ಮತದಾನ ನಮ್ಮೆಲ್ಲರ ಕರ್ತವ್ಯ


ರಬಕವಿ-ಬನಹಟ್ಟಿ,ಜ.೨೭
ಮತದಾನ ನಮ್ಮೆಲ್ಲರ ಕರ್ತವ್ಯವಾಗಿದೆ. ಯುವಕರು ತಾವು ಮತದಾನ ಮಾಡುವುದರ ಜೊತೆಗೆ ಇನ್ನೀತರರು ಮತದಾನ ಮಾಡುವಂತೆ ಜಾಗೃತಿಯನ್ನು ಮೂಡಿಸಬೇಕು ಎಂದು ಬನಹಟ್ಟಿಯ ದಿವಾಣಿ ನ್ಯಾಯಾಧೀಶೆ ಸೌಮ್ಯಾ ಹೂಲಿ ತಿಳಿಸಿದರು.


ಅವರು ರಬಕವಿ-ಬನಹಟ್ಟಿ ತಾಲ್ಲೂಕು ಆಡಳಿತದ ಆಶ್ರಯದಲ್ಲಿ ರಬಕವಿ ಬನಹಟ್ಟಿ ನಗರಸಭೆಯ ಸಭಾ ಭವನದಲ್ಲಿ ಹಮ್ಮಿಕೊಳ್ಳಲಾದ ರಾಷ್ಟ್ರೀಯ ಮತದಾರ ದಿನಾಚರಣೆಯ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮತದಾನ ನಮ್ಮೆಲ್ಲರ ಪವಿತ್ರವಾದ ಹಕ್ಕು. ಇದರಿಂದ ಸಮರ್ಥ ಅಭ್ಯರ್ಥಿಗಳನ್ನು ಆಯ್ಕೆ ಮಾಡುವುದರ ಜೊತೆಗೆ ಶ್ರೇಷ್ಠ ಭಾರತವನ್ನು ನಿರ್ಮಾಣ ಮಾಡಲು ಸಾಧ್ಯವಾಗುತ್ತದೆ ಎಂದು ನ್ಯಾಯಾಧೀಶೆ ಸೌಮ್ಯಾ ಹೂಲಿ ತಿಳಿಸಿದರು.


ಹಿರಿಯ ವಕೀಲ ಎಂ.ಜಿ.ಕೆರೂರ ಮಾತನಾಡಿ, ಮತದಾರರು ಚುನಾವಣೆಯ ಸಂದರ್ಭದಲ್ಲಿ ಯಾವುದೆ ಆಸೆ ಆಮೀಷಗಳಿಗೆ ಒಳಗಾಗದೆ ಮತದಾನ ಮಾಡಬೇಕು. ಮತದಾರರಿಗೆ ತಮ್ಮದೆ ಆದ ಜವಾಬ್ದಾರಿಗಳು ಇವೆ. ಎಂದು ತಿಳಿಸಿದರು.


ಸಂಪನ್ಮೂಲ ವ್ಯಕ್ತಿ ಎಚ್.ವೈ. ಆಲಮೇಲ ಮಾತನಾಡಿದರು. ರಬಕವಿ ಬನಹಟ್ಟಿ ತಹಶೀಲ್ದಾರ್ ಗಿರೀಶ ಸ್ವಾದಿ, ತೇರದಾಳ ತಹಶೀಲ್ದಾರ್ ವಿಜಯಕುಮಾರ ಕಡಕೋಳ, ವಕೀಲರ ಸಂಘದ ಕಾರ್ಯದರ್ಶಿ ರವಿ ಸಂಪಗಾವಿ, ಸಹಕಾರ್ಯದರ್ಶಿ ಆರ್. ಡಿ. ಸರಿಕರ, ಎ.ಎಸ್.ಐ. ಕರಣಸಿಂಗ ರಜಪೂತ ವೇದಿಕೆಯ ಮೇಲೆ ಇದ್ದರು.


ರವಿ ಹುಲ್ಲೆನ್ನವರ, ಎಫ್.ಬಿ.ತಳವಾರ, ಪ್ರಕಾಶ ಮಠಪತಿ, ಸದಾಶಿವ ಕುಂಬಾರ, ಶಿಕ್ಷಣ ಸಂಯೋಜಕರಾದ ಬಿ. ಎಂ. ಹಳೇಮನಿ, ಬಿ. ವಿ. ಅಮ್ಮಲಜೇರಿ ಮತ್ತು ಮತಗಟ್ಟೆ ಅಧಿಕಾರಿಗಳು ಸೇರಿದಂತೆ ಅನೇಕರು ಇದ್ದರು.