ಮತದಾನ ಶ್ರೇಷ್ಠ ದಾನ : ಡಾ. ರಜನೀಶ್ ಎಸ್. ವಾಲಿ

ಬೀದರ:ಜ.24: ಗೌರವಾನ್ವಿತ ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ ಸದಸ್ಯರು ಹಾಗೂ ಬಿ.ವಿ.ಬಿ. ಶಾಲಾ ಕಾಲೇಜು ಆವರಣದ ಸಂಚಾಲಕರಾದ ಡಾ. ರಜನೀಶ್ ಎಸ್. ವಾಲಿಯವರು ಅಧ್ಯಕ್ಷತೆಯನ್ನು ವಹಿಸಿ ಮಾತನಾಡುತ್ತಾ ಮತದಾನದ ಮಹತ್ವದ ಕುರಿತು ವಿವರಿಸುತ್ತಾ; ಮತದಾನ ಪವಿತ್ರವಾದ ಕಾರ್ಯ ಮತದಾನ ನಮ್ಮ ಹಕ್ಕು, 18ವರ್ಷ ತುಂಬಿದ ಎಲ್ಲಾ ವಿದ್ಯಾರ್ಥಿಗಳು ಮತದಾರರ ಪಟ್ಟಿಯಲ್ಲಿ ಹೆಸರು ನೊಂದಾಯಿಸಿಕೊಂಡು ತಮ್ಮ ಕುಟುಂಬ ಮತ್ತು ಓಣಿಯ ಪರಿಚಿತರ ಹೆಸರನ್ನು ಮತದಾರರ ಪಟ್ಟಿಯಲ್ಲಿ ನೊಂದಾಯಿಸಿಕೊಳ್ಳಲು ಪ್ರೇರೆಪಿಸಬೇಕು ಮಹಾವಿದ್ಯಾಲಯದ ಇಐಅ(ಇಟeಛಿಣoಡಿಚಿಟ ಐiಣeಡಿಚಿಛಿಥಿ ಅಟub)ನ ಸದಸ್ಯರುಗಳಿಗೆ ಹಾಗೂ ವಿದ್ಯಾರ್ಥಿಗಳಿಗೆ ನಿರ್ಭೀತಿಯಿಂದ ಮತ್ತು ಯಾವುದೇ ಆಮಿಷಕ್ಕೆ ಒಳಗಾಗದೆ ಮತದಾನ ಮಾಡಬೇಕು. ಮತ್ತು ಮತದಾನ ಹಕ್ಕು ಪಡೆಯಲು ಪ್ರತಿಯೊಬ್ಬ ವ್ಯಕ್ತಿ 18ವರ್ಷಕ್ಕೆ ಮೇಲ್ಪಟ್ಟ ಪ್ರಜೆಗಳಿಗೆ ಸ್ಪೂರ್ತಿ ನೀಡಬೇಕೆಂದು ತಿಳಿಸುತ್ತಾ “ರಾಷ್ಟ್ರೀಯ ಮತದಾರರ ದಿನಾಚರಣೆಯ” ಅಂಗವಾಗಿ ತಿಳಿಸಿದರು.
ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಬಸವೇಶ್ವರ ಶಿಕ್ಷಣ ಮಹಾವಿದ್ಯಾಲಯ ಪ್ರಾಂಶುಪಾಲರಾದ ಡಾ. ಮಲ್ಲಿಕಾರ್ಜುನ ಕನಕಟ್ಟೆಯವರು ಮಾತನಾಡುತ್ತಾ ಇಂದು ನಮ್ಮ ದೇಶ ಬೃಹತ್ ಗಾತ್ರದ ಹಾಗೂ ಆನೆಗಾತ್ರದ ಸಂವಿಧಾನ ಡಾ. ಬಿ.ಆರ್. ಅಂಬೇಡ್ಕರ ಅವರು ಬರೆದ ಸಂವಿಧಾನ ನಮ್ಮ ದೇಶಕ್ಕೆ ಅಷ್ಟೇ ಅಲ್ಲದೇ ಇಡೀ ವಿಶ್ವದಲ್ಲಿ ಪ್ರಸಿದ್ಧಿಯನ್ನು ಪಡೆದಿದೆ ತಾವೆಲ್ಲ ಎನ್.ಸಿ.ಸಿ. ಎನ್.ಎಸ್.ಎಸ್. ವಿದ್ಯಾರ್ಥಿಗಳ ತಮ್ಮ ತಮ್ಮ ಗ್ರಾಮದಲ್ಲಿ ಪ್ರತಿಯೊಬ್ಬ ಪ್ರಜೆ ಮತದಾನ ದಿನದಂದು ರಜೆ ಇದ್ದಾಗ ಪ್ರವಾಸಕ್ಕೆ ಹೋಗದೆ ತಮ್ಮ ಒಂದು ಮತ ಇಡೀ ಐದು ವರ್ಷದ ದೇಶದ ಭವಿಷ್ಯವನ್ನು ಹಾಗೂ ತಮ್ಮ ಗ್ರಾಮದ ಭವಿಷ್ಯವನ್ನು ರೂಪಿಸುತ್ತದೆ ಅದಕ್ಕಾಗಿ ತಾವೆಲ್ಲ ಯುವ ಮತದಾರರು ತಪ್ಪದೇ ಜನಪರ ಕಾಳಜಿಯುಳ್ಳ ವ್ಯಕ್ತಿಗೆ ಮತ ಹಾಕಿ ರಾಷ್ಟ್ರದ ಭವಿಷ್ಯವನ್ನು ರೂಪಿಸಬೇಕೆಂದು ನುಡಿದರು.
ಇದೇ ಸಂದರ್ಭದಲ್ಲಿ ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಆಗಮಿಸಿದ ಡಾ: ಮಲ್ಲಿಕಾರ್ಜುನ ಕೋಟೆಯವರು ಮಾತನಾಡುತ್ತಾ ಭಾರತ ಬೃಹತ ಪ್ರಮಾಣ ಪ್ರಜಾಪ್ರಭುತ್ವ ಪ್ರತಿಯೊಬ್ಬ ಪ್ರಜೆ ಯಾವುದೇ ಆಸೆ ಆಮಿಷಕ್ಕೆ ಒಳಗಾಗದೆ ನಿರ್ಭಯ ನಿಷ್ಪಕ್ಷಪಾತ ಮತದಾನ ಮಾಡಬೇಕು ಪ್ರತಿಯೊಂದು ಮತ ದೇಶದ ಭವಿಷ್ಯವನ್ನು ರೂಪಿಸುತ್ತದೆ ಎಂದು ಮಾರ್ಮಿಕವಾಗಿ ಹೇಳಿದರು.
ಈ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕ ನುಡಿಯನ್ನು ರಾಜ್ಯಶಾಸ್ತ್ರ ವಿಭಾಗ ಮುಖ್ಯಸ್ಥರಾದ ಶ್ರೀಮತಿ ವಾಣಿಶ್ರೀ ಹೇಳಿದರು.
ಇದೇ ಸಂದರ್ಭದಲ್ಲಿ ಮಹಾವಿದ್ಯಾಲಯದ ರಾಜ್ಯಶಾಸ್ತ್ರ ವಿಭಾಗದ ಉಪನ್ಯಾಸಕರಾದ ಶ್ರೀ ಸಂದೀಪಕುಮಾರ ವನ್ನಾಳೆಯವರು ಮತದಾರರ ಪ್ರತಿಜ್ಞಾ ವಿಧಿ ಬೋಧಿಸಿದರು.
ಕಾರ್ಯಕ್ರಮದ ವೇದಿಕೆಯ ಮೇಲೆ ಪ್ರಭಾರಿ ಎನ್.ಸಿ.ಸಿ. ಅಧಿಕಾರಿಯಾದ ಡಾ. ಸಾಮ್ರಾಟ ಶಿವಪ್ಪ ಪಾಯದ್ ಹಾಜರಿದ್ದರು.
ಕಾರ್ಯಕ್ರಮದ ಆರಂಭದಲ್ಲಿ ಪ್ರಾರ್ಥನೆ ಗೀತೆಯನ್ನು ಶ್ರೀಮತಿ ರೇಣುಕಾದೇವಿ ಎಂ. ಅವರು ಹಾಡಿದರೆ, ಸ್ವಾಗತವನ್ನು ಇತಿಹಾಸದ ಮುಖ್ಯಸ್ಥರಾದ ಡಾ. ಶಿವಲೀಲಾ ವೀರಯ್ಯಾ ಹೇಳಿದರೆ, ಇತಿಹಾಸ ವಿಭಾಗದ ಉಪನ್ಯಾಸಕರಾದ ಶ್ರೀ ಬಸವರಾಜ ಬಿರಾದಾರ ನಿರೂಪಿಸಿದರೆ, ವಾಣಿಜ್ಯ ವಿಭಾಗದ ಮುಖ್ಯಸ್ಥರಾದ ಡಾ. ಲಕ್ಷ್ಮೀ ವಿಶ್ವನಾಥ ಅವರು ವಂದಿಸಿದರು.
ಈ ಕಾರ್ಯಕ್ರಮದಲ್ಲಿ ಎನ್.ಸಿ.ಸಿ., ಎನ್.ಎಸ್.ಎಸ್., ಸ್ಕೌಟ್ಸ್ ಹಾಗೂ ಗೈಡ್ಸ್, ಯುವ ರೆಡ್‍ಕ್ರಾಸ್ ಸ್ವಯಂ ಸೇವಕರು, ವಿದ್ಯಾರ್ಥಿ, ವಿದ್ಯಾರ್ಥಿನಿಯರು, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ವರ್ಗದವರು ಹಾಜರಿದ್ದರು.