Home ಜಿಲ್ಲೆ ಬೆಂಗಳೂರು ಅಬುದಾಬಿಯಲ್ಲಿ ವಾಲಿಬಾಲ್ ಪಂದ್ಯ- ಭಾರತಕ್ಕೆ ಬೆಳ್ಳಿ ಪದಕ

ಅಬುದಾಬಿಯಲ್ಲಿ ವಾಲಿಬಾಲ್ ಪಂದ್ಯ- ಭಾರತಕ್ಕೆ ಬೆಳ್ಳಿ ಪದಕ

ಕೋಲಾರ,ಫೆ.೧೫: ಫೆಬ್ರವರಿ ೨೦೨೬ರಲ್ಲಿ ಯು.ಎ.ಇ.ಯ ಅಬುದಾಬಿಯಲ್ಲಿ ೦೬-೨-೨೦೨೬ ರಿಂದ ೧೪-೦೨-೨೦೨೬ ರವರೆಗೆ ನಡೆದ ಓಪನ್ ವರ್ಡ್ ಮಾಸ್ಟರ್ ಗೇಮ್ಸ್-೨೦೨೬ ಕ್ರೀಡಾಕೂಟದ ವಾಲಿಬಾಲ್ ವಿಭಾಗದಲ್ಲಿ ಭಾರತ ತಂಡ ಯು.ಎ.ಇ ವಿರುದ್ಧ ವಿರೋಚಿತ ಸೋಲು ಕಾಣುವ ಮೂಲಕ ಬೆಳ್ಳಿ ಪದಕಕ್ಕೆ ಕೊರಳೊಡ್ಡಿದೆ.


ಪೈನಲ್ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದ ಭಾರತ ತಂಡವು ವಿರೋಚಿತ ಸೋಲು ಕಂಡರೂ ಸಹ ಉತ್ತಮ ಆಟವನ್ನು ಪ್ರದರ್ಶಿಸಿತು.


ಕರ್ನಾಟಕದಿಂದ ೩೦* ವಿಭಾಗದಲ್ಲಿ ಸಾಗರ್ ಸೋಲಂಕಿ, ಸಂತೋಷ್ ಕುಮಾರ್ (ಕೆ.ಇ.ಬಿ), ಸೋಮಶೇಖರ್ ತಾಲ್ಲೂಕಿನ ವಿಟ್ಟಪ್ಪನಹಳ್ಳಿ (ಬಿ.ಎಂ.ಟಿ.ಸಿ), ಪುನೀತ್ ಕುಮಾರ್, ಕೆ.ವಿ.ಪ್ರಜ್ವಲ್, ಖಲೀಲ್, ಗುಜರಾತ್ ನಿಂದ ಜಯ್ ಪಟೇಲ್, ಬಬೀಶ್ ಭಾಗವಹಿಸಿದ್ದರು.


ಉತ್ತಮ ಪ್ರದರ್ಶನ ನೀಡಿದ ಆಟಗಾರರಿಗೆ ಇನ್ನು ಹೆಚ್ಚಿನ ಸಹಕಾರ ಹಾಗೂ ಪ್ರೋತ್ಸಾಹ ಸಿಕ್ಕಿರೆ ಭಾರತದ ಕೀರ್ತಿ ಪತಾಕೆಯನ್ನು ಹಾರಿಸಲಿದ್ದಾರೆ ಎಂಬುವುದು ಎಲ್ಲರ ಒತ್ತಾಸೆಯಾಗಿದೆ.