ಹಳ್ಳಿಯ ಸೊಗಡು ಕಾರ್ಯಕ್ರಮ

ನವಲಗುಂದ,ಜ31: ಹಳ್ಳಿ ಸೊಗಡು’ ಎಂಬುದು ಗ್ರಾಮೀಣ ಸಂಸ್ಕೃತಿ, ಕಲೆ, ಆಹಾರ ಮತ್ತು ಜನಪದ ಸಂಪ್ರದಾಯಗಳನ್ನು ಎತ್ತಿಹಿಡಿಯುವ ಒಂದು ಸಾಂಸ್ಕೃತಿಕ ಕಾರ್ಯಕ್ರಮವಾಗಿದೆ ಎಂದು ಶ್ರೀ ಸಿದ್ಧವೀರ ಸ್ವಾಮಿಗಳು ಅಭಿಪ್ರಾಯ ವ್ಯಕ್ತಪಡಿಸಿದರು.

ಪಟ್ಟಣದ ವಿದ್ಯಾಜ್ಯೋತಿ ಪೂರ್ವ ಪ್ರಾಥಮಿಕ ಹಾಗೂ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಹಳ್ಳಿಯ ಸೊಗಡು ಹಾಗೂ ಪ್ರಶಸ್ತಿ ವಿತರಣಾ ಕಾರ್ಯಕ್ರಮದ ಸಾನಿದ್ಯ ವಹಿಸಿ ಮಾತನಾಡಿದ ಅವರು ಇಂದಿನ ಆಧುನಿಕ ಯುಗದಲ್ಲಿ ಭಾರತಿಯ ಸಂಸ್ಕೃತಿ ಮರೆಯಾಗುತ್ತಿರುವುದು ಸೋಜಿಗದ ಸಂಗತಿ, ಈ ಶಾಲೆಯವರು ಹಮ್ಮಿಕೊಂಡಿರುವಂತಹ ಈ ಕಾರ್ಯಕ್ರಮ ಅರ್ಥ ಪೂರ್ಣವಾಗಿದೆ ಎಂದರು.

ಸಮಾಜ ಸೇವಕ ಮಾಬುಸಾಬ ಯರಗುಪ್ಪಿ ಮಾತನಾಡಿ ಇಂತಹ ಕಾರ್ಯಕ್ರಮ ಸಾಂಸ್ಕೃತಿಕ ಸುಗ್ಗಿ ಸಂಭ್ರಮದ ಮೂಲಕ ಗ್ರಾಮೀಣ ಜೀವನದ ಸೊಗಡನ್ನು ಅನಾವರಣಗೊಳಿಸುತ್ತವೆ, ಇದರಲ್ಲಿ ಹಳೆಯ ಕಾಲದ ಕೃಷಿ ಉಪಕರಣಗಳು ಮತ್ತು ವಸ್ತುಗಳ ಪ್ರದರ್ಶನದಿಂದ ಇಂದಿನ ಪೀಳಿಗೆಗೆ ಗ್ರಾಮೀಣ ಸಂಸ್ಕೃತಿಯ ಪರಿಚಯ ಮಾಡಿಕೊಡುವುದು ಮತ್ತು ಹಳ್ಳಿಯ ಬದುಕಿನ ಮಹತ್ವವನ್ನು ತಿಳಿಸುವುದಾಗಿದೆ ಎಂದರು.

ಈ ಸಂದರ್ಭದಲ್ಲಿ ಸರಸ್ವತಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಬಿ.ಜಿ ಬಿಲ್ ಶಿವಣ್ಣವರ, ಸಂಸ್ಥಾಪಕ ಕಾರ್ಯದರ್ಶಿ ಬಿ.ಎಸ್ ಕುರುಬರ, ಎಂ. ಎಸ್ ಬಾವಿಹಾಳ, ನಿಂಗಪ್ಪ ಕುರಬರ, ಮಲ್ಲಿಕಾರ್ಜುನ ಚೌಡಣ್ಣವರ, ಅಡಿವೆಪ್ಪ ಶಿರಸಂಗಿ, ಮಹಮ್ಮದಲಿ ಮಿರ್ಜಿ, ಎನ್ ವಾಯ್ ಹೊಂಗಲ, ಮಲ್ಲಿಕಾರ್ಜುನಸ್ವಾಮಿ ಮಠಪತಿ, ಪ್ರಶಾಂತ ಯರಗಂಬಳಿ, ಶಾಲೆಯ ಮುಖ್ಯ ಶಿಕ್ಷಕಿ ನೀಲಾ ಕುರುಬರ ಸಹ ಶಿಕ್ಷಕ ಅನಿಲ ಕೊಣ್ಣೂರ, ಸಹ ಶಿಕ್ಷಕಿ ಮಂಜುಳಾ ಲಿಂಗದಾಳ, ಭುವನೇಶ್ವರಿ ಇನಾಮತಿ, ಫರ್ಜಾನ ನದಾಫ್, ಸಂಗೀತಾ ಮಂಟೂರ, ವಿನೋದಾ ಕುರಟ್ಟಿ, ಮಹೇಶ ಲಕ್ಕುಂಡಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.