ಇಂಡಿ :ಅ.೬: ಹಲವಾರು ವರ್ಷಗಳ ಬೇಡಿಕೆಯಾದ ಡಾಂಬರಿ ರಸ್ತೆ ಮುಂಜೂರಾಗಿದ್ದು ಸಂತೋಷದ ಸಂಗತಿ ಜೆ ಜೆ ವಸತಿ ಶಾಲೆಯಿಂದ ಭಾರಿ ಹಳ್ಳದ ಶಾಲೆಯವರೆಗೆ ಹೋಗಲು ವಿದ್ಯರ್ಥಿಗಳು ತುಂಬ ಪರದಾಡುವಂತ ಸ್ಥಿತಿ ಇತ್ತು ನಮ್ಮ ಸ್ಪಂದನೆಗೆ ಸರಕಾರದಿಂದ ಶಾಸಕ ವಿಠ್ಠಲ ಕಟಕದೊಂಡ ಡಾ ಂಬರಿಕರಣ ರಸ್ತೆ ಮುಂಜೂರ ಮಾಡಿದ್ದಾರೆ.ಆದರೆ ಇದಕ್ಕೆ ಮಹಾದೇವ ದಾನಪ್ಪಾ ಸಂಝ ಎಂಬವರು ತಕರಾರು ನೀಡಿದ್ದಾರೆ ಎಂದು ಹಿಂಗಣಿ ಗ್ರಾಮಸ್ಥರು ಹಾಗೂ ಕರವೇ ಅಧ್ಯಕ್ಷ ಬಾಳು ಮುಳಜಿ ಪುರಸಭೆ ಸದಸ್ಯ ಅನಿಲಗೌಡ ಬಿರಾದಾರ ಅವರು ಕಂದಾಯ ಉಪ ವಿಭಾಗಾಧಿಕಾರಿ ಅನುರಾಧಾ ವಸ್ತ್ರದ ವರಿಗೆ ಮನವಿ ಸಲ್ಲಿಸಿದ್ದಾರೆ.ಸುಮಾರು ೨೫೦ಕುಟುಂಬ ಗಳ ಮಕ್ಕಳು ಶಾಲೆಗೆ ಹೋಗಲು ಅತ್ಯಂತ ಅನುಕೂಲ ವಾಗಿದೆ. ರಸ್ತೆ ತಕರಾರು ಮಾಡಿ ನಿಲ್ಲಿಸಿದರೆ ಮಕ್ಕಳ ಶಿಕ್ಷಣದ ಮೇಲೆ ಕೆಟ್ಟ ಪರಿಣಾಮ ಬೀಳುವ ಸಾಧ್ಯತೆ ಇದೆ. ತಾವು ಸ್ಥಳಕ್ಕೆ ಬಂದು ಪರಿಶೀಲಿಸಿ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಮನವಿಯಲ್ಲಿ ತಿಳಿಸಿದ್ದಾರೆ.ವಿಳಂಬ ವಾದರೆ ಮುಂದಿನ ದಿನಗಳಲ್ಲಿ ಗ್ರಾಮಸ್ಥರಿಂದ ಹಾಗೂ ಕರವೇ ಸಂಘಟನೆಯಿAದ ರಸ್ತೆ ತಡೆದು ಪ್ರತಿಭಟನೆಗೆ ಅವಕಾಶ ನೀಡಬಾರದು ಎಂದು ತಿಳಿಸಿದರು. ಕರವೇ ಅಧ್ಯಕ್ಷ ಬಾಳು ಮುಳಜಿ, ಪುರೆಸಭೆ ಸದಸ್ಯ ಅನಿಲಗೌಡ ಬಿರಾದಾರ, ದರ್ಮರಾಜ ಸಾಲೋಟಗಿ, ಮಹೇಶ್ ಹೂಗಾರ, ಬಸವರಾಜ ಪ್ಯಾಟಿ, ಆದಿತ್ಯ ಸಿಂಧೆ, ಮಲ್ಲಿಕಾರ್ಜುನ ಮಣ್ಣೂರ್, ಶ್ರೀಸೈಲ್ ಬಸವವಾದಿ, ಪರಸು ಗಾಯಕವಾಡ, ಚನಗೊಂಡ ಪ್ಯಾಟಿ, ಶ್ರೀಕಾಂತ ಬಡಿಗೇರ, ಭಾಗೇಶ್ ಹಡಪದ, ಕೃಷ್ಣ ಸಲಗೊಂಡ, ಇಲ್ಲಯಿ ಜಮಾದಾರ, ರಾಜು ಜಮಾದಾರ, ಸೇಹಲ್ ಜಮಾದಾರ, ಸೇರಿದಂತೆ ಅನೇಕರು ಭಾಗಿಯಾಗಿದ್ದರು.





















