ವಾಲಿಬಾಲ್ ಪಂದ್ಯಾವಳಿ: ಜಿಲ್ಲಾ ಮಟ್ಟಕ್ಕೆ ಆಯ್ಕೆ

ಕಲಬುರಗಿ,ಅ.7-2025-26 ನೇ ಸಾಲಿನ ಕಲ್ಬುರ್ಗಿ ಉತ್ತರ ವಲಯದ ತಾಲೂಕು ಮಟ್ಟದ ವಾಲಿಬಾಲ್ ಪಂದ್ಯಾವಳಿಯಲ್ಲಿ ಅವರಾದ (ಬಿ) ಗ್ರಾಮದ ಕರ್ನಾಟಕ ಪಬ್ಲಿಕ್ ಸ್ಕೂಲ್ ಪ್ರಾಥಮಿಕ ವಿಭಾಗ ವಿದ್ಯಾರ್ಥಿಗಳು ತಾಲೂಕಿಗೆ ಪ್ರಥಮ ಸ್ಥಾನ ಗಳಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿ ಶಾಲೆಗೆ ಕೀರ್ತಿ ತಂದಿದ್ದಾರೆ.
ಈ ಸಂದರ್ಭದಲ್ಲಿ ತಾಲೂಕಿನ ದೈಹಿಕ ಶಿಕ್ಷಣ ಅಧಿಕಾರಿ ದಶರಥ ಹಾಗೂ ಶಾಲೆಯ ಮುಖ್ಯ ಗುರುಗಳಾದ ಎಚ್.ಎಸ್. ಹಿರೇಮಠ, ಹಿರಿಯ ಮುಖ್ಯ ಗುರುಗಳು ಹಾಗೂ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಜಿಲ್ಲಾ ಅಧ್ಯಕ್ಷರಾದ ಭೋಜನಗೌಡ ಪಾಟೀಲ, ದೈ.ಶಿ.ಶಿ.ದಯಾನಂದ, ತಂಡದ ತರಬೇತಿದಾರಾದ ಪ್ರವೀಣ್ ಇದ್ದರು.