೇಶಾದ್ಯಂತ ಆಚರಿಸಲಾಗುತ್ತದೆ.ಜೇವರ್ಗಿ ಪಟ್ಟಣದ ತಹಶೀಲ್ದಾರ್ ಕಚೇರಿಯ ಸಭಾಂಗಣದಲ್ಲಿ ರಾಷ್ಟ್ರೀಯ ಮತದಾರರ ದಿನಾಚರಣೆಯನ್ನು ತಹಶೀಲ್ದಾರ್ ಮಲ್ಲಣ್ಣ ಯಲಗೋಡ ಉದ್ಘಾಟಿಸಿದರು ಈ ಬಾರಿ ನನ್ನ ಭಾರತ-ನನ್ನ ಮತ ಎಂಬ ಧೈಯದೊಂದಿಗೆ ಆಚರಿಸಲಾಗುತ್ತಿದೆ’ ಎಂದು ತಿಳಿಸಿದರು.
‘ಮತದಾನವು ಹಕ್ಕಿನ ಜೊತೆಗೆ ಕರ್ತವ್ಯವೂ ಆಗಿದೆ. ಪ್ರತಿಯೊಬ್ಬರೂ ನಿರ್ಭಯವಾಗಿ ಮತ ಚಲಾಯಿಸಬೇಕು. ಯುವಕರು ಚುನಾವಣಾ ಪ್ರಕ್ರಿಯೆಯ-ಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು. ಜವಾಬ್ದಾರಿಯುತ ಮತದಾನದಿಂದ ದೇಶದ ಅಭಿವೃದ್ಧಿ ಸಾಧ್ಯ. ೧೮ ವರ್ಷ ತುಂಬಿದ ಯುವ ಸಮೂಹ ಹೆಚ್ಚಿನ ಸಂಖ್ಯೆಯಲ್ಲಿ ಮತದಾರರಪಟ್ಟಿಯಲ್ಲಿ ತಮ್ಮ ಹೆಸರು ನೋಂದಣಿ ಮಾಡಿಕೊಳ್ಳಬೇಕು’ ಎಂದರು.
ವಕೀಲ ಅಪ್ಪಾಸಾಬ ಕೋಳಕೂರ ಉಪನ್ಯಾಸ ನೀಡಿದರು. ತಾಪಂ ಇಒ ರವಿ-ಚಂದ್ರರೆಡ್ಡಿ, ಪುರಸಭೆ ಮುಖ್ಯಾಧಿಕಾರಿ ಶಂಭುಲಿAಗ ದೇಸಾಯಿ, ವಕೀಲರ ಸಂಘದ ಕಾರ್ಯದರ್ಶಿ ರಾಜಶೇಖರ ಶಿಲ್ಪಿ, ಉಪಾಧ್ಯಕ್ಷ ಬಾಷಾ ಪಟೇಲ ಯಾಳವಾರ, ಪರಶುರಾಮ ಮುದಬಾಳ, ಟಿಪ್ಪು ಸುಲ್ತಾನ್ ಸೇರಿದಂತೆ ಅನೇಕರಿದ್ದರು. ಗ್ರಾಮ ಆಡಳಿತಾಧಿಕಾರಿ ಮಕ್ಕೂಲ್ ಪಟೇಲ್‌ವಂದಿಸಿದರು.






















