ಇಸ್ಲಮಾಬಾದ್,ಅ,೧೪:ಪಾಕಿಸ್ತಾನದಲ್ಲಿ ನಡೆದ ಹಿಂಸಾತ್ಮಕ ಪ್ರತಿಭಟನೆಗಳ ಸಂದರ್ಭದಲ್ಲಿ ತೆಹ್ರೀಕ್-ಎ-ಲಬ್ಬಾಯಿಕ್ ಪಾಕಿಸ್ತಾನ – ಟಿಎಲ್‌ಪಿ ನಡೆಸಿದ ಪ್ರತಿಭಟನೆ ಮತ್ತು ಹಿಂಸಾಚಾರದಲ್ಲಿ ೨೫೦ ಪ್ರತಿಭಟನಾಕಾರರು ಮತ್ತು ೪೮ ಪೊಲೀಸ್ ಅಧಿಕಾರಿಗಳು ಸಾವನ್ನಪ್ಪಿರುವ ಘಟನೆ ನಡೆದಿದೆ. ಜೊತೆಗೆ ನೂರಾರು ಮಂದಿ ಗಾಯಗೊಂಡಿದ್ದಾರೆ.
ಗಾಜಾ ಶಾಂತಿ ಯೋಜನೆಯ ವಿರುದ್ಧ ತೀವ್ರವಾದ ಹೋರಾಟ ಆರಂಭಿಸಿರುವ ಪಕ್ಷವಾದ ತೆಹ್ರೀಕ್-ಎ-ಲಬ್ಬಾಯಿಕ್ ಪಾಕಿಸ್ತಾನ ನಡೆಸಿದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿ ಅಪಾರ ಪ್ರಮಾಣದ ಸಾವು ನೋವು ಸಂಭವಿಸಿದೆ.
ಪ್ರತಿಭಟನೆಯ ವೇಲೆ ಟಿಎಲ್‌ಪಿ ಮುಖ್ಯಸ್ಥ ಸಾದಿಕ್ ರಿಜ್ವಿ ಮೇಲೆ ಮೂರು ಬಾರಿ ಗುಂಡು ಹಾರಿಸಲಾಗಿದೆ. ಮೌಲಾನಾ ಸಾದಿಕ್ ರಿಜ್ವಿ ಸಹೋದರ ಅನಸ್ ರಿಜ್ವಿ ಕೂಡ ಘರ್ಷಣೆಯ ಸಮಯದಲ್ಲಿ ಗಾಯಗೊಂಡಿದ್ದಾರೆ ಎಂದು ಹೇಳಲಾಗಿದೆ. ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ ಹಿನ್ನೆಲೆಯಲ್ಲಿ ರಣರಂಗದಂತಾಗಿದೆ.
ಹಿಂಸಾಚಾರದಲ್ಲಿ ೨೫೦ ಟಿಎಲ್‌ಪಿ ಪ್ರತಿಭಟನಾಕಾರರು ಸಾವನ್ನಪ್ಪಿದ್ದಾರೆ, ಆದರೆ ಪ್ರತಿಭಟನಾಕಾರರ ದಾಳಿಯಲ್ಲಿ ೪೮ ಪೊಲೀಸ್ ಅಧಿಕಾರಿಗಳು ಸಾವನ್ನಪ್ಪಿದ್ದಾರೆ. ರಕ್ತಪಾತದ ಪ್ರಮಾಣದಿಂದಾಗಿ ಈ ಘಟನೆ ಅಂತರರಾಷ್ಟ್ರೀಯ ಗಮನ ಸೆಳೆದಿದೆ.
ಗಾಜಾ ಶಾಂತಿ ಒಪ್ಪಂದ ವಿರೋಧಿಸಿ ಟಿಎಲ್‌ಪಿ ಇಸ್ಲಾಮಾಬಾದ್‌ನಲ್ಲಿರುವ ಅಮೇರಿಕಾ ರಾಯಭಾರ ಕಚೇರಿಯ ಹೊರಗೆ ಪ್ರತಿಭಟನೆ ನಡೆಸುವುದಾಗಿ ಘೋಷಿಸಿದ ನಂತರ ಅಶಾಂತಿ ಪ್ರಾರಂಭವಾಗಿದ್ದು ಅಪಾರ ಪ್ರಮಾಣದ ಸಾವು ನೋವಿಗೆ ಕಾರಣವಾಗಿದೆ.
ಸರ್ಕಾರ ಕಂಟೇನರ್‌ಗಳನ್ನು ಬಳಸಿ ಪ್ರತಿಭಟನಾಕಾರರನ್ನು ಹತ್ತಿಕ್ಕುವ ಕೆಲಸ ಮಾಡಿದರೂ ಪ್ರತಿಭಟನಾಕಾರರು ಹಿಂಸಾಚಾರದ ಮಾರ್ಗ ಆಯ್ಕೆ ಮಾಡಿಕೊಂಡ ಹಿನ್ನೆಲೆಯಲ್ಲಿ ಈ ಅವಘಡ ಸಂಭವಿಸಿದೆ ಎಂದು ಹೇಳಲಾಗಿದೆ.
ಪ್ರತಿಭಟನೆಯಿಂದಾಗಿ ಲಾಹೋರ್-ಇಸ್ಲಾಮಾಬಾದ್ ಮಾರ್ಗ ಸಂಪೂರ್ಣವಾಗಿ ಬಂದ್ ಮಾಡಲಾಗಿದೆ.ಪ್ರಧಾನಿ ಶೆಹಬಾಜ್ ಷರೀಫ್ ಆಡಳಿತ ರೇಂಜರ್ಸ್ ಮತ್ತು ಪಂಜಾಬ್ ಪೊಲೀಸರಿಗೆ ಯಾವುದೇ ಬೆಲೆ ತೆತ್ತಾದರೂ ಹೆದ್ದಾರಿಯನ್ನು ತೆರವುಗೊಳಿಸುವಂತೆ ಆದೇಶಿಸಿದ್ದಾರೆ.
ಕಾನೂನು ಜಾರಿ ಸಂಸ್ಥೆಗಳು ಪ್ರತಿಭಟನಾಕಾರರನ್ನು ಹತ್ತಿಕ್ಕಲು ಇನ್ನಿಲ್ಲದ ಪ್ರಯತ್ನ ಮತ್ತು ಹರ ಸಾಹಸ ನಡೆಸಿದ್ಧಾರೆ ಪಾಕಿಸ್ತಾನ ರೇಂಜರ್ಸ್ ಪ್ರತಿಭಟನಾಕಾರರು ಗುಂಡು ಹಾರಿಸಿ ಹಿನ್ನೆಲೆಯಲ್ಲಿ ಈ ಸಾವು ನೋವು ಸಂಭವಿಸಿದೆ.
ಪೊಲೀಸರು ಮತ್ತು ಮಿಲಿಟರಿ ಪಡೆಗಳು ಪ್ರತಿಭಟನಾಕಾರರೊಂದಿಗೆ ಭಾರಿ ಪ್ರಮಾಣದಲ್ಲಿ ವಾಗ್ದಾದ ನಡೆಸಲಾಗಿದೆ, ಇದರಿಂದ ಪರಿಣಾಮ ಸಾವು ನೋವು ಹೆಚ್ಚಾಗಿದೆ ಎಂದು ಹೇಳಲಾಗಿದೆ.
ಪಾಕ್
- ಇಸ್ಲಾಮಾಬಾದ್‌ನಲ್ಲಿ ಭುಗಿಲೆದ್ದ ಹಿಂಸಾಚಾರ
- ೨೫೦ ಪ್ರತಿಭಟನಾಕಾರರು ಮತ್ತು ೪೮ ಪೊಲೀಸ್ ಅಧಿಕಾರಿಗಳ ಸಾವು
- ಗಾಜಾ ಶಾಂತಿ ಒಪ್ಪಂದ ವಿರೋಧಿಸಿ ನಡೆಸಿದ ಪ್ರತಿಭಟನೆ ವೇಳೆ ಹಿಂಸಾಚಾರ
- ಇಸ್ಲಮಾಬಾದ್‌ನಲ್ಲಿರುವ ಅಮೇರಿಕಾ ರಾಯಭಾರ ಕಛೇರಿ ಮುಂದೆ ಪ್ರತಿಭಟನೆ
- ನೂರಾರು ಮಂದಿ ಗಾಯ, ಆಸ್ಪತ್ರೆಗೆ ದಾಖಲು
- ಇಸ್ಲಮಾಬಾದ್ ಪ್ರತಿಭಟನೆಯಿಂದ ರಣರಂಗವಾಗಿ ಮಾರ್ಪಾಟು
- ಮುಚ್ಚರಿಕೆ ಕ್ರಮವಾಗಿ ವ್ಯಾಪಕ ಬಿಗಿ ಭದ್ರತೆ


























