Home ಜಿಲ್ಲೆ ಬೆಂಗಳೂರು ಗ್ರಾಮ ದೇವತೆ ಉತ್ಸವ ಅದ್ದೂರಿ ಮೆರವಣಿಗೆ

ಗ್ರಾಮ ದೇವತೆ ಉತ್ಸವ ಅದ್ದೂರಿ ಮೆರವಣಿಗೆ

ಮಾಲೂರು ಮೇ ೪- ಬೆಂಗಳೂರಿನ ಗ್ರಾಮ ದೇವತೆ ಅಣ್ಣಮ್ಮ ದೇವಿ ಉತ್ಸವ ಮೂರ್ತಿ ಕೋಮುಲ್ ನಿರ್ದೇಶಕ ಶ್ರೀನಿವಾಸ ಅವರು ಬೆಂಗಳೂರಿನಿಂದ ಕರೆ ತಂದು ನಗರದ ಶ್ರೀನಿವಾಸ್ ನಿವಾಸವಿರುವ ಬಡಾವಣೆಯಲ್ಲಿ ಮೆರವಣಿಗೆ ನಡೆಸಿ ಮನೆಯ ಆವರಣದಲ್ಲಿ ಕುಳ್ಳಾರಿಸಿ ವಿಶೇಷ ಪೂಜೆಗಳನ್ನು ಸಲ್ಲಿಸಿದರು


ಬೆಂಗಳೂರು ಗ್ರಾಮದೇವತೆ ಅಣ್ಣಮ್ಮ ದೇವಿಯ ಉತ್ಸವ ಮೂರ್ತಿ ಬೆಂಗಳೂರಿನಿಂದ ತಂದು ತಮಟೆ ವಾದ್ಯ ದೊಂದಿಗೆ ಮೆರವಣಿಗೆಯ ಮೂಲಕ ಕೋಮುಲ್ ನಿರ್ದೇಶಕ ಶ್ರೀನಿವಾಸ ಅವರ ನಿವಾಸದ ಬಳಿ ತಂದು ವಿಶೇಷ ಪೂಜೆಗಳನ್ನು ಸಲ್ಲಿಸಿ ಭಾನುವಾರ ದೇವಿಗೆ ಆಭರಣ ಸಮೇತ ವಿಶೇಷ ರಾಜಮಾತೆಯ ಅಲಂಕಾರ ಮಾಡಿ ಅವರ ಹಿತೈಷಿಗಳು ಕಾಂಗ್ರೆಸ್ ಪಕ್ಷದ ಮುಖಂಡರು ಕಾರ್ಯಕರ್ತರಿಗೆ ಭಕ್ತಾದಿಗಳಿಗೆ ಅನ್ನ ಸಂತರ್ಪಣ ಮಾಡಿದರು


ಶಾಸಕ ಕೆ ವೈ ನಂಜೇಗೌಡ ಮಾಸ್ತಿ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ರಾಮಮೂರ್ತಿ ಪಿ ಎಲ್ ಡಿ ಬ್ಯಾಂಕ್ ಅಧ್ಯಕ್ಷ ಬಿ ಆರ್ ಶ್ರೀನಿವಾಸ್ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಆಂಜಿನಪ್ಪ ಸರ್ಕಾರಿ ನೌಕರ ಸಂಘದ ಅಧ್ಯಕ್ಷ ವಿ ಮುನೇಗೌಡ ತಾಪಂ ಇ ಒ ವಿ ಕೃಷ್ಣಪ್ಪ ಸೇರಿದಂತೆ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಮುಖಂಡರು ಆಗಮಿಸಿ ಅಣ್ಣಮ್ಮ ದೇವಿಗೆ ವಿಶೇಷ ಪೂಜೆ ಸಲ್ಲಿಸಿ ತೀರ್ಥ ಪ್ರಸಾದ ಸ್ವೀಕರಿಸಿದರು