Home ಜಿಲ್ಲೆ ಎಕಲಾರ ಗ್ರಾಪಂ ಕಚೇರಿ ಮುಂದೆ ಗ್ರಾಮಸ್ಥರ ಪ್ರತಿಭಟನೆ : ಸ್ಥಳಕ್ಕೆ ತಾಪಂ ಇಓ ಭೇಟಿ

ಎಕಲಾರ ಗ್ರಾಪಂ ಕಚೇರಿ ಮುಂದೆ ಗ್ರಾಮಸ್ಥರ ಪ್ರತಿಭಟನೆ : ಸ್ಥಳಕ್ಕೆ ತಾಪಂ ಇಓ ಭೇಟಿ

ಔರಾದ: ಫೆ.25:ಪಂಚಾಯತ ಅಭಿವೃದ್ಧಿ ಅಧಿಕಾರಿಗಳು ಸಮಯಕ್ಕೆ ಸರಿಯಾಗಿ ಕಚೇರಿಗೆ ಬರುವುದಿಲ್ಲ.ಸಾರ್ವಜನಿಕರ ಮನವಿಗಳಿಗೆ ಸ್ಪಂದನೆ ಮಾಡುವುದಿಲ್ಲವೆಂದು ಆರೋಪಿಸಿ ತಾಲೂಕಿನ ಕೊಳ್ಳುರ ಗ್ರಾಮಸ್ಥರು ಎಕಲಾರ ಗ್ರಾಪಂ ಕಚೇರಿಯ ಮುಂದೆ ಪ್ರತಿಭಟನೆ ನಡೆಸಿದರು.

ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸುವ ಅಧಿಕಾರಿಗಳು ಮನಸ್ಸಿಗೆ ಬಂದಂತೆ ಕಚೇರಿಗೆ ಬರುತ್ತಾರೆ, ಸಾರ್ವಜನಿಕರ ಸಂಪರ್ಕಕ್ಕೆ ಸಿಗುವುದಿಲ್ಲ ಬೆಳಿಗ್ಗೆ 9 ಗಂಟೆಯಿಂದ ಮಧ್ಯಾಹ್ನ ಒಂದು ಗಂಟೆ ಆದರು ಸಹ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಕಚೇರಿಗೆ ಬರುವುದಿಲ್ಲ, ದೂರವಾಣಿ ಕರೆ ಮಾಡಿದರು ಸಹ ಕರೆ ಸ್ವೀಕರಿಸುವುದಿಲ್ಲ, ಹೀಗಾದರೆ ಸಾರ್ವಜನಿಕ ಸಮಸ್ಯೆ ಯಾರಿಗೆ ಹೇಳಬೇಕು ಹಿಗಾಗಿ ಪಂಚಾಯತ ಕಚೇರಿಯ ಮುಂದೆ ಪ್ರತಿಭಟನೆ ಮಾಡಲಾಗಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ಗ್ರಾಮ ಪಂಚಾಯತ್ ಕಚೇರಿ ಎದುರಿಗೆ ಪ್ರತಿಭಟನೆ ನಡೆಯುತ್ತಿರುವ ಸುದ್ದಿ ಕೇಳಿದ ತಾಲೂಕು ಪಂಚಾಯತ್ ಕಾರ್ಯ ನಿರ್ವಹಣಾಧಿಕಾರಿ ಕಿರಣ ಪಾಟೀಲ ಹಾಗೂ ಸಹಾಯಕ ನಿರ್ದೇಶಕ ಶಿವಕುಮಾರ ಘಾಟೆ ಅವರು ಸ್ಥಳಕ್ಕೆ ಭೇಟಿ ನೀಡಿ ಪ್ರತಿಭಟನಾಕಾರರ ಸಮಸ್ಯೆ ಆಲಿಸಿದರು.

ಪಂಚಾಯತ ಅಭಿವೃದ್ದಿ ಅಧಿಕಾರಿಗಳು ಪಂಚಾಯತ ವ್ಯಾಪ್ತಿಯಲ್ಲಿ ಬರುವ ಯಾವಬ್ಬ ವ್ಯಕಿಯ ಫೆÇೀನ ಕರೆಯೂ ಸ್ವಿಕಾರ ಮಾಡೋದಿಲ್ಲಾ.ಇಬ್ಬರು ಮೂವರು ಜನರ ಕರೆಯನ್ನ ಮಾತ್ರ ಸ್ವಿಕಾರ ಮಾಡುತ್ತಾರೆ.ಅವರು ಪಂಚಾಯತ ಅಭಿವೃದ್ಧಿ ಅಧಿಕಾರಿಗಳಾ ಇಲ್ಲವೇ ಮೂವರು ಜನರ ಅಧಿಕಾರಿಗಳಾ ಎನ್ನುವಂತಹದ್ದು ನಮ್ಮಗೆ ತಿಳಿಯುತ್ತಿಲ್ಲವೆಂದು ತಾಪಂ ಇಓಗೆ ನರಸಪ್ಪ ಪ್ರಶ್ನೆ ಮಾಡಿದರು.

ಪಂಚಾಯತ ವ್ಯಾಪ್ತಿಯಲ್ಲಿನ ಪ್ರತಿಯೊಬ್ಬ ನಾಗರಿಕರ ಸೇವೆ ಮಾಡುವುದರ ಜೋತೆಗೆ ಸರ್ಕಾರದ ಯೋಜನೆಗಳನ್ನು ಜನರ ಮನೆ ಬಾಗಿಲಿಗೆ ಮುಟ್ಟಿಸುವಂತಹ ಕೆಲಸ ನಮ್ಮದಾಗಿದೆ ಎನ್ನುವುದನ್ನು ಅರಿತುಕೊಂಡು ಅಧಿಕಾರಿಗಳು ಕೆಲಸ ಮಾಡಲು ಮುಂದಾಗಬೇಕೆಂದು ಇಓ ತಾಕೀತು ಮಾಡಿದರು.

ಕೊಳ್ಳುರ ಗ್ರಾಮದಲ್ಲಿನ ತೆರೆದ ಬಾವಿಯಲ್ಲಿ ಬಿದಿನಾಯಿ ಬಿದ್ದು ಸಾವನಪ್ಪಿತ್ತು ಅದನ್ನು ಬಾವಿಯಿಂದ ತೆಗೆಯುವಂತೆ ಪಂಚಾಯತ ಅಭಿವೃದ್ಧಿ ಅಧಿಕಾರಿಗಳಿಗೆ ಏಂಟು ಬಾರಿ ತಿಳಿಸಿದರು ಬಾವಿಯಿಂದ ನಾಯಿಯನ್ನು ತೆಗೆದಿಲ್ಲ.ಬದಲಿಗೆ ನಾವೇ ಬಡಾವಣೆಯ ನಿವಾಸಿಗಳು ತೆಗೆದ ಬಳಿಕ ನಮ್ಮೂರಿನಲ್ಲಿರುವ ಒಬ್ಬ ವ್ಯಕ್ತಿ ಫೆÇೀಟೋ ಇಳಿಸಿಕೊಂಡು ಸತ್ತಿರುವ ನಾಯಿ ಹೆಸರಿನಲ್ಲಿಯೂ ಹಣವನ್ನು ಲಪ್ಟಾಯಿಸಿದ್ದಾರೆಂದು ಆರೋಪಿಸಿದರು.

ಉದ್ಯೋಗ ಖಾತ್ರಿ ಯೋಜನೆಯಲ್ಲಿ ಪಂಚಾಯತ ವ್ಯಾಪ್ತಿಯಲ್ಲಿ ಭಾರಿ ಗೋಲ್ಮಾಲ ನಡೆಯುತ್ತಿದೆ.ರೈತರು ತಮ್ಮ ಹೊಲಗಳಲ್ಲಿ ತೆರೆದ ಬಾವಿ ಅಗೆದರೆ ಅದಕ್ಕೆ ಹಣವನ್ನು ನೀಡುವುದಿಲ್ಲ.ಮೂರು ಫೀಟ್ ಅಗೆದ ಬಾವಿಯ ಸಂಪೂರ್ಣ ಹಣವನ್ನು ಅಧಿಕಾರಿಗಳು ಖಾತ್ರಿ ಯೋಜನೆಯಲ್ಲಿ ನೀಡಿದ್ದಾರೆಂದು ತಿಳಿಸಿದರು.

ನಮ್ಮ ಮನವಿಗೆ ಸ್ಪಂದನೆ ಮಾಡಲು ಮುಂದಾಗದೆ ಇರುವ ಪಂಚಾಯತ ಅಭಿವೃದ್ಧಿ ಅಧಿಕಾರಿಗಳನ್ನು ಬೇರೆ ಕಡೆಗೆ ವರ್ಗಾವಣೆ ಮಾಡಿ ಇಲ್ಲವಾದಲ್ಲಿ ತಾಲೂಕು ಪಂಚಾಯತ ಕಚೇರಿಯ ಮುಂದೆ ಉಗ್ರವಾದ ರೀತಿಯಲ್ಲಿ ಹೋರಾಟ ಮಾಡಲಾಗುತ್ತದೆ ಎಂದು ಏಚ್ಚರಿಕೆ ನೀಡಿದರು.

ಪಂಚಾಯತನಲ್ಲಿ ಹಿಂದೆ ನಡೆದ ತಪ್ಪುಗಳನ್ನು ಇನ್ನು ಮುಂದೆ ನಡೆಯದಂತೆ ನೋಡಿಕೊಳ್ಳಲು ನಮ್ಮ ಅಧಿಕಾರಿಗಳಿಗೆ ಸೂಚನೆ ನೀಡುತ್ತೆನೆ ಎಲ್ಲಾ ಸಮಸ್ಯೆಗಳಿಗೂ ಮೂರೆ ದಿನದಲ್ಲಿ ಪರಿಹಾರ ನೀಡುತ್ತೆನೆಂದು ತಾಪಂ ಇಓ ಪ್ರತಿಭಟನಕಾರರಿಗೆ ತಿಳಿಸಿದ್ದರಿಂದ ಗ್ರಾಮಸ್ಥರು ಪ್ರತಿಭಟನೆ ಹಿಂದೆ ಪಡೆದುಕೊಂಡರು.

ಈ ಸಂಧರ್ಭದಲ್ಲಿ ಬಾಲಾಜಿ ಶೆಟ್ಟೆ,ನರಸಪ್ಪ ಕೊಳ್ಳುರ್,ಅನೀಲಶರಣಪ್ಪ,ರವಿ ಕೊಳ್ಳುರ,ಧನರಾಜ ವಡೇಯರ,ನಾಗನಾಥ ನರವಾ,ಎಮ್ ಡಿ ಇಸ್ಮಾಯಿಲ್,ರಫೀಕ ಸೇರಿದಂತೆ ಇನ್ನಿತರರಿದ್ದರು.


ತುರ್ತು ಸಭೆ :

ಪಂಚಾಯತ ಕಚೇರಿಯ ಮುಂದೆ ಕೊಳ್ಳುರ ಗ್ರಾಮಸ್ಥರು ಪ್ರತಿಭಟನೆ ನಡೆಸುತ್ತಿರುವ ಹಿನ್ನಲೆಯಲ್ಲಿ ಅಧಿಕಾರಿಗಳು ವ್ಯಕ್ತಿ ಹಾಗೂ ಪಕ್ಷದ ನಿಷ್ಠರಾಗಿ ಕೆಲಸ ಮಾಡಬೇಡಿ ಪಂಚಾಯತ ವ್ಯಾಪ್ತಿಯಲ್ಲಿನ ಹಿರಿಯರಿಂದ ಸಣ್ಣ ಮಕ್ಕಳು ತಿಳಿಸಿದರು ಸಾರ್ವಜನಿಕರ ಕೆಲಸ ಮಾಡಲು ಉತ್ಸಾಹದಿಂದ ಮುಂದಾಗಿ ಇಲ್ಲವಾದಲ್ಲಿ ಎಕಲಾರ ಪಂಚಾಯತನಿಂದ ಬೇರೆ ಕಡೆಗೆ ನಾನೇ ವರ್ಗಾವಣೆ ಮಾಡುತ್ತೆನೆಂದು ತಾಪಂ ಇಒ ಕಿರಣ ಪಾಟೀಲ ಖಡಕ್ ಏಚ್ಚರಿಕೆ ಸಂದೇಶ ನೀಡಿದರು. ಕುಡಿಯುವ ನೀರಿನ ಸಮಸ್ಯೆ ಉಲ್ಭಣವಾಗುತ್ತಿದೆ.ಪಂಚಾಯತ ವ್ಯಾಪ್ತಿಯಲ್ಲಿ ಕೆಲಸ ಮಾಡುವ ಪ್ರತಿಯೊಬ್ಬ ಸಿಬ್ಬಂಧಿಯೂ ಸೇವಾ ಅವಧಿಯಲ್ಲಿ ಕಡ್ಡಾಯವಾಗಿ ಸಾರ್ವಜನಿಕರ ಕರೆಗಳನ್ನು ಸ್ವಿಕಾರ ಮಾಡಿ ಸ್ಪಂದಿಸಿ ಇಲ್ಲವಾದಲ್ಲಿ ಶಿಸ್ತುಕ್ರಮ ಜರುಗಿಸಲಾಗುತ್ತದೆ ಎಂದು ಏಚ್ಚರಿಕೆ ಸಂದೇಶ ನೀಡಿದರು.