
ಕಲಬುರಗಿ,ಮೇ.9: ಮುಂದಿನ ಐದು ವರ್ಷದಲ್ಲಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ಆರ್ಥಿಕ, ಸಾಮಾಜಿಕ, ಆರೋಗ್ಯ, ಶೈಕ್ಷಣಿಕ ಒಳಗೊಂಡಂತೆ ಸಮಗ್ರ ಮತ್ತು ಸುಸ್ಥಿರ ಅಭಿವೃದ್ಧಿಗೆ ದೃಷ್ಠಿಕೋನ ಯೋಜನೆಗಳು ರೂಪಿಸುವ ಅಗತ್ಯವಿದೆ ಎಂದು ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಡಾ.ಅಜಯ್ ಸಿಂಗ್ ಹೇಳಿದರು.
ಶುಕ್ರವಾರ ಕಲಬುರಗಿ ನಗರದ ತಾಜ್ ಸುಲ್ತಾನಪುರ ರಸ್ತೆಯ ಹೋಟೆಲ್ ಎನ್‍ರೈಸ್‍ನಲ್ಲಿ ಕೆ.ಕೆ.ಆರ್.ಡಿ.ಬಿ. ಮಂಡಳಿ ಆಯೋಜಿಸಿದ ಕಲ್ಯಾಣ ಕರ್ನಾಟಕ ಅಭಿವೃದೀಗಾಗಿ ದೃಷ್ಠಿಕೋನ ಯೋಜನೆ 2026-2031 ಕಾರ್ಯಗಾರದಲ್ಲಿ ವಿಡಿಯೋ ಕಾನ್ಫೆರೆನ್ಸ್ ಮೂಲಕ ಭಾಗವಹಿಸಿ ಮಾತನಾಡಿದ ಅವರು, ಪ್ರದೇಶದಲಿ ಹಿಂದುಳಿವಿಕೆ ಹೋಗಲಾಡಿಸಲು ಮೂಲಸೌಕರ್ಯ ಸೃಷ್ಠಿ, ಬಂಡವಾಳ ಹಕುವುದಷ್ಟೆ ಅಲ್ಲ ಮಾನವ ಬಂಡವಳ ಸೃಷ್ಠಿ ನಮ್ಮ ಆದ್ಯತೆಯಾಗಬೇಕಿದೆ ಎಂದರು.
371ಜೆ ರಚನೆಯಾದ ಮಂಡಳಿಗೆ 2013-14 ರಿಂದ 2025-26ರ ವರೆಗೆ ಸುಮಾರು 23,704 ಕೋಟಿ ರೂ. ಅನುದಾನ ಹಂಚಿಕೆಯಾಗಿದ್ದು, ಇದರಲ್ಲಿ 17,005 ಕೋಟಿ ರೂ. ಖರ್ಚು ಮಾಡಿ ಕೃಷಿ, ನೀರಾವರಿ, ಶಿಕ್ಷಣ, ಆರೋಗ್ಯ, ರಸ್ತೆ, ಮೂಲಸೌಕರ್ಯ ವಲಯದಲ್ಲಿ ಹಣ ಖರ್ಚು ಮಾಡಿದ್ದೇವೆ. ಇನ್ನು ಕಳೆದ ಮೂರು ವರ್ಷದಲ್ಲಿ ಡಾ.ಡಿ.ಎಂ. ನಂಜುಂಡಪ್ಪ ಅವರ ವರದಿಯಂತೆ ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡಿದ್ದು, ಆರೋಗ್ಯ ಆವಿಷ್ಕಾರ ಕಾರ್ಯಕ್ರಮ ಮೂಲಕ ಆರೋಗ್ಯ ಸಂಸ್ಥೆಗಳ ಬಲವರ್ಧನೆ ಮಾಡಿದ್ದೇವೆ. ಶಿಕ್ಷಣ ಆವಿಷ್ಕಾರ ಕಾರ್ಯಕ್ರಮದ ಮೂಲಕ ಪ್ರದೇಶದಲ್ಲಿ ಎಲ್.ಕೆ.ಜಿ., ಯು.ಕೆ.ಜಿ., ಆಂಗ್ಲ ಮಾಧ್ಯಮ ಬೋಧನೆಗೆ ಅವಕಾಶ ಮಾಡಿಕೊಡಲಾಗಿದ್ದು, 42 ಸಾವಿರ ಮಕ್ಕಳು ಪ್ರವೇಶಾತಿ ಪಡೆದಿದ್ದಾರೆ. 294 ಕೆ.ಪಿ.ಎಸ್. ಶಾಲೆ ನಿರ್ಮಿಸಲಾಗುತ್ತಿದೆ ಎಂದರು.
ಸಾವಿರಾರು ಕೋಟಿ ರೂ. ಹಣ ಖರ್ಚು ಮಾಡಿ ಮೂಲಸೌಕರ್ಯ, ಕಟ್ಟಡ, ಸೇವೆಗಳು ಸ್ಥಾಪಿಸಿದೆಯಾದರು ಇನ್ನು ಈ ಭಾಗದಲ್ಲಿ ತಲಾ ಆದಾಯ ಚೇತನರಿಕೆ ಕಂಡಿಲ್ಲ. ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ಹಿಂದಿದ್ದೇವೆ. ರಾಜ್ಯದ ತಲಾ ಆದಾಯ 4.25 ಲಕ್ಷ ರೂ. ಇದೆ. ಬೆಂಗಳೂರು ನಗರ ಜಿಲ್ಲೆಯ ತಲಾ ಆದಾಯ 9.03 ಲಕ್ಷ ರೂ. ಗಳಿದ್ದರೆ ಕಲಬುರಗಿ ಜಿಲ್ಲೆಯ ತಲಾ ಆದಾಯ ಕೇವಲ 1.69 ಲಕ್ಷ ರೂ. ಮಾತ್ರ. ಪ್ರಾದೇಶಿಕ ಅಸಾಮಾನತೆ, ಅಪೌಷ್ಠಿಕ ಮುಕ್ತ ಪ್ರದೇಶ, ಉತ್ತಮ ಆರೋಗ್ಯ ಮತ್ತು ಶಿಕ್ಷಣ, ತಲಾ ಆದಾಯ ಮತ್ತು ಎಚ್.ಡಿ.ಐ ಸೂಚ್ಯಂಕ ವೃದ್ಧಿ ನಮಗೆ ಸವಾಲಾಗಿವೆ. ಇದಕ್ಕಾಗಿ ಕೊರತೆಯ ದತ್ತಾಂಶಗಳನ್ನು ಸಂಗ್ರಹಿಸಿ ತ್ವರಿತಗತಿಯಲ್ಲಿ ಪ್ರಗತಿ ಹೊಂದಲು ಹೊಸ ಆಲೋಚನೆಗಳು, ಚಿಂತನೆಗಳಿಂದ ಅಭಿವೃದ್ಧಿಯ ಅಂತರ ತುಂಬುವಿಕೆಗೆ ಕ್ರಿಯಾ ಯೋಜನೆಗಳು ರೂಪಿಸಬೇಕಿದ್ದು, ಹೀಗಾಗಿ ಪ್ರದೇಶದ ಎಲ್ಲಾ ಇಲಾಖೆಗಳು ಈ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಬೇಕು ಎಂದು ಅಜಯ್ ಸಿಂಗ್ ಹೇಳಿದರು.
ಮಾನವ ಬಂಡವಾಳ ವೃದ್ಧಿ ಮುಖ್ಯ:
ವಿಡಿಯೋ ಕಾನ್ಫೆರೆನ್ಸ್ ಮೂಲಕ ಭಾಗವಹಿಸಿದ ಆರ್ಥಿಕ ತಜ್ಞ ಪೆÇ್ರ. ಗೋವಿಂದರಾವ ಅವರು ಮಾತನಾಡಿ, ಕರ್ನಾಟಕ ದೇಶದಲ್ಲಿ ತೀವ್ರಗತಿಯಲ್ಲಿ ಅಭಿವೃದ್ಧಿ ಹೊಂದುತ್ತಿರುವ ರಾಜ್ಯಗಳಲ್ಲಿ ಒಂದಾಗಿದ್ದರು, ಇಲ್ಲಿನ ಉತ್ತರ ಕರ್ನಾಟಕ ಪ್ರದೇಶ ಅದರಲ್ಲಿಯೂ ಕಲ್ಯಾಣ ಕರ್ನಾಟಕ ಭಾಗ ತೀರಾ ಹಿಂದುಳಿದಿದೆ. 2002ರಲ್ಲಿ ಅಂದಿನ 175 ತಾಲೂಕುಗಳಲ್ಲಿನ 102 ತಾಲೂಕು ಇಂದಿಗೂ ಹಾಗೆ ಇವೆ. ಬಹುಪಾಲು ಇವು ಉತ್ತರ ಕರ್ನಾಟಕ್ಕೆ ಸೇರಿವೆ. ಸಿಕ್ಕಿಂ, ಗೋವಾ ನಂತರ ಹೆಚ್ಚಿನ ತಲಾ ಆದಾಯ ಹೊಂದಿರುವ ರಾಜ್ಯ ನಮ್ಮದಾಗಿದ್ದರೂ ಕಲಬುರಗಿ ಸೇರಿದಂತೆ ಈ ಭಾಗದ ಜನರ ತಲಾ ಆದಾಯ ತುಂಬಾ ಕಡಿಮೆ. ರಾತ್ರೋರಾತ್ರಿ ಹಣ ಸುರಿದರೆ ಬೆಳಗಾದೋಗದ್ರಲ್ಲಿ ಅಭಿವೃದ್ಧಿ ಕಾಣಲು ಅಸಾಧ್ಯ. ಹೀಗಾಗಿ ಇಲ್ಲಿನ ಸರ್ಕಾರಿ ಸಂಸ್ಥೆಗಳು ಲಭ್ಯ ಸಂಪನ್ಮೂಲ ಮತ್ತು ಮಾನವ ಸಂಪನ್ಮೂಲ ಬಳಸಿ ಕಾರ್ಯಕ್ಷಮತೆ ಸುಧಾರಣೆ ಜೊತೆಗೆ ಮಾನವ ಬಂಡವಾಳ ಸೃಷ್ಠಿಸಬೇಕಿದೆ ಎಂದು ಅವರು ಅಭಿಪ್ರಾಯಪಟ್ಟರು.
ಪ್ರಾದೇಶಿಕ ಅಸಮಾನತೆ ನಿವಾರಣೆ ನಿಟ್ಟಿನಲ್ಲಿ ಹಿಂದೆ 2002ರಲ್ಲಿ ಡಾ.ಡಿ.ಎಂ.ನಂಜುಂಡಪ್ಪ ಸಲ್ಲಿಸಿದ ವರದಿ ಎರಡು ದಶಕವಾದ ಕಾರಣ ಇತ್ತೀಚೆಗೆ ತಮ್ಮ ಅಧ್ಯಕ್ಷತೆಯಲ್ಲಿ ಸರ್ಕಾರ ರಚಿಸಿದ ಪ್ರಾದೇಶಿಕ ಅಸಮಾನತೆ ನಿವಾರಣೆ ಸಮಿತಿಯು ಈಗಾಗಲೆ ರಾಜ್ಯ ಸರ್ಕಾರಕ್ಕೆ ತನ್ನ ವರದಿ ಸಲ್ಲಿಸಿದ್ದು, ಮುಂದಿನ 5 ವರ್ಷದಲ್ಲಿ ಪ್ರತಿ ವರ್ಷ 8 ಸಾವಿರ ಕೋಟಿ ರೂ. ಗಳಂತೆ ಒಟ್ಟು 43,914 ಕೋಟಿ ರೂ. ವಿವಿಧ ವಲಯದಲ್ಲಿ ಖರ್ಚು ಮಾಡಲು ಶಿಫಾರಸ್ಸು ಮಾಡಲಾಗಿದೆ ಎಂದರು.
ಕೆ.ಕೆಆರ್.ಡಿ.ಬಿ. ಮಂಡಳಿಯ ಅಪರ ನಿರ್ದೇಶಕಿ ಪ್ರವೀಣಪ್ರಿಯಾ ಅವರು ಮಂಡಳಿಗೆ ಕಳೆದ 2013-14 ರಿಂದ 2025-26ರ ವರೆಗೆ ರಾಜ್ಯ ಸರ್ಕಾರದಿಂದ ಅನುದಾನ ಹಂಚಿಕೆ, ಖರ್ಚು, ವಲಯಯವಾರು ಪ್ರಗತಿ ಕುರಿತು ವಿವರಣೆ ನೀಡಿ ಮಾತನಾಡಿದ ಅವರು, ಇದೂವರೆಗೆ ಬಿಡುಗಡೆಯಾದ 23,704 ಕೋಟಿ ರೂ. ಅನುದಾನದಲ್ಲಿ 17,105 ಕೋಟಿ ರೂ. ಖರ್ಚು ಮಾಡಿದ್ದು, 45,066 ಕಾಮಗಾರಿಗಳ ಪೈಕಿ 36,072 ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿದೆ. ಇದರಲ್ಲಿ ಬೀದರ ಜಿಲ್ಲೆಗೆ 3,007 ಕೋಟಿ ರೂ., ಕಲಬುರಗಿ ಜಿಲ್ಲೆಗೆ 4,559.39 ಕೋಟಿ ರೂ., ಯಾದಗಿರಿಗೆ 2,417.06 ಕೋಟಿ ರೂ., ರಾಯಚೂರು ಜಿಲ್ಲೆಗೆ 3,784.30 ಕೋಟಿ ರೂ., ಕೊಪ್ಪಳ ಜಿಲ್ಲೆಗೆ 2,778.35 ಕೋಟಿ ರೂ., ಬಳ್ಳಾರಿ ಜಿಲ್ಲೆಗೆ 1482.49 ಕೋಟಿ ರೂ., ವಿಜಯನಗರ ಜಿಲ್ಲೆಗೆ 1,954.18 ಕೋಟಿ ರೂ. ಹಾಗೂ ಪ್ರದೇಶಕ್ಕೆ ಸೀಮಿತವಾದ ಬೃಹತ್ ಯೋಜನೆಗಳಿಗೆ 1,721 ಕೋಟಿ ರೂ. ಖರ್ಚು ಮಾಡಲಾಗಿದೆ ಎಂದು ವಿವರಿಸಿದರು.
ಕಲಬುರಗಿ ವಿಭಾಗದ ಪ್ರಾದೇಶಿಕ ಆಯುಕ್ತರಾದ ಜಹೀರಾ ನಸ್ಸೀಮ್ ಅವರು ಉದ್ಘಾಟಿಸಿದ ಈ ಕಾರ್ಯಾಗಾರದಲ್ಲಿ ಕೆ.ಕೆ.ಆರ್.ಡಿ.ಬಿ. ಮಂಡಳಿ ಕಾರ್ಯದರ್ಶಿ ನಳಿನ್ ಅತುಲ್, ಆರ್ಥಿಕ ತಜ್ಞೆ ಪೆÇ್ರ.ಛಾಯಾ ದೇಗಾಂವಕರ್, ಕ.ಕ. ಭಾಗದ ಜಿಲ್ಲಾಧಿಕಾರಿಗಳಾದ ಬಿ.ಫೌಜಿಯಾ ತರನ್ನುಮ್, ಡಾ.ಸುರೇಶ ಬಿ. ಇಟ್ನಾಳ, ಕೆ. ನಾಗೇಂದ್ರ ಪ್ರಸಾದ, ಪೂವಿತಾ ಎಸ್., ಕವಿತಾ ಎಸ್. ಮನ್ನಿಕೇರಿ, ಶಿಲ್ಪಾ ಶರ್ಮಾ, ಹರ್ಷಲ್ ಭೋಯಾರ್, ಜಿಲ್ಲಾ ಪಂಚಾಯತ್ ಸಿ.ಇ.ಓ.ಗಳಾದ ಭಂವರ್ ಸಿಂಗ್ ಮೀನಾ, ಗಿರೀಶ ಡಿ. ಬದೋಲೆ, ಎಂ.ಡಿ.ಹ್ಯಾರಿಸ್ ಸುಮೈರ್, ಲವೀಶ್ ಒರಡಿಯಾ, ಈಶ್ವರ ಕುಮಾರ ಕಾಂಡೂ, ವರ್ಣಿತ್ ನೇಗಿ, ,ಒಹಮ್ಮದ್ ಅಕ್ರಮ ಅಲಿ ಶಾ, ಕಲಬುರಗಿ ಮಹಾನಗರ ಪಾಲಿಕೆ ಆಯುಕ್ತ ಅವಿನಾಶ ಶಿಂಧೆ, ಕಲಬುರಗಿ ಸಹಾಯಕ ಆಯುಕ್ತೆ ಸಾಹಿತ್ಯಾ ಆಲದಕಟ್ಟಿ ಸೇರಿದಂತೆ ಪ್ರದೇಶದ ಏಳು ಜಿಲ್ಲೆಗಳ ಮಹಾನಗರ ಪಾಲಿಕೆ, ನಗರಸಭೆ, ಕೃಷಿ, ಆರೋಗ್ಯ, ತೋಟಗಾರಿಕೆ, ಕೈಗಾರಿಕೆ, ಪ್ರವಾಸೋದ್ಯಮ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಹೀಗೆ ಪ್ರಮುಖ ಇಲಾಖೆಗಳ ಅಧಿಕಾರಿಗಳಿದ್ದರು. ಕೆ.ಕೆ.ಆರ್.ಡಿ.ಬಿ. ಉಪ ಕಾರ್ಯದರ್ಶಿ ಸುರೇಖಾ ಸರ್ವರನ್ನು ಸ್ವಾಗತಿಸಿದರು.






















