ವಿಶ್ವಕರ್ಮ ಪೂಜಾ ಮಹೋತ್ಸವ

ಬಾಗಲಕೋಟೆ,ಸೆ20: ಕಮ್ಮಾರ, ಬಡಿಗ, ಕಂಚುಗಾರ, ಶಿಲ್ಪಿ, ಅಕ್ಕಸಾಲಿ ಈ ಐದು ವೃತ್ತಿಗಳು ಕ್ರಿಯೆ, ಜ್ಞಾನ, ಈ ಐದು ಕೌಶಲ್ಯಗಳು ಸಂಯೋಜಿತ ಜ್ಞಾನದ ಫಲಿತಗಳು. ಪಂಚ ಕಸುಬುಗಳು ಕೇವಲ ಕೆಲಸಗಳೂ ಅಲ್ಲ, ಸೇವೆಗಳೂ ಅಲ್ಲ. ಅವು ಜ್ಞಾನ, ವಿಜ್ಞಾನ, ತಂತ್ರಜ್ಞಾನಗಳ ತಾಯಿ. ಮನುಷ್ಯ ನಾಗರೀಕತೆಯ ಬೆಳವಣಿಗೆಯಲ್ಲಿ ಪಂಚಾಳ ವೃತ್ತಿಗಳ ಪಾಲು ಬಹುದೊಡ್ಡದಾಗಿದ್ದು ವಿಶ್ವಕರ್ಮರು ಜ್ಞಾನ ವಿಜ್ಞಾನ ತಂತ್ರಜ್ಞಾನದ ಹರಿಕಾರರು ಎಂದು ಮುರನಾಳದ ಮಳೆರಾಜೇಂದ್ರಸ್ವಾಮಿ ಮಠದ ನವೀನಮಹಾಸ್ವಾಮಿಗಳು ಹೇಳಿದರು.


ಅವರು ಮುರನಾಳ ಪುನರವಸತಿ ಕೇಂದ್ರದಲ್ಲಿ ವಿಶ್ವಕರ್ಮ ಸಮಾಜ ಕ್ಷೇಮಾಭಿವೃದ್ಧಿ ಸಂಘದಿಂದ ಹಮ್ಮಿಕೊಂಡ ವಿಶ್ವಕರ್ಮ ಪೂಜಾ ಮಹೋತ್ವವ ಹಾಗೂ ಧಾರ್ಮಿಕ ಸಭೆಯ ದಿವ್ಯಸಾನಿಧ್ಯವನ್ನು ವಹಿಸಿ ಮಾತನಾಡಿದ ಅವರು ವಿಷಯ ಜ್ಞಾನವೆಂದರೆ, ಭೌತಿಕ ತಿಳುವಳಿಕೆಯನ್ನು ಸಾಮಾಜಿಕ ವಿವೇಕವನ್ನಾಗಿ ಪರಿವರ್ತಿಸುವುದು. ಉಪಕರಣ ಜ್ಞಾನವೆಂದರೆ ಗುಣ ಮತ್ತು ಸ್ವಭಾವ ಭೇದವಿಲ್ಲದೆ ವಸ್ತುವಿನಲ್ಲಿನ ವಿಷಯವನ್ನು ಅಥವಾ ಆಕೃತಿಯನ್ನು ಉಪಕರಣಗಳ ಮೂಲಕ ಅನಾವರಣ ಮಾಡಿ ಲೋಕ ಬಳಕೆಗೆ ಸಾಧ್ಯವಾಗಿಸುವುದು. ಸಾಂಸ್ಕøತಿಕ ದರ್ಶನವನ್ನಾಗಿಸುವುದು. ಈ ಅರ್ಥದಲ್ಲಿ ಜಗತ್ತಿನ ಚೇತನ ಅಚೇತನಗಳಲ್ಲಿ ಅಸಾಧಾರಣ ಚೈತನ್ಯ ತುಂಬಿ ಮಾನವ ಕುಲದ ಸೌಂದರ್ಯ ಹಾಗೂ ಸ್ಪಾಸ್ಥ್ಯ ಬದುಕಿಗೆ ಕಾರಣವಾಗುತ್ತ ಬಂದವರೇ ವಿಶ್ವಕರ್ಮರಾಗಿದ್ದಾರೆ. ವಿಶ್ವಕರ್ಮ ಎನ್ನುವುದೇ ಜ್ಞಾನವೆಂಬ ಒಳಗಣ್ಣಿನಿಂದ ತನ್ನನ್ನು ತಾನು ಬೆಳಗಿಕೊಂಡು ತನ್ನೆದುರಿನ ಲೋಕವನ್ನು ಬೆಳಗಿ ಸಂಸ್ಕರಿಸುವ ಹಾಗೂ ಸುಂದರೀಕರಿಸುವ ತತ್ತ್ವವಾಗಿದೆ. ಎಂದರು.


ಇನ್ನೋರ್ವ ಶ್ರೀಗಳಾದ ಮೌನೇಶಸ್ವಾಮಿಗಳು ಮಾತನಾಡಿ ವಿಶ್ವಕರ್ಮನು. ತನ್ನ ಸಂಕಲ್ಪ ಮಾತ್ರದಿಂದಲೇ ಸಕಲವನ್ನು ಸೃಷ್ಟಿಸಿದವನು. ಜಗತ್ತಿನ ಜನರೆಲ್ಲರ ಹಿತಕ್ಕಾಗಿ ಅಗ್ನಿಷÉ್ಟೂೀಮಾದಿ ಯಾಗಗಳನ್ನು, ಎಲ್ಲಾ ವರ್ಣಗಳ ಪ್ರಾಣಿಗಳ ಸ್ಥಿತಿ ಕಾರಣಕ್ಕಾಗಿ ಶಿಲೆ, ಲೋಹ, ಕಾಷ್ಠ, ಸ್ವರ್ಣ ಮೊದಲಾದ ಪ್ರತಿಮಾ ಪಂಚಶಿಲ್ಪಗಳನ್ನು ನಿರ್ಮಿಸಿದವನು. ವಿವಾಹಾದಿ ಯಜ್ಞಗಳಲ್ಲಿ ತೊಡಗುವವನೂ, ಗೃಹಾರಾಮಗಳನ್ನು ನಿರ್ಮಿಸುವವನೂ, ವೇದಾಧ್ಯಯನ ಪಾರಾಯಣನೂ, 64 ಕಲೆಗಳಲ್ಲಿ ಪರಿಣಿತನೂ, ವಾಸ್ತುವಿದ್ಯಾ ಕೋವಿದನೂ, ಧರ್ಮನಿಷ್ಠನೂ, ಅಸಿಕರ್ಮ, ಲಿಪಿಕರ್ಮ, ಕೃಷಿಕರ್ಮ, ಶಾಸ್ತ್ರಜೀವನ, ವಾಣಿಜ್ಯಕರ್ಮಗಳೆಂಬ ಷಟ್ಕರ್ಮಗಳಲ್ಲಿ ನಿರತನಾದವನೂ, ಕರ್ಮವನ್ನೇ ಯೋಗ ಮಾಡಿಕೊಂಡವನೂ, ಜ್ಞಾನ ಮತ್ತು ಕರ್ಮಮಾರ್ಗಗಳನ್ನು ಸಮನ್ವಯ ಮಾಡಿ ಜಗತ್ತನ್ನು ಸಮಚಿತ್ತದಿಂದ ನಡೆಸುವವನೇ ವಿಶ್ವಕರ್ಮ ಪರಮಾತ್ಮನಾಗಿದ್ದಾನೆ ಎಂದರು.


ಉಪನ್ಯಾಸ ನೀಡಿದ ಸಂಶೋಧನಾ ಸಾಹಿತಿಗಳಾದ ಡಾ. ಚಂದ್ರಶೇಖರ ಕಾಳನ್ನವರ ಮಾತನಾಡಿದರು.


ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ಸಮಾಜದ ಹಿರಿಯರಾದ ಶಂಕ್ರಪ್ಪ ಬಡಿಗೇರ ವಹಿಸಿದ್ದರು,ವೇದಿಕೆ ಮೇಲೆ ಗ್ರಾಮದ ಹಿರಿಯರಾದ ಹುಚ್ಚಪ್ಪ ಶಿರೂರ, ರಾಮಣ್ಣ ಗಣಿ, ವಿಶ್ವಕರ್ಮ ಸಮಾಜ ಕ್ಷೇಮಾಭಿವೃದ್ಧಿ ಸಂಘದ ಅದ್ಯಕ್ಷ ಅಶೋಕ ಪತ್ತಾರ, ಉಪಾಧ್ಯಕ್ಷ ಚಂದ್ರಶೇಖರ ಪತ್ತಾರ ಶಿಲ್ಪಿ. ರುಕ್ಮಣ್ಣ ಪತ್ತಾರ, ಗಂಗಾಧರ ಬಡಿಗೇರ, ನಾರಾಯಣ ಬಡಿಗೇರ, ಈರಣ್ಣ ಬಡಿಗೇರ, ಅಪ್ಪಣ್ಣ ಬಡಿಗೇರ, ಮೌನೇಶ ಬಡಿಗೇರ, ಹನಮಂತ ಪತ್ತಾರ, ಮಂಜು ಜಿ ಪತ್ತಾರ, ಶಿವು ಬಡಿಗೇರ, ಮುತ್ತು ಪತ್ತಾರ. ಸುನೀಲ ಬಡಿಗೇರ, ಗ್ರಾಮದ ಹಿರಿಯರಾದ ಶಿವಣ್ಣ ಬೂದಿಹಾಳ, ಅಶೋಕ ಬಾಳಿಕಾಯಿ, ರಂಗಪ್ಪ ರೊಳ್ಳಿ, ಮಂಜು ಬಾರಕೇರ, ಶ್ರಿಶೈಲ ಬಾಲಿಕಾಯಿ, ಸಿದ್ದಪ್ಪ ಮುಚಖಂಡಿ ಸೇರಿದಂತೆ ಅನೇಕರು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಸಾಧನೆಗೈದ ಸಾಧಕರಿಗೆ ಹಾಗೂ ಧಾನಿಗಳಿಗೆ ಸನ್ಮಾನಿಸಿ ಗೌರವಿಸಲಾಯಿತು. ಸಂಗಮೇಶ ಬ್ಯಾಳಿ ಕಾರ್ಯಕ್ರಮ ನಿರೂಪಿಸಿದರು.