ಕೋಲಾರ, ಆ,೨೦- ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಶ್ರೀ ಚಂದ್ರಶೇಖರಸ್ವಾಮಿ ಅವರು ಶೈಕ್ಷಣಿಕ ಮತ್ತು ಅಧ್ಯಾತ್ಮಿಕ ಕ್ಷೇತ್ರದ ಮೂಲಕ ಸಮುದಾಯಕ್ಕೆ ಅಮೂಲ್ಯವಾದ ಕೊಡುಗೆಯನ್ನು ನೀಡಿರುವಂತ ಮಹಾನ್ ಗುರುಗಳ ಆದರ್ಶವನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿ ಕೊಳ್ಳ ಬೇಕೆಂದು ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷರು ಹಾಗೂ ಹಿರಿಯ ವಕೀಲರಾದ ಕೆ.ವಿ.ಶಂಕರಪ್ಪ ಅಭಿಪ್ರಾಯ ಪಟ್ಟರು.
ನಗರದ ಜಿಲ್ಲಾ ಒಕ್ಕಲಿಗರ ಸಂಘದ ಕಚೇರಿಯಲ್ಲಿ ಆಯೋಜಿಸಿದ್ದ ಶ್ರೀಗಳ ಭಾವ ಪೂರ್ಣ ಶ್ರದ್ದಾಂಜಲಿಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ ರಾಜ್ಯದಲ್ಲಿ ಮುಖ್ಯ ಮಂತ್ರಿ ಸ್ಥಾನದ ವಿಚಾರದ ಚರ್ಚೆಯಲ್ಲಿ ದಿಟ್ಟ ಹಾಗೂ ನೇರವಾಗಿ ಒಕ್ಕಲಿಗ ಸಮುದಾಯದ ಉಪಮುಖ್ಯ ಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಮುಖ್ಯ ಮಂತ್ರಿಯ ಸ್ಥಾನದ ಅವಕಾಶವನ್ನು ಕೊಡ ಬೇಕೆಂಬ ಸಂದೇಶವನ್ನು ನೇರವಾಗಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಹಾಗೂ ಕಾಂಗ್ರೇಸ್ ಪಕ್ಷದ ಹೈಕಮಾಂಡ್‌ಗೆ ನೀಡಿ ಆಗ್ರಹ ಪಡೆಸಿದ್ದನ್ನು ನೆನಪಿಸಿ ಕೊಂಡರು.
ಜಿಲ್ಲೆಯಲ್ಲಿ ಸಮುದಾಯದ ಕಾರ್ಯಕ್ರಮಗಳಿಗೆ ಶ್ರೀಗಳು ವಿಶೇಷ ಕಾಳಜಿವಹಿಸಿ ಪ್ರೋತ್ಸಾಹಿಸುತ್ತಿದ್ದರು. ಸಂಘವು ಆಹ್ವಾನಿಸುವಂತ ಕಾರ್ಯಕ್ರಮ ಗಳಿಗೆ ಅಗಮಿಸಿ ಆಶೀರ್ವಾಚನದ ನುಡಿಗಳಲ್ಲಿ ಉತ್ತಮವಾದ ಮಾರ್ಗ ದರ್ಶನವನ್ನು ನೀಡುವ ಮೂಲಕ ದಾರಿ ದೀಪವಾಗಿದ್ದರು. ಅವರು ಸೂಚಿಸಿರುವ ಹಾದಿಯಲ್ಲಿ ಪ್ರತಿ ಯೊಬ್ಬರೂ ಸಾಗುವಂತಾಗ ಬೇಕು. ಅವರ ಅಗಲಿಕೆಯು ಒಕ್ಕಲಿಗ ಸಮುದಾಯಕ್ಕೆ ಮಾತ್ರವಲ್ಲಿ ಇಡೀ ಸಮಾಜಕ್ಕೆ ತೀವ್ರವಾದ ನಷ್ಟವುಂಟಾಗಿದೆ ಎಂದರು.
ಈ ಸಂದರ್ಭದಲ್ಲಿ ಸ್ವಾಮೀಜಿಗಳ ಆತ್ಮಕ್ಕೆ ಶಾಂತಿಯನ್ನು ಕೋರಿ ಮೌನಾಚರಣೆಯ ಮೂಲಕ ಸಂತಾಪ ವ್ಯಕ್ತ ಪಡೆಸಿದರು.
ಸಂತಾಪ ಸೂಚನಾ ಸಭೆಯಲ್ಲಿ ಹಲವು ಮುಖಂಡರು ಸ್ವಾಮೀಜಿಯವರೊಂದಿಗಿನ ನೆನಪುಗಳನ್ನು ಹಂಚಿ ಕೊಂಡು ಶ್ರದ್ದಾಂಜಲಿ ಅರ್ಪಿಸಿದರು,
ಸಭೆಯಲ್ಲಿ ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕರಾದ ಡಾ. ಡಿ.ಕೆ.ರಮೇಶ್ ಜಿಲ್ಲಾ ಸಂಘದ ಉಪಾಧ್ಯಕ್ಷ ವಿ.ಕೃಷ್ಣರೆಡ್ಡಿ, ಕಾರ್ಯದರ್ಶಿ ಪವನ್ ಕೆ.ವಿ.ನಾರಾಯಣಸ್ವಾಮಿ, ಜಿಲ್ಲಾ ನಿದೇರ್ಶಕ ಹಾಗೂ ಸಮಾಜ ಸೇವಕ ಸಿ.ಎಂ.ಆರ್. ಶ್ರೀನಾಥ್ , ಡೆಕ್ಕನ್ ರಾಮಕೃಷ್ಣಪ್ಪ, ನಗರಸಭೆ ಸದಸ್ಯ ಎಸ್.ಆರ್.ಮುರಳೀಗೌಡ, ಮಾಲೂರು ಪ್ರಭಾಕರ್, ಬೇವಹಳ್ಳಿ ಶಂಕರ್ , ವ್ಯವಸ್ಥಾಪಕ ಎನ್. ವೇಣುಗೋಪಾಲ್ ಮುಂತಾದವರು ಇದ್ದರು.
































