ವಿಶ್ವೇಶ್ವರಯ್ಯನವರು ಆಧುನಿಕ ಭಾರತದ ನಿರ್ಮಾಪಕರು

ಕಲಬುರಗಿ,ಸೆ.20: ಒಂದು ರಾಷ್ಟ್ರದ ಅಭಿವೃದ್ಧಿಯಲ್ಲಿ ಇಂಜಿನಿಯರಗಳ ಪಾತ್ರ ಬಹು ಮುಖ್ಯ. ಭಾರತ ರತ್ನ ವಿಶ್ವೇಶ್ವರಯ್ಯನವರು ಆಧುನಿಕ ಭಾರತದ ನಿರ್ಮಾತೃ. ಅವರ ಜನ್ಮವ ದಿನವನ್ನು ನಾವಿಂದು ಇಂಜಿನಿಯರಿಂಗ್ ಗಳ ದಿನ ಎಂದು ಆಚರಿಸುತ್ತಿದ್ದೇವೆ.ವಿಶ್ವೇಶ್ವರಯ್ಯ ರವರ ಪ್ರಾಮಾಣಿಕತೆ, ಸರಳತೆಯನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಎಂದು ಕೆಪಿಟಿಸಿಎಲ ಚೀಫ್ ಇಂಜಿನಿಯರ್ ಆದ ರಾಮಸ್ವಾಮಿಯವರು ನುಡಿದರು ಅವರು ನಗರದ ಸಾರ್ವಜನಿಕ ಉದ್ಯಾನದ ರೋಟರಿ ಶಾಲೆಯ ಪಾಲ್ ಹ್ಯಾರಿಸ್ ಸಭಾಂಗಣದಲ್ಲಿ ರೋಟರಿ ಕ್ಲಬ್ ಗುಲ್ಬರ್ಗ ನಾರ್ತ್ ವತಿಯಿಂದ ಆಯೋಜಿಸಲಾಗಿದ್ದ ಇಂಜಿನಿಯರಿಂಗ್ ಗಳ ಇಂಜಿನಿಯರ್ಸ್ ಡೇ ದಿನಾಚರಣೆ ಮತ್ತು ಕಲ್ಯಾಣ ಕರ್ನಾಟಕ ವಿಮೋಚನ ದಿನಾಚರಣೆಯ ನಿಮಿತ್ತ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡುತ್ತಿದ್ದರು.
ಸಭೆಯ ಅಧ್ಯಕ್ಷತೆಯನ್ನು ರೋಟರಿ ಕ್ಲಬ್ ಗುಲ್ಬರ್ಗ ಕ್ಲಬ್ ಉತ್ತರ ವಲಯದ ಅಧ್ಯಕ್ಷ ಆನಂದ ದಂದೋತಿ ಅವರು ವಹಿಸಿದ್ದರು.ದಿನೇಶ್ ಪಾಟೀಲ್ ಅವರು ಕಾರ್ಯಕ್ರಮವನ್ನು ನಿರೂಪಿಸಿದರು. ಕಾರ್ಯದರ್ಶಿ ಶಿವಾನಂದ್ ಬೇಲೂರೆ ವಂದಿಸಿದರು. ಕಾರ್ಯಕ್ರಮದಲ್ಲಿ ಇಂಜಿನಿಯರ್ ಸದಸ್ಯರುಗಳಾದ ಜಯಕುಮಾರ್ ಮಡಗಿ, ಮಾಣಿಕ್ ಪವಾರ್, ದೀಪಕ್ ಕೌಲಗಿಕರ್, ಡಾಕ್ಟರ್ ಬಾಬುರಾವ್ ಸೇರಿಕಾರ್, ಶ್ರೀಶೈಲ್ ಪಟಾಟೆ, ನೌಶಾದ್ ಇರಾನಿ, ವೈಜನಾಥ್ ಪಾಟೀಲ್ ,ಹಿತೇಂದ್ರ ತಿವಾರಿ, ಅನಿಲ್ ಮಂಗಲಗಿ, ತನ್ಮಯ ಶಹ ರವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಪ್ರಶಾಂತ್ ಚಿಟಗುಪ್ಪಕರ್ ,ಸುಹಾಸ್ ಕಣಗೆ, ಬಸವರಾಜ್ ಖಂಡೇರಾವ್, ಡಾ. ನಾಗನಾಥ್ ಗಚ್ಚಿನಮನಿ, ಸಂಪತ್ ಕುಮಾರ್ ತಪಾಡಿಯ ,ಡಾ .ಮಹದೇವಪ್ಪ ರಾಂಪುರೆ, ಶರಣು ಪಪ್ಪ, ಚನ್ನವೀರ್ ಲಿಂಗನವಾಡಿ, ರೇವಣಸಿದ್ದ ಮದುರಿ, ಲಿಂಗರಾಜ್ ಬಾವಿಕಟ್ಟಿ ಉಪಸ್ಥಿತರಿದ್ದರು.