ವೀಸಾ ನಿಯಮ ಮತ್ತಷ್ಟು ಬಿಗಿ

ನವದೆಹಲಿ,ಸೆ.೮- ಎರಡನೇ ಬಾರಿಗೆ ಅಮೇರಿಕಾ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಅಧಿಕಾರ ವಹಿಸಿಕೊಂಡ ನಂತರ ವೀಸಾ ನಿಯಮಗಳನ್ನು ಮತ್ತಷ್ಟು ಬಿಗಿಗೊಳಿಸಿದ್ದಾರೆ. ಹೀಗಾಗಿ ಅಮೆರಿಕಾಕ್ಕೆ ತೆರಳಬೇಕು ಎನ್ನುವ ಮಂದಿ ಇದೀಗ ಮತ್ತಷ್ಟು ಸಮಯ ಕಾಯುವುದು ಮತ್ತು ಹಲವು ಪರೀಕ್ಷೆ ಎದುರಿಸಬೇಕಾಗಿದೆ.

ಅಮೆರಿಕದ ವಲಸೆರಹಿತ ವೀಸಾಗಳಿಗೆ ಅರ್ಜಿದಾರರು ಈಗ ತಮ್ಮ ಪೌರತ್ವ ಅಥವಾ ಕಾನೂನುಬದ್ಧ ನಿವಾಸದ ದೇಶದಲ್ಲಿ ಸಂದರ್ಶನ ನೇಮಕಾತಿ ನಿಗದಿಪಡಿಸಲು ಅವಕಾಶ ನಿರ್ಬಂಧಿಸಿದ್ದು . ಈಗ ವೀಸಾಕ್ಕೆ ಅರ್ಜಿ ಸಲ್ಲಿಸುವ ನಿಯಮ ಮತ್ತಷ್ಟು ಬಿಗಿಗೊಳಿಸಲಾಗಿದೆ.

ಅಲ್ಪಾವಧಿಯಲ್ಲಿ ಅಮೆರಿಕಕ್ಕೆ ಪ್ರಯಾಣಿಸಬೇಕಾದ ಭಾರತೀಯರು ಇನ್ನು ಮುಂದೆ ವಿದೇಶದಲ್ಲಿ ವ್ಯವಹಾರಕ್ಕೆ ಸಂಬಂಧಿಸಿದ ವೀಸಾ, ಬಿ೧ ಹಾಗು ಪ್ರವಾಸಿ ವೀಸಾ ಅಪಾಯಿಂಟ್‌ಮೆಂಟ್ ದಿನಾಂಕಕಾಯ್ದಿರಿಸಲು ಸಾಧ್ಯವಾಗುವುದಿಲ್ಲ ಎನ್ನಲಾಗಿದೆ

ಕೋವಿಡ್ -೧೯ ಸಮಯದಲ್ಲಿ ತಾಯ್ನಾಡಿಗೆ ಮರಳಲು ಮೂರು ವರ್ಷಗಳಷ್ಟು ಕಾಯುವ ಸಮಯ ಹೆಚ್ಚಾಗಿದ್ದಾಗ ಅರ್ಜಿಗಳ ಬೃಹತ್ ಬಾಕಿ ಅರ್ಜಿಗಳು ಹಾಗೆ ಉಳಿದಿವೆ.

“ತಕ್ಷಣದಿಂದಲೇ ಜಾರಿಗೆ ಬರುವಂತೆ, ವಿದೇಶಾಂಗ ಇಲಾಖೆಯು ವಲಸೆರಹಿತ ವೀಸಾ ಅರ್ಜಿದಾರರಿಗೆ ರಾಷ್ಟ್ರೀಯತೆ ಅಥವಾ ನಿವಾಸದ ದೇಶದಲ್ಲಿರುವ ಅಮೆರಿಕಾದ ರಾಯಭಾರ ಕಚೇರಿ ಅಥವಾ ದೂತಾವಾಸದಲ್ಲಿ ವೀಸಾ ಸಂದರ್ಶನಕ್ಕೆ ಸಮಯ ನಿಗದಿ ಪಡಿಸಿಕೊಳ್ಳಬೇಕು ಎಂದು ಅಮೆರಿಕಾ ಹೇಳಿದೆ.

ರಾಜ್ಯ ಇಲಾಖೆಯ ವೆಬ್‌ಸೈಟ್ ಪ್ರಕಾರ, ಭಾರತದಲ್ಲಿ ಬಿ೧/ಬಿ೨ ಸಂದರ್ಶನಕ್ಕಾಗಿ ಕಾಯುವ ಸಮಯ ಪ್ರಸ್ತುತ ಹೈದರಾಬಾದ್ ಮತ್ತು ಮುಂಬೈನಲ್ಲಿ ಮೂರುವರೆ ತಿಂಗಳು ಕಾಯಬೇಕಾಗಿದೆ. ದೆಹಲಿಯಲ್ಲಿ ನಾಲ್ಕೂವರೆ ತಿಂಗಳು, ಕೋಲ್ಕತ್ತಾದಲ್ಲಿ ಐದು ತಿಂಗಳುಗಳು ಮತ್ತು ಚೆನ್ನೈನಲ್ಲಿ ಒಂಬತ್ತು ತಿಂಗಳು ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ

ಕಳೆದ ವಾರದಿಂದ ಅನ್ವಯವಾಗುವಂತೆ ೧೪ ವರ್ಷದೊಳಗಿನ ಮತ್ತು ೭೯ ವರ್ಷಕ್ಕಿಂತ ಮೇಲ್ಪಟ್ಟ ಅರ್ಜಿದಾರರು ಸೇರಿದಂತೆ ಎಲ್ಲಾ ವಲಸೆಯೇತರ ವೀಸಾ ಅರ್ಜಿದಾರರಿಗೆ ಕೆಲವು ವಿನಾಯಿತಿಗಳನ್ನು ಹೊರತುಪಡಿಸಿ, “ಸಾಮಾನ್ಯವಾಗಿ ಕಾನ್ಸುಲರ್ ಅಧಿಕಾರಿಯೊಂದಿಗೆ ವೈಯಕ್ತಿಕ ಸಂದರ್ಶನ ಅಗತ್ಯವಾಗಿದೆ ಎಂದು ತಿಳಿಸಲಾಗಿದೆ

“ಹಿಂದಿನ ವೀಸಾ ಅವಧಿ ಮುಗಿದ ೧೨ ತಿಂಗಳೊಳಗೆ ಪೂರ್ಣ ಮಾನ್ಯತೆ ಬಿ-೧, ಬಿ-೨ ವೀಸಾ ನವೀಕರಿಸುವ ಅರ್ಜಿದಾರರು ಮತ್ತು ಹಿಂದಿನ ವೀಸಾ ನೀಡುವ ಸಮಯದಲ್ಲಿ ಕನಿಷ್ಠ ೧೮ ವರ್ಷ ವಯಸ್ಸಿನವರಾಗಿಬೇಕು ಎಂದು ಹೇಳಲಾಗಿದೆ.