ಮನೆ ಕುಸಿದು ಮೃತಪಟ್ಟ ಬಾಲ ಕುಟುಂಬಕ್ಕೆ ಭೇಟಿ, ಸಾಂತ್ವನ

ಜೇವರ್ಗಿ,ಅ.4-ಯಡ್ರಾಮಿ ಪಟ್ಟಣದಲ್ಲಿ ಧಾರಾಕಾರ ಮಳೆಯಿಂದ ಮನೆ ಕುಸಿದು ಮೃತಪಟ್ಟ ಬಾಲಕಿ ಮನೆಗೆ ಜಮಾತೆ ಇಸ್ಲಾಮ್ ಹಿಂದ್ ಹಾಗೂ ಯಾಳವಾರದ ಆದರ್ಶ ಗ್ರಾಮ ಸಮಿತಿ ವತಿಯಿಂದ ನೀಯೋಗ ಭೇಟಿ ನೀಡಿತು.
ಮೃತಪಟ್ಟ ಬಾಲಕಿ ಕುಟುಂಬದವರಿಗೆ ಸಾಂತ್ವನ ಹೇಳಿ ದುಃಖದಲ್ಲಿರುವ ಪರಿವಾರದ ಜೊತೆ ನಾವು ಇದ್ದೇವೆ ಎಂದು ನಿಯೋಗದ ಸದಸ್ಯರು ಧೈರ್ಯ ತುಂಬಿದರು.
ಈ ಸಂದರ್ಭದಲ್ಲಿ ಆದರ್ಶ ಗ್ರಾಮ ಸಮಿತಿ ಅಧ್ಯಕ್ಷರಾದ ಇಬ್ರಾಹಿಂ ಪಟೇಲ್ ಯಾಳವಾರ, ರಾಜಾ ಪಟೇಲ್ ಪೆÇೀಲಿಸ್ ಬಾಬು ಬಿ ಪಾಟೀಲ್ ಮುತ್ಕೋಡ್, ಅಮೀರ್ ಪಟೇಲ್ ಯಡ್ರಾಮಿ, ಅಜೀಜ್ ಪಟೇಲ್, ರಶೀದ್ ನಮಾಜಿ, ಮೊಹಮದ್ ಚೌದರಿ, ಗಫೂರ್ ಪಟೇಲ್ ಹಾಗೂ ಇನ್ನಿತರರು ಹಾಜರಿದ್ದರು