ಕಲಬುರಗಿ,ಅ.9: ನಗರದ ರಾಮಮಂದಿರ ರಿಂಗ್ ರಸ್ತೆಯಲ್ಲಿರುವ ಕೊಹಿನೂರ್ ಪದವಿ ಮಹಾವಿದ್ಯಾಲಯದಲ್ಲಿ ನನ್ನ ಮತ ಮಾರಾಟಕ್ಕಿಲ್ಲ -ಮತದಾರರ ಜಾಗೃತಿ ಆಂದೋಲನ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮದಲ್ಲಿ ಭಾರತೀಯ ಚುನಾವಣಾ ಸುಧಾರಣಾ ಹೋರಾಟ ಸಮಿತಿ ಸಂಸ್ಥಾಪಕ ರಮೇಶ ದುತ್ತರಗಿ ಮಾತನಾಡುತ್ತಾ,ಯುವಜನಾಂಗ ಮತದಾನದಿಂದ ವಿಮುಖರಾಗದೆ ಪ್ರತಿ ಚುನಾವಣೆಯಲ್ಲೂ ತಮ್ಮ ಹಕ್ಕನ್ನು ಜವಾಬ್ದಾರಿಯಿಂದ ಚಲಾಯಿಸಬೇಕು.ದೇಶ ಕಟ್ಟುವಲ್ಲಿ ಶಾಸಕಾಂಗ ಕಾರ್ಯಾಂಗ ನ್ಯಾಯಾಂಗ ಹಾಗೂ ಮಾಧ್ಯಮ ರಂಗಕ್ಕೆ ಎಷ್ಟು ಜವಾಬ್ದಾರಿ ಇದೆಯೋ ಸಾರ್ವಜನಿಕರಿಗೂ ಕೂಡ ಅಷ್ಟೇ ಜವಾಬ್ದಾರಿ ಇದೆ ಎಂಬುದನ್ನು ನಾವೆಲ್ಲ ತಿಳಿದುಕೊಳ್ಳಬೇಕು. ಕೇವಲ ಸರ್ಕಾರ ಹಾಗೂ ಅಧಿಕಾರಿಗಳ ಕಡೆಗೆ ಬೊಟ್ಟು ಮಾಡಿ ತೋರಿಸದೆ ನಮ್ಮ ಹಕ್ಕು ಮತ್ತು ಕರ್ತವ್ಯ ಹಾಗೂ ಜವಾಬ್ದಾರಿಯನ್ನು ಅರಿತುಕೊಳ್ಳಬೇಕು ಅಂದಾಗ ಮಾತ್ರ ಬಲಿಷ್ಠವಾದ ದೇಶ ಕಟ್ಟಲಿಕ್ಕೆ ಸಾಧ್ಯ ಎಂದರು
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಂಶುಪಾಲ ಪೆÇ್ರ. ವಿ.ಎಂ.ಹಿರೇಮಠ ವಹಿಸಿದ್ದರು.ಉಪನ್ಯಾಸಕ ಚನ್ನಬಸವ.ಡಿ.ಎಚ್ ನಿರೂಪಿಸಿದರು.ಉಪನ್ಯಾಸಕ ನಿಖಿಲ್ ಕುಲಕರ್ಣಿ ಸ್ವಾಗತಿಸಿದರು. ಆಡಳಿತಾಧಿಕಾರಿ ಸಿದ್ದರಾಜ ಸೊ0ತಕರ ವಂದನಾರ್ಪಣೆ ಮಾಡಿದರು. ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಸಾವನ.ವಿ.ಗುತ್ತೇದಾರ, ಸೌಮ್ಯ.ಎಂ.ಕೆ, ರವಿಕುಮಾರ.ಬಿ.ಪಾಟೀಲ, ಪ್ರಜ್ಞಾ.ಕೆ.ಎಚ್, ಪಾರ್ವತಿ.ಎಸ್, ಅನಿತಾ ಬಿರಾದಾರ,ಸುಹಾಸಿನಿ ಪಾಟೀಲ್ ಹಾಗೂ ಬೋಧಕೇತರ ಸಿಬ್ಬಂದಿಗಳಾದ ಜ್ಯೋತಿ ಮಡಿವಾಳಕರ್, ಅನಿತಾ ರೆಡ್ಡಿ ಹಾಗೂ ಸತೀಶ.ಪಿ.ಪಾಟೀಲ ಉಪಸ್ಥಿತರಿದ್ದರು.ಕಾರ್ಯಕ್ರಮದ ಕೊನೆಯಲ್ಲಿ ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಲಾಯಿತು.

























