
ಯಡ್ರಾಮಿ:ಏ.9:ಯತ್ನಾಳ ಗ್ರಾಮದಲ್ಲಿ ಸ್ಮಶಾನ ಭೂಮಿ ಇಲ್ಲದ ಕಾರಣ ಸ್ಮಶಾನ ಭೋಮಿಗಾಗಿ ಶವ ಇಟ್ಟು ಗ್ರಾಮಸ್ಥರಿಂದ ಪ್ರತಿಭಟನೆ ಮಾಡಿದ ಘಟನೆ ನಡೆಯಿತ್ತು.
ಬುಧವಾರ ಯತ್ನಾಳ ಗ್ರಾಮದಲ್ಲಿ ಚಂದಪ್ಪ ತಂದೆ ಸಂಗಪ್ಪ ಬಡಗೇರ ವಯಸ್ಸು 53 ವರ್ಷದ ವ್ಯಕ್ತಿ ಮೃತಪಟ್ಟಿದ್ದ.ಗ್ರಾಮದ ಪಕ್ಕದ ಜಮೀನಿನಲ್ಲಿ ಅನಾದಿಕಾಲದಿಂದ ಶವ ಸಂಸ್ಕಾರ ಮಾಡಲಾಗುತ್ತಿತ್ತು.
ಶವ ಸಂಸ್ಕಾರ ಮಾಡಲು ಗ್ರಾಮಸ್ಥರು ಮುಂದಾಗ ಜಮೀನಿನ ಮಾಲಿಕ ನಿರಾಕರಿಸುತ್ತಾರೆ. ಅನಾದಿಕಾಲದಿಂದ ಶವ ಸಂಸ್ಕಾರ ಈ ಜಮೀನಲ್ಲಿ ಮಾಡಲಾಗಿದೆ ಇಗ ಈ ರೀತಿಯಾಗಿ ಹೇಳಿದರೆ ಹೇಗೆ ಎಂದು ಶವ ಸಂಸ್ಕಾರ ಇಲ್ಲೇ ಮಾಡುವುದಾಗಿ ಪಟ್ಟು ಹಿಡಿದರು.
ಕಂಧಾಯ ಅಧಿಕಾರಿಗಳು ಬಂದು ಈ ಯತ್ನಾಳ ಗ್ರಾಮದಲ್ಲಿ ಸರ್ಕಾರಿ ಜಮೀನು ಇಲ್ಲಾ ಯಾರಾದರು ದಾನಿಗಳು ಇದ್ದರೆ ಮಾಡಿಸಿಕೊಡಬಹುದು ಎಂದು ಭರವಸೆ ನೀಡಿದರು.
ಊರಿನ ಪ್ರಮುಖರು ನಮ್ಮ ಜಮೀನಿನಲ್ಲಿ ಮಾಡಿ ನಂತರ ನೋಡಿಕೊಳ್ಳುವೆ ಎಂದು ಹೇಳಿದಾಗ ಬೇರೆಯವರ ಜಮೀನಿನಲ್ಲಿ ಶವಸಂಸ್ಕಾರ ಮಾಡಲಾಯಿತ್ತು.
ಯತ್ನಾಳ ಗ್ರಾಮದವರು ಹಲವಾರು ವರ್ಷಗಳಿಂದ ಹಲವಾರು ಸಲ ಸ್ಮಶಾನ ಭೂಮಿಗಾಗಿ ತಹಸೀಲ್ದಾರ ಕಚೇರಿಗೆ ಮನವಿ ಮಾಡಿಕೊಂಡರು ಯಾವುದೇ ರೀತಿಯಿಂದ ಸ್ಪಂದನೆ ಮಾಡಿಲ್ಲ.
ಮುಂದಿನ ದಿನಮಾನದಲ್ಲಿ ಹೀಗೆ ಮುಂದುವರಿದರೆ ಯಡ್ರಾಮಿ ತಾಲೂಕು ಪಟ್ಟಣದಲ್ಲಿ ಶವ ಇಟ್ಟು ಪ್ರತಿಭಟನೆ ಮಾಡಲಾಗುವುದು ಯತ್ನಾಳ ಗ್ರಾಮದ ಜನತೆ ಆಕ್ರೋಷವ್ಯಕ್ತಪಡಿಸಿದ್ದಾರೆ.
ಈ ಸಂದರ್ಭದಲ್ಲಿ ಶರಣಗೌಡ ಪೆÇಲೀಸ್ ಪಾಟೀಲ,ಬಸವರಾಜಗೌಡ ಗೊಲ್ಲಾಳಪ್ಪ ಕೋಣಸಿರಸಗಿ,ಸ್ವಾಮಪ್ಪ ಬಡಗೇರ, ನಿಂಗಪ್ಪ ಮಾಂತಪ್ಪ,ಕಾಭಂಳೆ ಕೇಂಚಪ್ಪ ಪೂಜಾರಿ, ದೇವಾನಂದ ಶಿರಗುಂಡ,ಮಾಂತಗೌಡ ಸಂಗಪ್ಪ ನಗನ್ನೂರ,ಭೀಮನಗೌಡ ಶಿವಶರಣಪ್ಪ ಕುಡಲಿ, ಮಲ್ಲಿಕಾರ್ಜುನ ದೇಸಾಯಿ,ಶರಣಬಸಪ್ಪ ಯಮನಪ್ಪ ನಾಕ್ಕೊಡಿ,ಗೊಲ್ಲಾಳಪ್ಪ ಕರೇಪ್ಪ ಮೆಲಿನಮನಿ ಮಾಂತಪ್ಪ ಶರಣಪ್ಪ ದೊಡಮನಿ,ಈರಪ್ಪ ಸಂಗಪ್ಪ ಬಡಗೇರ,ನಾಗಪ್ಪ ಸ್ವಾಮಪ್ಪ ಬಡಗೇರ,ನಿಂಗಪ್ಪ ಮಾಂತಪ್ಪ ಕಾಭಂಳೆ ಇತರರು ಇದ್ದರು.
ಯತ್ನಾಳ ಗ್ರಾಮದಲ್ಲಿ ಸರ್ಕಾರಿ ಜಮೀನು ಲಭ್ಯವಿಲ್ಲದ ಕಾರಣ ಖಾಸಗಿ ಜಮೀನು ಖರಿದಿಸಿ ಗ್ರಾಮಸ್ಥರಿಗೆ ಸ್ಮಶಾನ ಭೂಮಿ ಒದಗಿಸಬೇಕಿದೆ. ಈ ಕುರಿತು ಮೇಲಧಿಕಾರಿಗಳಿಗೆ ಪ್ರಸ್ತಾವನೆ ಕೂಡಾ ಸಲ್ಲಿಸಲಾಗಿದೆ. ಆದರೆ ಸರ್ಕಾರ ನಿಗದಿಗೊಳಿಸಿದ ದರಕ್ಕೆ ಜಮೀನು ಮಾಲೀಕರು ಒಪ್ಪದ ಕಾರಣ ಪ್ರಕ್ರಿಯೆ ವಿಳಂಭವಾಗುತ್ತಿದೆ. ಆದಷ್ಟು ಬೇಗ ಪರಿಹಾರ ಒದಗಿಸಲಾಗುವುದು.
==ಯಲ್ಲಪ್ಪ ಸುಬೇದಾರ ತಹಸೀಲ್ದಾರ್ ಯಡ್ರಾಮಿ




















