ವಿವೇಕಾನಂದ ವಿದ್ಯಾ ನಿಕೇತನ ಶಾಲೆಗೆ ರಾಜ್ಯಮಟ್ಟದ ಶಿಕ್ಷಣ ಚೈತನ್ಯ ಪ್ರಶಸ್ತಿ

ಕಲಬುರಗಿ:ಫೆ.1:ಇತ್ತೀಚೆಗೆ,ಬೆಂಗಳೂರಿನಲ್ಲಿ ಜರುಗಿದ ರಾಜ್ಯ ಮಟ್ಟದ ಬೆಸ್ಟ್ ಸ್ಕೂಲ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ, ಕಲಬುರಗಿಯ ವಿವೇಕಾನಂದ ವಿದ್ಯಾ ನಿಕೇತನ ಶಾಲೆಗೆ “ಶಿಕ್ಷಣ ಚೈತನ್ಯ-2026″ಪ್ರಶಸ್ತಿ ನೀಡಿ ಗೌರವಿಸಲಾಯಿತು. ಬೆಂಗಳೂರಿನ ಲಕ್ಷ್ಯ ಕರಿಯರ್ ಅಕಾಡೆಮಿ ಹಾಗೂ ಸೂರ್ಯ ಫೌಂಡೇಶನ್ ವತಿಯಿಂದ ನೀಡಲಾದ ಈ ಪ್ರಶಸ್ತಿಯನ್ನು ಶಾಲೆಯ ಶಿಕ್ಷಕ ಮಲ್ಲಿಕಾರ್ಜುನ ಜವಳಗಿ ಸ್ವೀಕರಿಸಿದರು.
ಸಮಾರಂಭದ ಮುಖ್ಯ ಅತಿಥಿಗಳಾಗಿ ಆಗಮಿಸಿದ ಲೇಖಕ ವೇಣು. ಸಿ. ವಿ. ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು. ಶಾಲೆಗಳಿಂದ ಮಾತ್ರ ಮಕ್ಕಳಲ್ಲಿ ಉತ್ತಮ ಸಂಸ್ಕಾರ ನೀಡಲು ಸಾಧ್ಯ. ದೇಶ ಕಟ್ಟುವ ಕಾರ್ಯದಲ್ಲಿ ತೊಡಗಿರುವ ಪ್ರಾಮಾಣಿಕ ಸಂಸ್ಥೆಗಳಿಗೆ ಪೆÇ್ರೀತ್ಸಾಹ ನೀಡುವುದು ಸಂಘ ಸಂಸ್ಥೆಗಳ, ಸಮಾಜದ ಹಾಗೂ ಸರಕಾರದ ಜವಾಬ್ದಾರಿ ಎಂದರು.
ಸೂರ್ಯ ಫೌಂಡೇಶನ್ ಸಂಸ್ಥಾಪಕರಾದ ಸೋಮೇಶ್ ನವೋದಯ ಮಾತನಾಡಿ,ಶಾಲೆಯಲ್ಲಿರುವ ಉತ್ತಮ ಭೌತಿಕ ಸೌಲಭ್ಯ, ಗುಣ ಮಟ್ಟದ ಶಿಕ್ಷಣ, ಉತ್ತಮ ಶೈಕ್ಷಣಿಕ ಫಲಿತಾಂಶ, ಬೋಧಕರ ಸೇವೆಯನ್ನು ಪರಿಗಣಿಸಿ,ರಾಜ್ಯದ ಕೆಲವೇ ಕೆಲವು ಶಾಲೆಗಳಿಗೆ ಪೆÇ್ರೀತ್ಸಾಹಪೂರ್ವಕವಾಗಿ ಪ್ರತಿ ವರ್ಷ ಈ ಪ್ರಶಸ್ತಿನೀಡಲಾಗುತ್ತದೆ, ಎಂದರು.

ಶಾಲೆಗೆ ರಾಜ್ಯ ಮಟ್ಟದ ಬೆಸ್ಟ್ ಸ್ಕೂಲ್ ಅವಾರ್ಡ್ ಬಂದಿರುವುದಕ್ಕೆ,ಸಂಸ್ಥೆಯ ಅಧ್ಯಕ್ಷೆ ಸುವರ್ಣ ಭಗವತಿ, ಪ್ರಾಂಶುಪಾಲ ಸಿದ್ದಪ್ಪ ಭಗವತಿ, ಪೆÇೀಷಕರು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಈ ಪ್ರಶಸ್ತಿ ಶಿಕ್ಷಕರ ಸೇವೆ, ಪೆÇೀಷಕರ ಸಹಕಾರ ಹಾಗೂ ಮಕ್ಕಳ ಪರಿಶ್ರಮದಿಂದ ಸಾಧ್ಯವಾಗಿದೆ. ಇದರಿಂದ ನಮ್ಮ ಜವಾಬ್ದಾರಿ ಹೆಚ್ಚಾಗಲಿದೆ. ಇನ್ನು ಉತ್ತಮ ಗುಣಮಟ್ಟದ ಸೇವೆ ಸಲ್ಲಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ. – ಸಿದ್ದಪ್ಪ ಭಗವತಿ, ಪ್ರಾಂಶುಪಾಲರು, ವಿವಿಎನ್ ಶಾಲೆ.