ಸಡಗರ ಸಂಭ್ರಮದ ಗ್ರಾಮದೇವತೆ ದ್ಯಾವಮ್ಮ ಜಾತ್ರೆ

ಜೇವರ್ಗಿ: ಡಿ.20:ತಾಲೂಕಿನ ಸುಕ್ಷೇತ್ರ ದೆಸಣಗಿ ಗ್ರಾಮದಲ್ಲಿ ಗ್ರಾಮದೇವತೆ ಜಾತ್ರಾ ಮಹೋತ್ಸವ ಅದ್ದೂರಿಯಾಗಿ ನಡೆಯಿತು. ಗುರುವಾರ ದಿನ ರಾತ್ರಿ 11:00 ಗಂಟೆಗೆ ತಾಯಿಯು ಗಂಗೆ ಸ್ಥಾನ ಮುಗಿಸಿಕೊಂಡು ಬಂದು ನಡು ಊರಲ್ಲಿ ನೆಲೆಸಿದ್ದಾರೆ. ಶುಕ್ರವಾರದಂದು ಊರಿನ ಹಾಗೂ ಸುತ್ತಮುತ್ತಲಿನ ಭಕ್ತರು ಬಂದು ದೇವಿಯ ದರ್ಶನ ಪಡೆದರು. ಹರಕೆಗಳು ತೀರಿಸಿದರು. ಅಪಾರ ಭಕ್ತರು ಸೇರಿ ನಾಲ್ಕು ಗಂಟೆಗೆ ದೇವಿಯ ರಥೋತ್ಸವ ನಡೆಸಿದರು. ಸಂಜೆ 6 ಗಂಟೆಗೆ ಅಮೋಘಸಿದ್ದೇಶ್ವರ ದೇವಸ್ಥಾನಕ್ಕೆ ಭೇಟಿ ಮಾಡಿಕೊಂಡು ತಾಯಿಯು ಹಸನ್ಮುಖಿಯಾಗಿ ಮರಳಿ ದೇವಸ್ಥಾನದಲ್ಲಿ ನೆಲೆಸಿದ್ದಾಳೆ.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಶಿವಗೊಂಡಪ ಗೌಡ ಮಾಲಿ ಪಾಟೀಲ್, ಸಿದ್ದಯ್ಯ ಹಿರೇಮಠ, ಇರ್ಫಾನ್, ನಾಡಗೌಡ, ಗ್ರಾಮ ಪಂಚಾಯತಿ ಅಧ್ಯಕ್ಷರು ರಂಜಣಗಿ ಶರಣಗೌಡ ಮಾಲಿ ಪಾಟೀಲ್ ನಾಡಗೌಡ ಪೆÇಲೀಸ್ ಪಾಟೀಲ, ಗುರಣಗೌಡ ಮಾಲಿಪಾಟೀಲ್, ಶಿವರಾಯ ಗೌಡ ಮಾಲಿ ಪಾಟೀಲ, ಮಹಾದೇವಪ್ಪ ಮಾವುರ, ಸಿಕಂದರ್ ಮುಲ್ಲಾ, ಸಿದ್ದು ಜಮಾದಾರ್ ಹಾಗೂ ಊರಿನ ಗುರು ಹಿರಿಯರು ಹಾಗೂ ಸುತ್ತಮುತ್ತಲಿನ ಸದ್ಭಕ್ತರು ಈ ರಥೋತ್ಸವದಲ್ಲಿ ಭಾಗಿಯಾಗಿದ್ದರು.