ವಿಶ್ವಕರ್ಮ ಜಯಂತಿ ಆಚರಣೆ

ನವಲಗುಂದ,ಅ6: ಪ್ರತಿನಿತ್ಯ ಜನರು ಬಳಸುವ ಕರಕುಶಲ ಸಾಮಗ್ರಿಗಳಿಂದ ಹಿಡಿದು ದೇವಾಲಯದ ವಿಗ್ರಹಗಳು, ಸ್ಮಾರಕಗಳು ಹಾಗೂ ಗೃಹೋಪಯೋಗಿ ವಸ್ತುಗಳವರೆಗೂ ಎಲ್ಲೆಡೆ ವಿಶ್ವಕರ್ಮರ ಕಲೆಯ ಜೀವಂತ ಅಸ್ತಿತ್ವ ಕಾಣಬಹುದು. ಇದು ವಿಶ್ವಕರ್ಮ ಸಮುದಾಯದ ಶ್ರದ್ಧೆ, ನೈಪುಣ್ಯ ಮತ್ತು ಸಾಂಸ್ಕೃತಿಕ ಬದ್ಧತೆಯ ಸಾಕ್ಷಿಯಾಗಿದೆ ಎಂದು ನವಲಗುಂದ ಶಾಸಕ ಎನ್.ಎಚ್. ಕೋನರೆಡ್ಡಿ ಹೇಳಿದರು.

ಅವರು ಪಟ್ಟಣದ ಶ್ರೀ ನಾಗಲಿಂಗ ಭವನದಲ್ಲಿ ನಡೆದ ವಿಶ್ವಕರ್ಮ ಜಯಂತಿ ಕಾರ್ಯಕ್ರಮ ಉದ್ದೇಶಿ ಮಾತನಾಡುತ್ತಿದ್ದರು.

ಮಾಜಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಮಾತನಾಡಿ “ಹೊಯ್ಸಳರ ಕಾಲದಲ್ಲಿ ಅಮರ ಶಿಲ್ಪಿ ಜಕಣಾಚಾರಿ ನಿರ್ಮಿಸಿದ ಅದ್ಭುತ ದೇವಾಲಯಗಳು ಇಂದು ಯುನೆಸ್ಕೊ ಪಾರಂಪರಿಕ ತಾಣಗಳಾಗಿ ಗುರುತಿಸಿಕೊಂಡಿವೆ. ಅದೇ ರೀತಿಯಲ್ಲಿ ಅಯೋಧ್ಯೆಯಲ್ಲಿ ನಿರ್ಮಿಸಲಾಗಿರುವ ಶ್ರೀರಾಮನ ಭವ್ಯ ಮೂರ್ತಿಯ ಶಿಲ್ಪಕೌಶಲ್ಯದಲ್ಲಿಯೂ ವಿಶ್ವಕರ್ಮ ಪರಂಪರೆಯ ಸ್ಫೂರ್ತಿ ಅಡಕವಾಗಿದೆ. ಆದರೆ ಶಿಕ್ಷಣಕ್ಕೆ ಹೆಚ್ಚಿ ಒತ್ತು ನೀಡಿ ನಿಮ್ಮ ವೃತ್ತಿಯಲ್ಲಿ ಆಧುನಿಕಯನ್ನು ಮೈಗೊಡಿಸಿ ಆರ್ಥಿಕರಾಗಿ ಸಬಲರಾಗಿರಿ ಎಂದರು.

ಶ್ರೀ ಕೆಂಪೆಗೌಡ ಪ್ರಶಸ್ತಿ ಪುರಸ್ಕೃತರಾದ ಈಶ್ವರ ಆಚಾರ್ ಹೋಸಕೊಟಿ ಮಾತನಾಡಿ ದೇಶದ ಬೆನ್ನಲಬು ರೈತ ಹಾಗೂ ಕಾರ್ಮಿಕರಾದರೆ ಅವರಿಗೆ ಬೆನ್ನಲಬು ವಿಶ್ವಕರ್ಮರು. ನೀವು ಯಾವ ಪಕ್ಷದಲ್ಲಿರಿ ಅಲ್ಲಯೆ ನಿಷ್ಠೆಯಿಂದ ರಾಜಕೀಯ ಸ್ಥಾನಮಾನಗಳನ್ನು ಪಡೆದು ಮುಖ್ಯವಾಹಿ ಕಡೆಗೆ ಗಮನ ನೀಡಿ. ಕಾರ್ಮಿಕ ಸೌಲಭ್ಯಗಳನ್ನು ಪಡೆಯಿರಿ ಎಂದರು.

ನಾಗಲಿಂಗ ಸ್ವಾಮಿ ಮಠದ ವಿರೇಂದ್ರ ಮಹಾಸ್ವಾಮೀಗಳು ಹಾಗೂ ಚಿಕ್ಕುಂಬಿ ನಾಗಲಿಂಗ ಸ್ವಾಮಿ ಮಠದ ಅಭಿನವ ನಾಗಲಿಂಗ ಮಹಾಸ್ವಾಮಿಗಳು ಸಾನಿಧ್ಯವಹಿಸಿದ್ದರು. ಗಂಗಪ್ಪ ಕಮ್ಮಾರ ಅಧ್ಯಕ್ಷತೆ ವಹಿಸಿದ್ದರು.

ಅತಿಥಿಗಳಾಗಿ ಶಿರಸಂಗಿ ವಿಶ್ವಕರ್ಮ ಸಮಾಜ ವಿಕಾಸ ಸಂಸ್ಥೆಯ ಅಧ್ಯಕ್ಷ ಪೆÇ್ರೀ ಪಿ ಬಿ ಬಡಿಗೇರ, ಸಾಹಿತಿ ಭಾರತಿ ಬಡಿಗೇರ, ನವಲಗುಂದ ವಿಶ್ವಕರ್ಮ ಸಮಾಜದ ಅಧ್ಯಕ್ಷ ನಿಂಗಪ್ಪ ಬಡಿಗೇರ, ಶಿವಪ್ಪ ಪತ್ತಾರ, ಶಾಂತವ್ವ ಹವಳಕೋಡ, ನಿವೃತ್ತ ಜಿಲ್ಲಾ ಶಿಕ್ಷಣಾಧಿಕಾರಿ ಬಿ ಎಸ್ ಮಾಯಾಚಾರಿ ವೇದಿಕೆ ಮೇಲಿದ್ದರು. ರವಿ ವಿಶ್ವಜ್ಞ ಸ್ವಾಗತಿಸಿದರು. ಎಲ್. ಎಚ್. ಕಮ್ಮಾರ ನಿರೂಪಿಸಿದರು. ರೂಪಾ ಪತ್ತಾರ ವಂದಿಸಿದರು.

ಎಸ್ ಎಸ್ ಎಲ್ ಸಿ ಹಾಗೂ ಪಿ ಯು ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳನ್ನು ಪಡೆದ ವಿದ್ಯಾರ್ಥಿಗಳನ್ನು ಹಾಗೂ ಸಮಾಜದ ಹಿರಿಯರನ್ನು ಸನ್ಮಾನಿಸಲಾಯಿತು. ಬೆಳಿಗ್ಗೆ ಶೆಟ್ಟರ ಕೇರಿಯಿಂದ ನಗರದ ಪ್ರಮುಖ ಅದ್ದೂರಿ ಮೆರವಣಿಗೆ ಮಾಡಲಾಯಿತು.