
ಗುರುಮಠಕಲ್: ತಾಲ್ಲೂಕಿನ ಕಾಳಬೆಳಗುಂದಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಕಣೆಕಲ್ ಗ್ರಾಮಕ್ಕೆ ಭೇಟಿ ನೀಡಿ, ಕೂಲಿ ಕಾರ್ಮಿಕರಿಗೆ ಹಾಗೂ ಸಾರ್ವಜನಿಕರಿಗೆ ವಿಬಿ-ಜಿ ರಾಮ್ ಜಿ ಯೋಜನೆಯ ಕುರಿತು ಈ ಕೆಳಕಂಡ ಅಂಶಗಳAತೆ ಮಾಹಿತಿ ನೀಡಿ ಅರಿವು ಮೂಡಿಸಲಾಯಿತು. ವಿಕಸಿತ ಭಾರತ ಗ್ರಾಮೀಣ ಜೀವನೋಪಾಯ ಅಜೀವಿಕ ಮಿಷನ್ ಯೋಜನೆಯ ಅನುಷ್ಠಾನದ ಉದ್ದೇಶಗಳು
ದಿನಗೂಲಿ ಮೊತ್ತ ?೩೭೦/- ರಿಂದ ?೩೮೨/- ರೂ. ಗೆ ಹೆಚ್ಚಳ ಮಾಡಲಾಗಿದೆ. ವಾರ್ಷಿಕ ಮಾನವ ದಿನಗಳು ೧೦೦ ರಿಂದ ೧೨೫ ದಿನಗಳಿಗೆ ಹೆಚ್ಚಳ. ವಾರ್ಷಿಕ ಒಂದು ಗ್ರಾಮೀಣ್ ರೋಜ್ ಗಾರ್ ಗ್ಯಾರಂಟಿ ಕಾರ್ಡ್ ಗೆ ?೪೭,೭೫೦ ರೂ ಗಳಿಸಲು ಅವಕಾಶ ಒದಗಿಸಲಾಗಿದೆ. ೬೦ ದಿನಗಳು ಕೃಷಿ ಚಟುವಟಿಕೆಗೆ ಯೋಜನೆಯ ಕೂಲಿಕೆಲಸದಿಂದ ವಿರಾಮ,
ಎನ್ ಎಮ್ ಎಮ್ ಎಸ್ ಹಾಜರಾತಿ ಎರಡು ಬಾರಿ ಕಡ್ಡಾಯ, ನಿರುದ್ಯೋಗ ಭತ್ಯೆ, ನೂತನ ಯೋಜನೆಯಡಿ ೩೧೮ ಕಾಮಗಾರಿಗಳಿಗೆ ಅವಕಾಶ ಇದೆ. ಸೇರಿದಂತೆ ಇನ್ನೂ ಮುಂತಾದ ವಿಷಯಗಳ ಕುರಿತು ಗ್ರಾಮಸ್ಥರಿಗೆ ತಿಳಿಸಲಾಯಿತು. ಈ ಸಂದರ್ಭದಲ್ಲಿ ಐಇಸಿ ತಾಲೂಕು ಸಂಯೋಜಕ ರಾಘವೇಂದ್ರ, ಬಿ ಎಫ್ ಟಿ ಬಸಲಿಂಗಪ್ಪ, ಮೇಟಿ ಸತೀಶ ಇದ್ದರು.






























